'ಕುಮಾರಣ್ಣ ಬಿಟ್ಟು ಹೋಗಲ್ಲ, ಅನಾರೋಗ್ಯದಿಂದ ಅಧಿವೇಶನಕ್ಕೆ ಬರ್ತಿಲ್ಲ'

ಬೆಂಗಳೂರು, ಫೆಬ್ರವರಿ 08: ಬಜೆಟ್​ಅಧಿವೇಶನಕ್ಕೆ ಗೈರಾಗಿರುವ ಕೆಆರ್​ಪೇಟೆ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಸಿ ನಾರಾಯಣಗೌಡ ಅವರು ಎಲ್ಲಿದ್ದಾರೆ? ಹೇಗಿದ್ದಾರೆ? ಸದನದ ಕಲಾಪಕ್ಕೆ ಬರ್ತಾರಾ? ಇಲ್ವವಾ? ಎಂಬೆಲ್ಲ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಬೆಜ್ಟ್ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಕೆಸಿ ನಾರಾಯಣಗೌಡರಿಗೂ ವಿಪ್​ಜಾರಿಗೊಳಿಸಲಾಗಿತ್ತು. ಆದರೆ, ಅನಾರೋಗ್ಯದ ಕಾರಣ ನೀಡಿ ಇಂದಿನ ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ನಾರಾಯಣಗೌಡ ಹೇಳಿದ್ದಾರೆ.

ಮುಂಬೈನ ಜಸ್ಲೋಕ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುವ ನಾರಾಯಣ ಗೌಡ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿಕೊಂಡು ವಿಡಿಯೋ ಸಂದೇಶವೊಂದನ್ನು ಕಳಿಸಿದ್ದು, ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದೆ.

KR Pete MLA Narayana Gowda says he will stay in JD(S)

'ನಾನು ಫುಡ್ ಪಾಯ್ಸನ್ ನಿಂದಾಗಿ ಆಸ್ಪತ್ರೆ ಸೇರಿದ್ದೇನೆ. ಇನ್ನು ಕೆಲವು ದಿನಗಳ ಆಸ್ಪತ್ರೆಯಲ್ಲೇ ಉಳಿಯಬೇಕು ಎಂದು ವೈದ್ಯರು ಹೇಳಿದ್ದಾರೆ. ನಾನು ಈ ಬಗ್ಗೆ ಕುಮಾರಣ್ಣ(ಸಿಎಂ ಎಚ್ ಡಿ ಕುಮಾರಸ್ವಾಮಿ) ಅವರಿಗೆ ತಿಳಿಸಿದ್ದೇನೆ. ಸ್ಪೀಕರ್ (ರಮೇಶ್ ಕುಮಾರ್) ಅವರಿಗೂ ಮಾಹಿತಿ ಕೊಟ್ಟಿದ್ದೇನೆ. ನಾನು ಗುಣಮುಖರಾದ ಮೇಲೆ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದೇನೆ' ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಹಲವು ಊಹಾಪೋಹ: ನಾರಾಯಣಗೌಡ ತಮ್ಮ ಗೈರಿಗೆ ಸೂಕ್ತ ಕಾರಣ ಹೇಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಅಧಿವೇಶನಕ್ಕೆ ಗೈರಾಗುವಂಥ ದೊಡ್ಡ ಸಮಸ್ಯೆ ಏನು ಅವರಿಗೆ ಆಗಿಲ್ಲ ಎಂದು ಜೆಡಿಎಸ್ ವಲಯದಲ್ಲಿ ಚರ್ಚೆಯಾಗುತ್ತಿದೆ.

ಇನ್ನೊಂದೆಡೆ, ಕ್ಷೇತ್ರದ ಅಭಿವೃದ್ಧಿಗಾಗಿ 40 ಕೋಟಿ ರು ಕೇಳಿದ್ದ ನಾರಾಯಣ ಗೌಡ ಅವರಿಗೆ ಸರಿಯಾದ ಅನುದಾನ ಸಿಕ್ಕಿರಲಿಲ್ಲ. ಇದರಿಂದ ಕುಮಾರಣ್ಣನ ಮೇಲೆ ನಾರಾಯಣ ಗೌಡ ಅವರು ಬೇಸರಗೊಂಡಿದ್ದರು. ಹೀಗಾಗಿ, ಬಿಜೆಪಿ ನೀಡಿದ ಆಫರ್ ಗೆ ಒಪ್ಪಿ ಒಂದು ವೇಳೆ ಜೆಡಿಎಸ್ ತೊರೆದರೆ ಅವರನ್ನು ಬೆಂಬಲಿಸುವುದಾಗಿ ಕೆಆರ್ ಪೇಟೆಯಲ್ಲಿ ನಾರಾಯಣ ಗೌಡರ ಬೆಂಬಲಿಗರು ಹೇಳಿದ್ದಾರೆ.

ನಾಗಠಾಣ ಕ್ಷೇತ್ರದ ದೇವಾನಂದ ಚವಾಣ, ಗುರುಮಿಟ್ಕಲ್​ನ ನಾಗನಗೌಡ ಕಂದಕೂರ, ತಿ.ನರಸೀಪುರದ ಅಶ್ವಿನ್​ಕುಮಾರ್ ಕೂಡ ರಾಜಿನಾಮೆ ನೀಡುತ್ತಾರೆ ಎಂಬ ಸಂಶಯ ವ್ಯಕ್ತವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+