ಮುಂಬೈ: 'ಲವ್ ರಂಜನ್' ಚಿತ್ರದ ಸೆಟ್‌ನಲ್ಲಿ ಬೆಂಕಿ- ಓರ್ವ ಸಾವು

ಮುಂಬೈ ಜುಲೈ 29: ಮುಂಬೈನ ಅಂಧೇರಿ ಪಶ್ಚಿಮ ಪ್ರದೇಶದಲ್ಲಿ ಫಿಲ್ಮ್ ಸ್ಟುಡಿಯೊದ ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಓರ್ವ ಸಾವನ್ನಪ್ಪಿರುವುದು ವರದಿಯಾಗಿದೆ. ಮುಂಬೈ ಅಗ್ನಿಶಾಮಕ ದಳವು ಲಿಂಕ್ ರೋಡ್‌ನ ಸ್ಟಾರ್ ಬಜಾರ್ ಬಳಿಯ ಅಂಧೇರಿ ಪಶ್ಚಿಮ ಪ್ರದೇಶದಲ್ಲಿ 2 ನೇ ಹಂತದಲ್ಲಿ ಸಂಜೆ 4:30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿಸಿದೆ. ಬೆಂಕಿಯ ತೀವ್ರಗೆ 10 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದಾವಿಸಿದ್ದು, ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಶುಕ್ರವಾರ ಸಂಜೆ ಲಿಂಕ್ ರೋಡ್ ಬಳಿಯ ಅಂಧೇರಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಪಕ್ಕದ ಚಿತ್ರಕೂಟ ಮೈದಾನದಲ್ಲಿ ಚಿತ್ರಕೂಟ ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ, ಕಪ್ಪು ಹೊಗೆ ಸ್ಥಳದಿಂದ ಕಂಡುಬಂದಿದೆ. ಸ್ಟುಡಿಯೋವನ್ನು ಮರ, ಶೆಡ್ ಮತ್ತು ಪ್ಲಾಸ್ಟಿಕ್ ಸಹಾಯದಿಂದ ನಿರ್ಮಿಸಲಾಗಿದೆ. ಅಗ್ನಿಶಾಮಕ ದಳದ ಪ್ರಕಾರ, ಇದು ಲೆವೆಲ್-2 ಬೆಂಕಿಯಾಗಿದೆ. ಸಂಜೆ 4.28ಕ್ಕೆ ಬೆಂಕಿ ಕಾಣಿಸಿಕೊಂಡಿದೆ.

'ಲವ್ ರಂಜನ್' (Luv Ranjan) ಚಿತ್ರದ ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಮುಖ್ಯ ಪಾತ್ರದಲ್ಲಿದ್ದಾರೆ. ಬೆಂಕಿ ಹೊತ್ತಿಕೊಂಡಾಗ ಸೆಟ್‌ನಲ್ಲಿ ದೀಪಾಲಂಕಾರ ನಡೆಯುತ್ತಿತ್ತು. ಮುಂದಿನ ವಾರದಿಂದ, ರಣಬೀರ್ ಮತ್ತು ಶ್ರದ್ಧಾ ಸೆಟ್‌ನಲ್ಲಿ ಚಿತ್ರೀಕರಣ ಮಾಡಬೇಕಿತ್ತು. ಇದರ ಪಕ್ಕದಲ್ಲಿ ರಾಜಶ್ರೀ ಚಿತ್ರದ ಇನ್ನೂ ಎರಡು ಸೆಟ್‌ಗಳನ್ನು ಹಾಕಲಾಗಿತ್ತು. ಅದರಲ್ಲಿ ಒಂದಕ್ಕೆ ಬೆಂಕಿ ಹತ್ತಿಕೊಂಡಿದೆ. ಆದರೆ ಎರಡನೇ ಸೆಟ್ ಸುರಕ್ಷಿತವಾಗಿದೆ.

Fire on the Sets of Luv Ranjan in Mumbai: One Death

ಯಶ್ ರಾಜ್ ಸ್ಟುಡಿಯೋ, ಫನ್ ಸಿನಿಮಾಸ್, ಬಾಲಾಜಿ ಅವರ ಕಛೇರಿ ಮತ್ತು ಇತರ ಅನೇಕ ಚಲನಚಿತ್ರ ಸೆಟ್‌ಗಳು ಈ ಪ್ರದೇಶದಲ್ಲಿವೆ. ಬೆಂಕಿ ಕಾಣಿಸಿಕೊಂಡ ಪ್ರದೇಶವು ಹೆಚ್ಚಾಗಿ ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಂದ ಆವೃತವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿರುವುದು ಚಿತ್ರಗಳಲ್ಲಿ ಕಂಡುಬರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+