ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ ಸ್ಟಾರ್ ನಟಿ ಇಶಾ
ಮುಂಬೈ, ಜನವರಿ 27: ಬಹುಭಾಷಾ ನಟಿ ಇಶಾ ಕೊಪ್ಪಿಕರ್ ಅವರು ಲೋಕಸಭೆ ಚುನಾವಣೆಗೂ ಮುನ್ನ ಭಾರತೀಯ ಜನತಾ ಪಕ್ಷ (ಬಿಜೆಪಿ) ವನ್ನು ಅಧಿಕೃತವಾಗಿ ಸೇರಿದ್ದಾರೆ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ ಇಶಾ ಅವರಿಗೆ ಬಿಜೆಪಿಯ ಮಹಿಳಾ ಸಾರಿಗೆ ವಿಭಾಗದ ಕಾರ್ಯಕಾರಿ ಅಧ್ಯಕ್ಷೆ ಸ್ಥಾನ ನೀಡಲಾಗಿದೆ.
ಕನ್ನಡದಲ್ಲಿ ವಿಷ್ಣುವರ್ಧನ ಜತೆ ಸೂರ್ಯವಂಶ, ರವಿಚಂದ್ರನ್ ಜತೆ ಓ ನನ್ನ ನಲ್ಲೆ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಶಿವರಾಜ್ ಕುಮಾರ್ ಅವರ ಹೊಸ ಚಿತ್ರ ಕವಚದಲ್ಲಿ ಅಭಿನಯಿಸಿದ್ದಾರೆ. ಇಶಾ ಅವರ ಪೂರ್ವಿಕರು ಕರ್ನಾಟಕ ಮೂಲದವರು.

2002ರಲ್ಲಿ ರಾಮ್ ಗೋಪಾಲ್ ವರ್ಮಾ ಅವರ ಕಂಪನಿ ಚಿತ್ರದ ಖಲಾಸ್ ಹಾಡಿನ ಮೂಲಕ ಪಡ್ಡೆಗಳಿಗೆ ಕಿಚ್ಚು ಹಚ್ಚಿದ ಇಶಾ ಅವರು ತಮಿಳು, ತೆಲುಗು, ಮರಾಠಿ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.
Mumbai: Actor Isha Koppikar joins Bharatiya Janata Party (BJP) in the presence of Union Transport Minister Nitin Gadkari. #Maharashtra pic.twitter.com/XLETYOcppT
— ANI (@ANI) January 27, 2019
'ಚುನಾವಣೆಯಲ್ಲಿ ಚಾಕಲೋಟ್ ಮುಖದವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ' ಎಂದು ಬಿಜೆಪಿ ಮುಖಂಡ ಕೈಲಾಶ್ ವಿಜಯ್ ವರ್ಗಿಯಾ ಅವರು ಹೇಳಿಕೆ ನೀಡಿದ ಮರುದಿನವೇ ಚಿತ್ರನಟಿಯನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿದೆ.












Click it and Unblock the Notifications