ಮುಂಬೈ: ಊಬರ್‌ನಲ್ಲಿ ಪತ್ರಕರ್ತೆ ಮೇಲೆ ಹಲ್ಲೆ ನಡೆಸಿದ ಮಹಿಳೆ

ಮುಂಬೈ, ಜೂನ್ 25: ಟ್ಯಾಕ್ಸಿ ಸೇವೆ ಒದಗಿಸುವ ಊಬರ್‌ನ ಮತ್ತೊಂದು ಕರ್ಮ ಕಾಂಡ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ. ಅಪರಾಧ ಎಸಗಿದ ಊಬರ್ ಗ್ರಾಹಕಿಯೋರ್ವರ ಮಾಹಿತಿಯನ್ನು ಹಂಚಿಕೊಳ್ಳಲು ಊಬರ್ ನಿರಾಕರಿಸಿದೆ.

ಮುಂಬೈನಲ್ಲಿ ಪತ್ರಕರ್ತೆ ಉಷ್ಣೊತಾ ಪೌಲ್ ಎಂಬುವರ ಮೇಲೆ ಆಕೆಯೊಂದಿಗೆ ಊಬರ್‌ ಪೂಲ್‌ನಲ್ಲಿ ನಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಮಹಿಳಾ ಸಹಯಾತ್ರಿ ಹಲ್ಲೆ ನಡೆಸಿದ್ದಾರೆ. ಪತ್ರಕರ್ತೆ ದೂರು ನೀಡಿದರೂ ಕೂಡ ಊಬರ್‌ ಆರೋಪಿಯ ಗುರುತು ನೀಡಲು ಹಿಂದೇಟು ಹಾಕಿದೆ.

ಊಬರ್‌ ಪೋಲಿಂಗ್ ನಲ್ಲಿ ಪತ್ರಕರ್ತೆ ಉಷ್ಣೊತಾ ಪೌಲ್ ಊಬರ್ ಟ್ಯಾಕ್ಸಿ ಹತ್ತಿದ್ದಾರೆ ಆಕೆಯ ಜೊತೆ ಇನ್ನೊಬ್ಬ ಯಾತ್ರಿಯೂ ಅದಾಗಲೇ ಕಾರಿನಲ್ಲಿದ್ದರು. ತಾನು ಹೆಚ್ಚು ಹಣ ಪಾವತಿಸುತ್ತಿದ್ದೇನೆ ನನ್ನನ್ನೇ ಮೊದಲು ಡ್ರಾಪ್ ಮಾಡಬೇಕು ಎಂದು ಚಾಲಕನ ಬಳಿ ಜಗಳ ತೆಗೆದಿದ್ದಾರೆ.

Journalist physically attacked by another woman in Uber

ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ ಪತ್ರಕರ್ತೆ ಉಷ್ಣೊತಾ ಪೌಲ್ ಅವರಿಗೆ ಬಾಯಿಗೆ ಬಂದಂತೆ ಸಹ ಯಾತ್ರಿ ಬೈದಿದ್ದಾರೆ. ಆ ನಂತರ ತನ್ನ ಇಳಿಯುವ ಸ್ಥಳ ಬಂದಾಗ ಅದಾಗಲೇ ಕೋಪಗೊಂಡಿದ್ದ ಆಕೆ ಉಷ್ಣೊತಾ ಪೌಲ್‌ ಬಗ್ಗೆ ಜನಾಂಗೀಯ ನಿಂದನೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಮುಖಕ್ಕೆ, ಕೈಗೆ ಹೊಡೆದು, ಕೂದಲು ಕಿತ್ತು ರಂಪಾಟ ಮಾಡಿದ್ದಾರೆ. ಇದನ್ನೇಲ್ಲಾ ಚಿತ್ರಗಳ ಸಮೇತ ಪತ್ರಕರ್ತೆ ಉಷ್ಣೋತಾ ಪೌಲ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಮಹಿಳಾ ಸಹಪ್ರಯಾಣಿಕ ಮಾಡಿದ ದಾಂದಲೆ ಬಗ್ಗೆ ಉಷ್ಣೊತಾ ಪೌಲ್ ಮುಂಬೈ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಊಬರ್ ಚಾಲಕ ಕೂಡ ಜೊತೆಯಲ್ಲಿದ್ದು ಸಹಕರಿಸಿದ್ದಾನೆ. ಆದರೆ ಆ ಮಹಿಳೆಯನ್ನು ಪತ್ತೆಹಚ್ಚಲು ಪೊಲೀಸರು ಊಬರ್ ನೆರವು ಕೇಳಿದಾಗ ಮಾತ್ರ ಅವರು ಗ್ರಾಹಕರ ವಿವರ ನೀಡಲು ನಿರಾಕರಿಸಿದ್ದಾರೆ.

ಈ ಬಗ್ಗೆ ಊಬರ್‌ ಸಪೋರ್ಟ್‌ಗೆ ಸರಣಿ ಟ್ವೀಟ್ ಮಾಡಿರುವ ಉಷ್ಣೊತಾ ಪೌಲ್, 'ನಾನು ಕೂಡ ನಿಮ್ಮ ಗ್ರಾಹಕಿ, ನಿಮ್ಮ ಗ್ರಾಹಕಿಗೆ ಆದ ಅನ್ಯಾಯಕ್ಕೆ ನ್ಯಾಯ ಒದಗಿಸಲು ಮತ್ತು ಊಬರ್‌ ವ್ಯವಸ್ಥೆಯಲ್ಲಿ ನಡೆಯುವ ಅಪರಾಧವನ್ನು ತಪ್ಪಿಸಲು ಕೂಡಲೇ ಆಕೆಯ ಮಾಹಿತಿ ನೀಡಿ ಎಂದು ಪಟ್ಟುಹಿಡಿದಿದ್ದಾರೆ.

ಉಷ್ಣೋತಾ ಅವರ ಟ್ವೀಟ್‌ಗೆ ಭಾರಿ ಪ್ರಮಾಣದಲ್ಲಿ ಪ್ರತಿಕ್ರಿಯೆಗಳು ಹರಿದುಬಂದಿದ್ದು ಊಬರ್ ಕ್ರಮವನ್ನು ಖಂಡಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+