ಬಾಳಾ ಠಾಕ್ರೆ ಕೊಲೆಗೆ ಸಂಚು ರೂಪಿಸಿದ್ದ ಲಷ್ಕರ್!

Posted By:
Subscribe to Oneindia Kannada

ಮುಂಬೈ, ಮಾರ್ಚ್ 24: ಮುಂಬೈ ದಾಳಿ ರೂವಾರಿ ಡೇವಿಡ್ ಹೆಡ್ಲಿ ವಿಚಾರಣೆ ಮುಂಬೈ ಕೋರ್ಟಿನಲ್ಲಿ ಮುಂದುವರೆದಿದೆ. ಈ ನಡುವೆ ಸ್ಫೋಟಕ ಸತ್ಯವನ್ನು ಹೊರಹಾಕಿರುವ ಹೆಡ್ಲಿ, ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಅವರ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂದಿದ್ದಾರೆ.

ನನಗೆ ಈ ಕೊಲೆ ಸಂಚಿನ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿಲ್ಲ. ಬಾಳಾ ಠಾಕ್ರೆ ಹತ್ಯೆಗೆ ಸಂಚು ರೂಪಿಸಿದ್ದ ವ್ಯಕ್ತಿ ಬಂಧನವಾಗಿತ್ತು.

Lashkar-e-Taiba attempted to kill Bal Thackeray: David Headley

ಆದರೆ, ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುವಲ್ಲಿ ಆತ ಯಶಸ್ವಿಯಾಗಿದ್ದ ಎಂದು ಹೆಡ್ಲಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ನಾಲ್ಕು ದಿನಗಳ ಕಾಲ ವಿಚಾರಣೆ ನಡೆಯಲಿದೆ. ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಂ ಹಾಗೂ ಮುಂಬೈ ಕ್ರೖೆಂ ಬ್ರಾಂಚ್ ಮುಖ್ಯಸ್ಥ ಅತುಲ್ ಕುಲಕರ್ಣಿ ಉಪಸ್ಥಿತಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
David Headley who is being cross examined at a court in Mumbai today said that he believes that an attempt was made to kill the Shiv Sena Chief, Bal Thackeray. Headley however said immediately that he heard about it, but had no first hand knowledge of the same.
Please Wait while comments are loading...