ಮುಂಬೈ: ಶಾರುಕ್ ಖಾನ್ 'ಜಿರೋ' ಸಿನಿಮಾದ ಸೆಟ್ ನಲ್ಲಿ ಅಗ್ನಿ ಅವಘಡ
ಮುಂಬೈ, ನವೆಂಬರ್ 29: ಶಾರುಕ್ ಅಭಿನಯದ ಹಿಂದಿ ಸಿನಿಮಾ 'ಜೀರೋ' ಸೆಟ್ ನಲ್ಲಿ ಗುರುವಾರ ಅಗ್ನಿ ಅವಘಡ ಸಂಭವಿಸಿದೆ. ಇಲ್ಲಿನ ಫಿಲ್ಮ್ ಸಿಟಿಯಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಬೆಂಕಿ ನಂದಿಸಲು ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತೆರಳಿತು. ಗುರುವಾರ ಸಂಜೆ ಘಟನೆ ನಡೆದ ವೇಳೆ ಸೆಟ್ ನಲ್ಲಿ ಶಾರುಕ್ ಖಾನ್ ಇದ್ದರು ಎಂದು ವರದಿ ಆಗಿದೆ.
ಎಲೆಕ್ಟ್ರಿಕ್ ವೈರ್, ಲೈಟ್, ಶೂಟಿಂಗ್ ವಸ್ತುಗಳು, ಹಗ್ಗ ಮತ್ತು ಕರ್ಟನ್ ಗಳಿಗೆ ಈ ಅವಘಡದಲ್ಲಿ ಹಾನಿಯಾಗಿದೆ. ಗೋರೆಗಾಂವ್ ನ ಫಿಲ್ಮ್ ಸಿಟಿಯಲ್ಲಿ ಭಾರೀ ಹೊಗೆ ಆವರಿಸಿತ್ತು. ಯಾರಿಗೂ ಹಾನಿ ಏನೂ ಸಂಭವಿಸಿಲ್ಲ. ಆದರೆ ಈ ಅವಘಡಕ್ಕೆ ಏನು ಕಾರಣ ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ.

ಶಾರುಕ್ ಖಾನ್, ಕತ್ರಿನಾ ಕೈಫ್ ಹಾಗೂ ಅನುಷ್ಕಾ ಶರ್ಮಾ ಅಭಿನಯದ 'ಜೀರೋ' ಚಲನಚಿತ್ರ ಡಿಸೆಂಬರ್ ಇಪ್ಪತ್ತೊಂದರಂದು ಬಿಡುಗಡೆ ಮಾಡಲಾಗುವುದು ಎಂದು ದಿನಾಂಕ ಘೋಷಣೆ ಮಾಡಲಾಗಿದೆ. ಈ ಚಿತ್ರದ ದೃಶ್ಯವೊಂದರಲ್ಲಿ ಸಿಖ್ ಸಮುದಾಯದವರ ಪವಿತ್ರ ಸಂಕೇತವೊಂದನ್ನು ಶಾರುಕ್ ಧರಿಸಿದ್ದಾರೆ ಎಂಬ ಕಾರಣಕ್ಕೆ ಆ ದೃಶ್ಯವನ್ನು ಚಿತ್ರದಿಂದ ತೆಗೆಯುವಂತೆ ಕೋರಿ ಕೋರ್ಟ್ ಮೆಟ್ಟಿಲೇರಲಾಗಿದೆ.












Click it and Unblock the Notifications