ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದಿಯೋರಾಗೆ ಬೆಂಬಲ ನೀಡಿದ ಅಂಬಾನಿ

ಮುಂಬೈ, ಏಪ್ರಿಲ್ 18: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಒಡನಾಟದ ಕಾರಣದಿಂದ ರಿಲಯನ್ಸ್ ಸಮೂಹದ ಮಾಲೀಕ ಅನಿಲ್ ಅಂಬಾನಿ ಕಾಂಗ್ರೆಸ್ಸಿಗರ ನಿರಂತರ ಟೀಕೆಗೆ ಗುರಿಯಾಗುತ್ತಿದ್ದರೆ, ಅತ್ತ ಅವರ ಅಣ್ಣ ಮುಕೇಶ್ ಅಂಬಾನಿ ಮುಂಬೈ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದಿಯೋರಾ ಪರ ಬ್ಯಾಟ್ ಬೀಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇದರಿಂದ ತಮ್ಮ ಅನಿಲ್ ಅಂಬಾನಿ ವಿರುದ್ಧ ಮುಕೇಶ್ ಅಂಬಾನಿ ನಿಲುವು ಪ್ರಕಟವಾದಂತಾಗಿದೆ.

ವಿಡಿಯೋ ಒಂದರಲ್ಲಿ ಮಿಲಿಂದ್ ದಿಯೋರಾ ಅವರಿಗೆ ಬೆಂಬಲ ವ್ಯಕ್ತಪಡಿಸಿ ಮುಕೇಶ್ ಹೇಳಿಕೆ ನೀಡಿದ್ದಾರೆ. ಈ ವಿಡಿಯೋವನ್ನು ಮಿಲಿಂದ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Lok Sabha Elections 2019 reliance chairman mukesh ambani endorsed Congress south mumbai milind deora

'ಮಿಲಿಂದ್ ದಕ್ಷಿಣ ಮುಂಬೈಗೆ ಸೂಕ್ತ ವ್ಯಕ್ತಿ. ದಕ್ಷಿಣ ಮುಂಬೈ ಕ್ಷೇತ್ರದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಪರಿಸರ ವ್ಯವಸ್ಥೆ ಕುರಿತು ಅವರಿಗೆ ಆಳವಾದ ಜ್ಞಾನವಿದೆ' ಎಂದು ಮಿಲಿಂದ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮುಕೇಶ್ ಹೇಳಿದ್ದಾರೆ.

'ಸಣ್ಣ ಅಂಗಡಿ ನಡೆಸುವವರಿಂದ ದೊಡ್ಡ ಕೈಗಾರಿಕೋದ್ಯಮಿಗಳವರೆಗೆ- ಎಲ್ಲರಿಗೂ ದಕ್ಷಿಣ ಮುಂಬೈ ಎಂದರೆ ಉದ್ಯಮ. ನಾವು ಮುಂಬೈಗೆ ಉದ್ಯಮವನ್ನು ಮರಳಿ ತರುವುದು ಮತ್ತು ನಮ್ಮ ಯುವಕರಿಗೆ ಉದ್ಯೋಗ ಸೃಷ್ಟಿಯಾಗುವಂತೆ ಮಾಡುವುದು ನಮ್ಮ ಮೊದಲ ಆದ್ಯತೆ' ಎಂದು ಮಿಲಿಂದ್ ದಿಯೋರಾ ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ, ರಾಜಕೀಯ ಅಭ್ಯರ್ಥಿಯೊಬ್ಬರ ಪರ ಪ್ರಚಾರ ನಡೆಸಿರುವುದು ಅಪರೂಪವಾಗಿದೆ.

'ಮುಕೇಶ್ ಅಂಬಾನಿ ಅಥವಾ ಉದಯ್ ಕೋಟಕ್ ಅವರ ಬೆಂಬಲ ಬೇರೆಯವರಿಗಿಂತ ಹೆಚ್ಚು ಗಮನ ಸೆಳೆಯುತ್ತದೆ ಎನ್ನುವುದು ನನಗೆ ತಿಳಿದಿದೆ. ಆದರೆ, ನಾನು ಹೆಮ್ಮೆ ಪಟ್ಟುಕೊಳ್ಳುತ್ತೇನೆ. ಹಾಗೆಯೇ ಪಾನ್‌ವಾಲಾಗಳು, ಸಣ್ಣ ವ್ಯಾಪಾರಿಗಳಿಂದಲೂ ಬೆಂಬಲ ದೊರಕುತ್ತಿರುವುದಕ್ಕೆ ಅಷ್ಟೇ ಹೆಮ್ಮೆ ಪಟ್ಟುಕೊಳ್ಳುತ್ತೇನೆ. ದಕ್ಷಿಣ ಮುಂಬೈಗೆ ನಾನು ಏಕೆ ಸೂಕ್ತ ವ್ಯಕ್ತಿ ಎಂದು ಅವರಿಗೆ ಏಕೆ ಅನಿಸಿದೆ ಎಂಬ ಪ್ರಶ್ನೆಯನ್ನು ಅವರಿಗೇ ಕೇಳಬೇಕಿದೆ' ಎಂದು ಮಿಲಿಂದ್ ಹೇಳಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಪರ ಮುಕೇಶ್ ಅಂಬಾನಿ ಪ್ರಚಾರ ಮಾಡಿರುವುದು ಅನೇಕರ ಹುಬ್ಬೇರಿಸಿದೆ. ಮೋದಿ ಸರ್ಕಾರ ಬಂಡವಾಳಶಾಹಿಗಳ ಪರವಾಗಿದೆ. ಅನಿಲ್ ಅಂಬಾನಿಗೆ ನೆರವಾಗಲು ಮೋದಿ ಸರ್ಕಾರ ಭ್ರಷ್ಟಾಚಾರ ನಡೆಸಿದೆ ಎಂಬ ಆರೋಪಗಳನ್ನು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ನಿರಂತರವಾಗಿ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+