ಶೀಘ್ರದಲ್ಲಿ ಬಿಜೆಪಿ ರಾಮಮಂದಿರ ನಿರ್ಮಿಸಲಿ: ಶಿವಸೇನೆ
ಮುಂಬೈ, ಮಾರ್ಚ್ 11: ಉತ್ತರಪ್ರದೇಶದಲ್ಲಿ ಅದ್ಭುತವಾದ ಗೆಲುವು ಸಾಧಿಸಿರುವುದಕ್ಕೆ ಶಿವಸೇನೆಯು ಬಿಜೆಪಿಯನ್ನು ಅಭಿನಂದಿಸಿದೆ. ಶೀಘ್ರದಲ್ಲೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗುವ ಭರವಸೆ ವ್ಯಕ್ತಪಡಿಸಿದೆ. "ರಾಮನ ಉಚ್ಛ್ರಾಯ ಕಾಲ ಮುಗಿದುಹೋಗಿದೆ. ಈಗೇನಿದ್ದರೂ ಶೀಘ್ರದಲ್ಲಿ ಅಯೋಧ್ಯದಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಭರವಸೆ ಮಾತ್ರ ಉಳಿದಿದೆ" ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಮಾಧ್ಯಮದವರಿಗೆ ಶನಿವಾರ ಹೇಳಿದ್ದಾರೆ.
ಇತ್ತೀಚೆಗೆ ಮುಂಬೈನಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಜತೆಗೆ ಯಾವುದೇ ಅವಕಾಶ ಸಿಕ್ಕಾಗ ಬಿಜೆಪಿ ಹಾಗೂ ನರೇಂದ್ರ ಮೋದಿ ವಿರುದ್ಧ ಶಿವಸೇನೆ ಹರಿಹಾಯುತ್ತಿತ್ತು. "ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಿದೆ. ಬಿಜೆಪಿ ಗೆಲುವನ್ನು ನಾವು ಸ್ವಾಗತಿಸುತ್ತೇವೆ. ಈ ಗೆಲುವಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇವೆ" ಎಂದು ಸಂಜಯ್ ರಾವತ್ ಹೇಳಿದ್ದಾರೆ.['ಥ್ಯಾಂಕ್ಯೂ, ಪ್ರಜಾತಂತ್ರ ದೀರ್ಘಕಾಲ ಬಾಳಲಿ!']

ಪ
ಚುನಾವಣೆ ಸೋತಿರುವವರಿಗೆ ಶಿವಸೇನೆ ಮತ್ತು ಮೋದಿ ಅಲೆಯನ್ನು ಮುಂಬೈ ಪ್ರವೇಶಿಸದಂತೆ ತಡೆದ ಪ್ರಾಮುಖ್ಯ ಅರಿವಾಗಿರುತ್ತದೆ. ಈ ಯಾವ ಚುನಾವಣೆಯೂ ಮಹಾರಾಷ್ಟ್ರ ರಾಜಕಾರಣದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದ್ದಾರೆ.












Click it and Unblock the Notifications