ರೂಪದರ್ಶಿ ಕೃತಿಕಾ ಚೌಧರಿ ಸಾವಿನ ರಹಸ್ಯ ಬಹಿರಂಗ

Posted By:
Subscribe to Oneindia Kannada

ಮುಂಬೈ, ಜುಲೈ 12:ಕಳೆದ ತಿಂಗಳು ನಿಗೂಢವಾಗಿ ಹತ್ಯೆಯಾಗಿದ್ದ ನಟಿ ಹಾಗೂ ಮಾಡೆಲ್ ಕೃತಿಕಾ ಚೌಧರಿ ಸಾವಿನ ರಹಸ್ಯ ಬಹಿರಂಗವಾಗಿದೆ. ಡ್ರಗ್ ಮಾಫಿಯಾಕ್ಕೆ ಈಕೆ ಬಲಿಯಾಗಿದ್ದು, ಕೇವಲ 6,000 ರು ಡೀಲ್ ಇದಾಗಿತ್ತು ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

ಆಕೆಯನ್ನು ಇಬ್ಬರು ಡ್ರಗ್ ಡೀಲರ್ ಗಳು ಹತ್ಯೆ ಮಾಡಿರುವ ಸಂಗತಿ ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳನ್ನು ಬಂಧಿಸಿರುವ ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Kritika Chaudhary Killed by Drug Dealer Over Rs 6,000 ː Mumbai Police

ಶಕೀಲ್ ನಸೀಂ ಖಾನ್ ಹಾಗೂ ಬಾದ್ ಶಹಾ ಬಸುದಾಸ್ ಮಕ್ಮಲ್ ಲಾಲ್ ಬಂಧಿತ ಆರೋಪಿಗಳು. ಮುಂಬೈನ ಫ್ಲ್ಯಾಟ್ ನಲ್ಲಿ ಜೂನ್ 7 ರಂದು ಕೃತಿಕಾ ಕೊಲೆ ಮಾಡಲಾಗಿತ್ತು.4 ದಿನಗಳ ಬಳಿಕ ವಾಸನೆಯಿಂದ ಆಕೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು. ಕೊಳೆತ ಸ್ಥಿತಿಯಲ್ಲಿ ಶವ ಕಂಡು ಬಂದಿತ್ತು.

ಡ್ರಗ್ ವ್ಯಸನಿಯಾಗಿದ್ದ ಕೃತಿಕಾ, ಡೀಲರ್ ಗಳಿಂದ ಎಂ.ಡಿ.ಎಂ.ಎ. ಮತ್ತು ಮಿಯಾಂ ಮಿಯಾಂ ಡ್ರಗ್ ಖರೀದಿಸಿದ್ದು, 6000 ರೂ. ಬಾಕಿ ಉಳಿಸಿಕೊಂಡಿದ್ದಾಳೆ. ಈ ಹಣವನ್ನು ಪಡೆಯಲು ಕೃತಿಕಾ ಫ್ಲ್ಯಾಟ್ ಗೆ ಬಂದಿದ್ದ ಶಕೀಲ್ ಮತ್ತು ಬಸುದಾಸ್ ಜೊತೆಗೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಇಬ್ಬರೂ ಆಕೆಯನ್ನು ಥಳಿಸಿ ಹತ್ಯೆ ಮಾಡಿದ್ದಾರೆ. ಬಳಿಕ ಎ.ಸಿ. ಆನ್ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kritika Chaudhary, the 28-year-old small time actor cum model, who was found murdered at her Andheri home last month, was killed over Rs 6,000 that she allegedly owed to a local drug dealer, revealed the Mumbai police.
Please Wait while comments are loading...