ಮುಂಬೈ ಮಳೆ; 5 ಅಂತಸ್ತಿನ ವಸತಿ ಕಟ್ಟಡ ಕುಸಿತ
ಮುಂಬೈ, ಜುಲೈ 16 : ದಕ್ಷಿಣ ಮುಂಬೈನ ವಸತಿ ಪ್ರದೇಶದಲ್ಲಿ 5 ಅಂತಸ್ತಿನ ಕಟ್ಟಡದ ಒಂದು ಕುಸಿದು ಬಿದ್ದಿದೆ. ಅವಶೇಷಗಳಡಿ ಐದು ಜನರು ಸಿಲುಕಿರುವ ಶಂಕೆ ಇದೆ. ಮುಂಬೈ ನಗರದಲ್ಲಿ ಭಾರಿ ಮಳೆಯಾಗುತ್ತಿದೆ.
Recommended Video
ಗುರುವಾರ ಸಂಜೆ ವಸತಿ ಪ್ರದೇಶ 5 ಅಂತಸ್ತಿನ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿದೆ. 4 ಅಗ್ನಿ ಶಾಮಕ ದಳದ ವಾಹನಗಳು ಸ್ಥಳಕ್ಕೆ ತೆರಳಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿವೆ.

ಎರಡು ದಿನದಿಂದ ಮುಂಬೈ ನಗರದಲ್ಲಿ ಭಾರಿ ಮಳೆಯಾಗುತ್ತಿದೆ. ಮಳೆಯಿಂದಾಗಿಯೇ ಕಟ್ಟಡ ಕುಸಿದರಬಹುದು ಎಂದು ಶಂಕಿಸಲಾಗಿದೆ. ಅವಶೇಷಗಳಡಿ 5ಕ್ಕೂ ಅಧಿಕ ಜನರು ಸಿಲುಕಿರುವ ಸಾಧ್ಯತೆ ಇದ್ದು, ಕಾರ್ಯಾಚರಣೆ ಮುಂದುವರೆದಿದೆ.
ಶಿವಸೇನಾ ಸಂಸದ ಅರವಿಂದ್ ಸಾವಂತ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. "ಕಟ್ಟಡದ ರಿಪೇರಿ ಕೆಲಸ ನಡೆಯುತ್ತಿತ್ತು ಎಂದು ಹೇಳಿದ್ದೇನೆ. ಕಟ್ಟಡದಲ್ಲಿರುವ ಕುಟುಂಬಗಳನ್ನು ಬೇರೆ ಕರೆ ಸ್ಥಳಾಂತರ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.
ಕಟ್ಟಡದ ಅವಶೇಷಗಳಡಿ ಸಿಲುಕಿದ ಜನರನ್ನು ರಕ್ಷಣೆ ಮಾಡಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ 2 ದಿನಗಳಿಂದ ಮುಂಬೈ ನಗರದಲ್ಲಿ ಭಾರಿ ಮಳೆಯಾಗುತ್ತಿದೆ. ಹಲವು ಬಡಾವಣೆಗಳು ಜಲಾವೃತವಾಗಿವೆ. ಮಳೆಯಿಂದಾಗಿಯೇ ಕಟ್ಟಡ ಕುಸಿದಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications