ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಂಗ್ ಫಿಷರ್ 12000 ಕೋಟಿ ಸಾಲ ನೀರಿನಲ್ಲಿ ಹೋಮ

By Srinath
|
Google Oneindia Kannada News

ಮುಂಬೈ, ಫೆ. 8: ಕನ್ನಡಿಗ ವಿಜಯ್ ಮಲ್ಯ ಮಾಲೀಕತ್ವದ ಕಿಂಗ್ ಫಿಷರ್ ಏರ್ ಲೈನ್ಸ್ ವಿಮಾನಯಾನ ನೆಲಕಚ್ಚಿ ಯಾವುದೋ ಕಾಲವಾಗಿದೆ. ಈ ಮಧ್ಯೆ, ಸರಕಾರಿ ಬ್ಯಾಂಕುಗಳು ಕಂಪನಿಗೆ ನೀಡಿದ್ದ 12,000 ಕೋಟಿ ರೂ ಸಾಲ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಆಘಾತಕಾರಿ ಸಂಗತಿಯೆಂದರೆ ಸಾಲ ತೀರಿಸದೆಯೇ Kingfisher Airlines (KFA) ಪುರ್ರಂತ ಪಲಾಯನ ಮಾಡುವ ಲಕ್ಷಣಗಳು ಹೆಚ್ಚಾಗಿವೆ.

ಬಡ್ಡಿಸಹಿತ 12000 ಕೋ ರೂ ಸಾಲ ಗೋತಾ!:
ಒಟ್ಟು 17 ಸಾರ್ವಜನಿಕ ಬ್ಯಾಂಕುಗಳು ಮಲ್ಯಗೆ 12,000 ಕೋಟಿ ರೂ ಸಾಲ ನೀಡಿದ್ದವು, ಆದರೆ ಅದರಲ್ಲಿ ಮೂರನೆಯ ಒಂದು ಭಾಗವನ್ನೂ ವಾಪಸ್ ಪಡೆಯಲು ಈ ಬ್ಯಾಂಕುಗಳಿಗೆ ಸಾಧ್ಯವಾಗುವುದಿಲ್ಲ. ಏಕೆಂದರೆ ದಿವಾಳಿಯೆದ್ದಿರುವ KFA ಬಳಿ ಅಷ್ಟು ಆಸ್ತಿಪಾಸ್ತಿಯಾಗಲಿ ಅಥವಾ ಹಣವಾಗಲಿ ಉಳಿದಿಲ್ಲ! ಇನ್ನು ಸಾಲದ ಮೊತ್ತ ವಾಪಸ್ ಪಡೆಯುವುದಾದ್ರೂ ಹೇಗೆ? ಹಾಗಾಗಿಯೇ ಬಡ್ಡಿ ಸಹಿತ 12,000 ಕೋಟಿ ರೂ ಸಾಲ ಗೋತಾ ಅಷ್ಟೇ!

ಬ್ಯಾಂಕಿಂಗ್ ಕ್ಷೇತ್ರದ ಅಂದಾಜು ಪ್ರಕಾರ KFAಗೆ 8,000 ಕೋಟಿ ರೂ ಸಾಲ ನೀಡಲಾಗಿದೆ. ಇದಕ್ಕೆ ವಿಜಯ್ ಮಲ್ಯ ಸಾಹೇಬರ ವೈಯಕ್ತಿಕ ಗ್ಯಾರಂಟಿ ಜತೆಗೆ KFL ಷೇರುಗಳು, UB, United Spirits ಮತ್ತು McDowell ಕಂಪನಿಯ ಷೇರುಗಳ ಖಾತ್ರಿ ನೀಡಲಾಗಿತ್ತು.

ಸಾಲ ನೀಡಿದ್ದ HDFC ಜನವರಿ 16ರಂದು United Spirits ಕಂಪನಿಯ 90,000 ಷೇರುಗಳನ್ನು ಮಾರಾಟ ಮಾಡಿಬಿಟ್ಟು 25 ಕೋಟಿ ರೂ. ಹಣ ಜಮಾ ಮಾಡಿಕೊಂಡಿದೆ. ಆದರೆ ಇದು ಬೆಂಗಳೂರಿನಲ್ಲಿರುವ UB Groupನ ನಿವಾಸಗಳು ಮತ್ತು ರಿಯಲ್ ಎಸ್ಟೇಟ್ ವಹಿವಾಟು ಬಾಬತ್ತಿಗೆ ನೀಡಿದ್ದ ಖಾತರಿಯಷ್ಟೇ; KFA ಕಂಪನಿಯ ಲೆಕ್ಕಕ್ಕೆ ಬರುವುದಲ್ಲ.

ಮಲ್ಯ ಮುಂದೆ ಮಂಡಿಯೂರಿ ಪ್ರಾರ್ಥಿಸುತ್ತಿವೆ

ಮಲ್ಯ ಮುಂದೆ ಮಂಡಿಯೂರಿ ಪ್ರಾರ್ಥಿಸುತ್ತಿವೆ

ಇದು ಒಂದು ಉದಾಹರಣೆಯಷ್ಟೆ. KFA ಕಂಪನಿಗೆ 17 ಬ್ಯಾಂಕುಗಳು ನೀಡಿರುವ ಅಂದಾಜು ಸಾಲದ ಮೊತ್ತ 12 ಸಾವಿರ ಕೋಟಿ ರೂ. ಅದರಲ್ಲಿ ಅರ್ಧದಷ್ಟು ಹಣ ವಾಪಸಾದರೆ ಸಾಕೋ ಭಗವಂತ ಎಂದು ವಿಜಯ್ ಮಲ್ಯ ಮುಂದೆ ಮಂಡಿಯೂರಿ ಪ್ರಾರ್ಥಿಸುತ್ತಿವೆ.

ಅಲ್ಲಿಗೆ 12 ಸಾವಿರ ಕೋಟಿ ಸಾಲ ಗೋವಿಂದಾ ಗೋವಿಂದಾ!

ಅಲ್ಲಿಗೆ 12 ಸಾವಿರ ಕೋಟಿ ಸಾಲ ಗೋವಿಂದಾ ಗೋವಿಂದಾ!

ಸಾಲದ ಖಾತೆಯಲ್ಲಿ 91ನೇ ದಿವಾದರೂ ವಾಪಸಾತಿ ಬಾರದಿದ್ದರೆ ಸಾಲ ನೀಡಿದ ಕಂಪನಿಯ ಆಸ್ತಿಪಾಸ್ತಿ ಮೇಲೆ ಕ್ರಮ ಜರುಗಿಸಬೇಕಾಗುತ್ತದೆ. ಅಂದರೆ 2011ನೇ ಸಾಲಿನ ಅಂತ್ಯದಿಂದ ವಿಜಯ್ ಮಲ್ಯರ KFA ಒಂದು ಪೈಸೆಯನ್ನೂ ಮರುಪಾವತಿ ಮಾಡಿಲ್ಲ. 2011 ರಿಂದ ಮುಮದಿನ ನಾಲ್ಕು ವರ್ಷಗಳ ಕಾಲ ಪರಿಸ್ಥಿತಿ ಹೀಗೇ ಮುಂದುವರಿದರೆ ಬ್ಯಾಂಕುಗಳು ಸಾಲದ ಮೊತ್ತವನ್ನು balance sheetನಿಂದ ತೆಗೆದುಹಾಕುವುದು ಅನಿವಾರ್ಯವಾಗುತ್ತದೆ. ಅಲ್ಲಿಗೆ 12 ಸಾವಿರ ಕೋಟಿ ಸಾಲ ಗೋವಿಂದಾ ಗೋವಿಂದಾ!

 ಜನಸಾಮಾನ್ಯ ಹೀಗೆ ಜುಜುಬಿ ಸಾಲ ಪಡೆಯಲು ಸಾಧ್ಯವಾ?

ಜನಸಾಮಾನ್ಯ ಹೀಗೆ ಜುಜುಬಿ ಸಾಲ ಪಡೆಯಲು ಸಾಧ್ಯವಾ?

ಅಂದರೆ ಆ ವೇಳೆಗೆ ಈ ಹದಿನೇಳೂ ಬ್ಯಾಂಕುಗಳ ಅಧ್ಯಕ್ಷರುಗಳು ಸೇವೆಯಿಂದ ನಿವೃತ್ತಗೊಂಡಿರುತ್ತಾರೆ. ಇನ್ನು ಹೊಸದಾಗಿ ಅಧಿಕಾರಕ್ಕೆ ಬರುವ ಅಧ್ಯಕ್ಷರುಗಳು ಮಲ್ಯರ ಸಾಲ ನೋಡಿ ಬೆಚ್ಚಿಬಿದ್ದು, ಕೋರ್ಟುಗಳ ಮೊರೆ ಹೋಗಿ ಅಲ್ಪಸ್ವಲ್ಪ ಸಾಲವಾದರೂ ವಾಪಸಾಗಲಿ ಎಂದು ಕೈಕಟ್ಟಿ ಕುಳಿತುಕೊಳ್ಳಬೇಕಾಗುತ್ತದೆ. ಅಥವಾ ಮುಂದೆ (ನಾಲ್ಕು ವರ್ಷಗಳ ಬಳಿಕ ಅಂದರೆ 2015ರ ವೇಳೆಗೆ) ಆಗಿನ ಹಣಕಾಸು ಸಚಿವರು ಕೃಪಾಕಟಾಕ್ಷ ಬೀರಿ ಸಾಲವನ್ನೆಲ್ಲಾ ವಜಾ ಮಾಡುವುದರ ಮೂಲಕ ಬ್ಯಾಂಕುಗಳನ್ನು ಪಾರು ಮಾಡಬೇಕಾಗುತ್ತದೆ.

ಯಾವ ಗ್ಯಾರಂಟಿ ಮೇಲೆ ಈ ಪಾಟಿ ಸಾಲ ನೀಡಿದವು

ಯಾವ ಗ್ಯಾರಂಟಿ ಮೇಲೆ ಈ ಪಾಟಿ ಸಾಲ ನೀಡಿದವು

ಮಲ್ಯರಿಗೆ ನೀಡಿರುವ ಸರಕಾರಿ ಬ್ಯಾಂಕುಗಳ ಪೈಕಿ ಕೆಲವು ಹೀಗಿವೆ: State Bank of India, IDBI Bank, Punjab National Bank ಮತ್ತು Bank of Baroda. ಹಾಗೆಯೇ, ಖಾಸಗಿ ಬ್ಯಾಂಕುಗಳು ಹೀಗಿವೆ: ICICI Bank ಮತ್ತು J&K Bank.

ಅಲ್ಲಾ, ಯಾವ ಗ್ಯಾರಂಟಿ ಮೇಲೆ ಈ ಪಾಟಿ ಸಾಲ ನೀಡಿದವು:
State Bank of India ಬ್ಯಾಂಕೊಂದೇ 1,600 ಕೋಟಿ ರೂ ಸಾಲ ನೀಡಿದೆ. ನಂತರ, Punjab National Bank ಮತ್ತು IDBI Bank ತಲಾ 800 ಕೋಟಿ ರೂ ನೀಡಿ, ಕೃತಾರ್ಥವಾಗಿದೆ. Bank of India ಮತ್ತು Bank of Baroda ಅನುಕ್ರಮವಾಗಿ 650 ಮತ್ತು 550 ಕೋಟಿ ರೂ. ಸಾಲಗಳನ್ನು ನೀಡಿವೆ.

ಜಾಣ ಮಲ್ಯ ಕಾನೂನು ಮುಷ್ಟಿಗೂ ನಿಲುಕುವುದಿಲ್ಲ!

ಜಾಣ ಮಲ್ಯ ಕಾನೂನು ಮುಷ್ಟಿಗೂ ನಿಲುಕುವುದಿಲ್ಲ!

ದುರಂತವೆಂದರೆ ಇಂತಹ ಪರಿಸ್ಥಿತಿಗಳನ್ನು ನಿಭಾಯಿಸಲು Sarfesi Act (Securitsation and reconstruction of financial assets and enforcement of security interest act)- 2002 ಕಾಯಿದೆ ಇದೆಯದರೂ ಮಲ್ಯ ಸಾಹೇಬರು ಜಾಣತನದಿಂದ ಇದರ ವ್ಯಾಪ್ತಿಗೂ ನಿಲುಕದಂತೆ ಸಾಲ ಮಾಡಿ ಕೂತಿದ್ದಾರೆ!

ಗೋವಾ ಮುಂಬೈನಲ್ಲಿ ಮಲ್ಯ ಸಾಹೇಬರು ಒಂದಷ್ಟು ಆಸ್ತಿ ಹೊಂದಿದ್ದಾರಾದರೂ ಎಲ್ಲ ಬ್ಯಾಂಕುಗಳಿಗೂ ತಿರುಗಾಮುರುಗಾ ಮಾಡಿ ಅದೇ ಆಸ್ತಿಯನ್ನು ಅಡ ಇಟ್ಟಿದ್ದಾರೆ. ಹಾಗಾಗಿ ಬ್ಯಾಂಕುಗಳು ಸಾಲಾಗಿ ನಿಂತು ತಮ್ಮ ಪಾಲಿಗೆ ಕೈಕಟ್ಟಿ ನಿಲ್ಲಬೇಕಾದ ದುಸ್ಥಿತಿಯಲ್ಲಿವೆ! ಅಷ್ಟಕ್ಕೂ ಈ ಆಸ್ತಿಗಳು ಅಬ್ಬಬ್ಬಾ ಅಂದರೆ 300 ಕೋಟಿ ರೂ ಗಿಟ್ಟಬಹುದು ಅಷ್ಟೇ!

ಕರ್ನಾಟಕ ಹೈಕೋರ್ಟ್ ಆದೇಶದಂತೆಯೂ ಮರುಪಾವತಿಯಾಗದು

ಕರ್ನಾಟಕ ಹೈಕೋರ್ಟ್ ಆದೇಶದಂತೆಯೂ ಮರುಪಾವತಿಯಾಗದು

ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ಅಂಧೇರಿಯಲ್ಲಿರುವ Kingfisher ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಬ್ಯಾಂಕುಗಳಿಗೆ ಸೂಚಿಸಿತು. ಅದನ್ನು ನಂಬಿಕೊಂಡು ಆಸ್ತಿ ಹರಾಜಿಗೆ ಬ್ಯಾಂಕುಗಳು ಮುಂದಾದಾಗ ಆಘಾತಕಾರಿ ಸಂಗತಿ ಹೊರಬಿದ್ದಿದೆ. 200 ಕೋಟಿ ರೂ. ಈ ಆಸ್ತಿಗೆ ಇನ್ನೂ ಅನೇಕ ಮಂದಿ ಸಾಲಗಾರರು ಧುತ್ತನೆ ಎದ್ದು ಕುಳಿತಿದ್ದಾರೆ! ಅಲ್ಲಿಗೂ arbitrator ಆದ್ಯತೆಯ ಮೇರೆಗೆ ಸಾಲ ಮರುಪಾವತಿಗೆ ಸುಸೂತ್ರವಾಗಿ ಅನುವು ಮಾಡಿಕೊಟ್ಟರೂ ಅದೇನೋ pea nuts ಅಂತಾರಲ್ಲಾ ಹಾಗೆ ಕೈ ಲೆಕ್ಕಕ್ಕೆ ನಿಲುಕುವಷ್ಟು ಮರುಪಾವತಿಯಾಗಬಹುದು ಅಷ್ಟೇ

ಮಲ್ಯದ್ದು ಬೇರೆ ಕಂಪನಿಗಳು ಇವೆಯಾದರೂ

ಮಲ್ಯದ್ದು ಬೇರೆ ಕಂಪನಿಗಳು ಇವೆಯಾದರೂ

ಇದರ ಹೊರತಾಗಿ UB groupನ ಮಾರುಕಟ್ಟೆ ಮೌಲ್ಯ 21747 ಕೋಟಿ ರೂ ಇದೆ. ಇದರ ಹೊರತಾಗಿ United Spirits ( 35,943 ಕೋಟಿ ರೂ), Mangalore Chemicals and Fertilizers (729 ಕೋಟಿ ರೂ), UB Holdings (185 ಕೋಟಿ ರೂ), McDowell Holdings (47 ಕೋಟಿ ರೂ) ದುಡ್ಡೂ ಇದೆ.

ಅಸಲಿಗೆ ಮಲ್ಯಗೆ ಸಾಲ ತೀರಿಸುವ ಮನಸ್ಸೇ ಇಲ್ಲ:

ಅಸಲಿಗೆ ಮಲ್ಯಗೆ ಸಾಲ ತೀರಿಸುವ ಮನಸ್ಸೇ ಇಲ್ಲ:

ಆದರೆ ಅದೆಲ್ಲಾ ಪೇಪರ್ ಮೇಲಿದೆ ಅಷ್ಟೇ! ಅದೂ ಒಬ್ಬರಲ್ಲ, ಇಬ್ಬರಲ್ಲ. ಹತ್ತಾರು ಬಂದಿ ಹಕ್ಕು ಸ್ಥಾಪಕರು ಇದ್ದಾರೆ. ಜಾಣ ಮಲ್ಯ ಸಾಹೇಬರು ಇದ್ಯಾವುದರ ಮೇಲೂ ಸಾಲ ಪಡೆದಿಲ್ಲ. ಹಾಗಾಗಿ ಬ್ಯಾಂಕುಗಳು ಕಾನೂನುರೀತ್ಯ ಇದನ್ನೆಲ್ಲಾ ಮುಟ್ಟುವಂತಿಲ್ಲ. ಹೇಳಿ ಇದಕ್ಕೆಲ್ಲಾ ಯಾರು ಹೊಣೆ? ಬ್ಯಾಂಕುಗಳ accountability ಎಲ್ಲಿಗೆ ಹೋಯ್ತು? ಎಲ್ಲಕ್ಕಿಂತ ಮುಖ್ಯವಾಗಿ ಮಲ್ಯ ಸಾಹೇಬರಿಗೆ ಸಾಲ ತೀರಿಸುವ ಮನಸ್ಸೇ ಇಲ್ಲ.

English summary
Kingfisher 17 public sector banks may not recover Vijay Mallya Rs 12000 cr debt. There is no way public sector banks are going to get back even a third of the surging dues of the defunct Kingfisher Airlines (KFA) whose unpaid debts including overdue interests have surpassed Rs12,000 crore. The other obstacle would be Mallya’s unwillingness to square off his other liabilities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X