ಕಟ್ಟಡಕ್ಕೆ ಬೆಂಕಿ, ಐದು ಮಂದಿ ಸಜೀವ ದಹನ

ಮುಂಬೈ, ನ.11: ಇಲ್ಲಿನ ವಿಕ್ರೋಲಿ ಪ್ರದೇಶದಲ್ಲಿರುವ ಏಳು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಐದು ಮಂದಿ ಮೃತಪಟ್ಟಿದ್ದು ಹಲವಾರು ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ವಿಕ್ರೋಲಿಯ ಸಿದ್ದಾರ್ಥನಗರದಲ್ಲಿರುವ ಕೈಲಾಸ್ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಆಕಸ್ಮಿಕದಲ್ಲಿ ಸುಮಾರು 10 ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ. 20ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ತಕ್ಷಣವೇ ಕಾರ್ಯಾಚರಣೆ ನಡೆಸಿದ್ದರಿಂದಾಗಿ ಭಾರೀ ಪ್ರಮಾಣದ ಸಾವು-ನೋವು ತಪ್ಪಿದೆ. ಎಂದು ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.

ಗೌತಮ್ ಶಾಲಿವಾನ್(55), ಪತ್ನಿ ಪೂರ್ಣಿಮಾ(50), ಪುತ್ರ ವಿಶಾಲ್(32) ಹಾಗೂ ಮೊಮ್ಮಗ ಆಯುಷ್(10) ಮೃತಪಟ್ಟ ದುರ್ದೈವಿಗಳು. ಮತ್ತೊಬ್ಬ ಗುರುತು ಪತ್ತೆಯಾಗಿಲ್ಲ.

ಏಳು ಅಂತಸ್ತಿನ ಕಟ್ಟಡ ವಸತಿ ಸಮುಚ್ಚಯವಾಗಿದ್ದು, ಬೆಂಕಿ ಹತ್ತಿಕೊಂಡ ಹೊತ್ತಿನಲ್ಲಿ ಇಲ್ಲಿನ ನಿವಾಸಿಗಳು ನಿದ್ರಿಸುತ್ತಿದರು ಎಂದು ತಿಳಿದು ಬಂದಿದೆ. ಬೆಂಕಿ ಆಕಸ್ಮಿಕಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಅಗ್ನಿ ಶಾಮಕದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

4 killed in Mumbai building fire

ಕಟ್ಟಡದಿಂದ ಎಲ್ಲಾ ನಿವಾಸಿಗಳನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಗಿದೆ. ಗಾಯಗೊಂಡವರನ್ನು ರಾಜವಾಡಿ ಆಸ್ಪತ್ರೆಗೆ ಸೇರಿಸಲಾಗಿದೆ. ಬೆಳಗ್ಗೆ ಸುಮಾರು 6.30ರ ಸುಮಾರಿಗೆ ಬೆಂಕಿ ಅಪಘಾತ ಸಂಭವಿಸಿದೆ ಎಂದು ಅಗ್ನಿಶಾಮಕದಳದ ಅಧಿಕಾರಿಗಳು ಹೇಳಿದರು.

ಕಟ್ಟಡದ ಎಲೆಕ್ಟ್ರಿಕ್ ಮೀಟರ್ ಕೇಬಲ್ ಬಾಕ್ಸ್ ಇದ್ದ ಸ್ಥಳದಲ್ಲಿ ಕಾಣಿಸಿಕೊಂಡ ಕಿಡಿ ಆನಂತರ ನೆಟ್ ವರ್ಕ್ ಕೇಬಲ್ ಗಳ ಮೂಲಕ ಇಡೀ ಕಟ್ಟಡವನ್ನು ವ್ಯಾಪಿಸಿಕೊಂಡು ಬೆಂಕಿ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಮುಂಬೈ ಕೊಳಚೆ ಪ್ರದೇಶ ಪುನಶ್ಚೇತನ ವಿಭಾಗ ಈ ಕಟ್ಟಡವನ್ನು ನಿರ್ಮಿಸಿತ್ತು. ಘಟನೆ ಬಗ್ಗೆ ಮುಂಬೈ ಮೇಯರ್ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಕೂಡಲೇ ತನಿಖೆ ನಡೆಸಿ ಮೃತರ ಕುಟುಂಬಗಳಿಗೆ ಪರಿಹಾರ ಒದಗಿಸುವುದಾಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+