Fake: ಮುಂಬೈನಲ್ಲಿ ಲಾಕ್‌ಡೌನ್ ಪರಿಣಾಮ ಕಾರಿ ಜಾರಿಗೆ ಸೈನಿಕರನ್ನು ನಿಯೋಜಿಸಿಲ್ಲ
ಮುಂಬೈ, ಮೇ 9: ಮುಂಬೈನಲ್ಲಿ ಲಾಕ್‌ಡೌನ್ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಯಾವುದೇ ಸೈನಿಕರನ್ನು ನಿಯೋಜನೆ ಮಾಡಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ಮುಂಬೈನಲ್ಲಿ ಜನರ ಓಡಾಟವನ್ನು ನಿಯಂತ್ರಿಸಲು ಸೈನಿಕರನ್ನು ನಿಯೋಜಿಸಲಾಗಿದೆ ಎನ್ನುವ ಸಂದೇಶ ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿತ್ತು. ಇದೀಗ ಈ ಎಲ್ಲಾ ಸುಳ್ಳು ಸಂದೇಶಗಳಿಗೆ ಉದ್ಧವ್ ಠಾಕ್ರೆ ಉತ್ತರಿಸಿದ್ದಾರೆ.
ಶನಿವಾರದಿಂದ 10 ದಿನಗಳ ಕಾಲ ಮುಂಬೈ ಸಂಪೂರ್ಣವಾಗಿ ಲಾಕ್‌ಡೌನ್ ಆಗಲಿದೆ. ಹಾಲು, ಔಷಧ ಮಾತ್ರ ಲಭ್ಯವಿರಲಿದೆ. ಮನೆಯಲ್ಲಿ ಉಳಿದ ಅಗತ್ಯವಸ್ತುಗಳನ್ನು ಶೇಖರಿಸಿಟ್ಟುಕೊಳ್ಳಿ ಎಂದು ಮೊದಲೇ ಜನರಿಗೆ ತಿಳಿಸಲಾಗಿದೆ.
ಮುಂಬೈನಲ್ಲಿ ಶಾಂತಿ ಕಾಪಾಡಲು ಯಾವುದೇ ಸೈನಿಕರನ್ನು ನೇಮಕ ಮಾಡಿಲ್ಲ, ಇಂತಹ ಯಾವುದೇ ಮೆಸೇಜ್‌ಗಳಿಗೆ ಕಿವಿಗೊಡಬೇಡಿ, ಹಾಗೆಯೇ ಫಾರ್ವರ್ಡ್ ಕೂಡ ಮಾಡಬೇಡಿ ಎಂದು ಮನವಿ ಮಾಡಲಾಗಿದೆ.
ದೇಶಿಯ ವಿಮಾನಗಳ ಹಾರಾಟ; ಮುಂಬೈ, ದೆಹಲಿಯಲ್ಲಿ ಗೊಂದಲ
ಲಾಕ್‌ಡೌನ್ ಮೇ ಅಂತ್ಯದ ಒಳಗೆ ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ. ಮುಂಬೈ ಹಾಗೂ ಪುಣೆಯಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ಶೇ.90ರಷ್ಟು ಪ್ರಕರಣಗಳು ಪುಣೆ ಹಾಗೂ ಮುಂಬೈನಲ್ಲಿ ದಾಖಲಾಗಿವೆ.
ಮೇ 17ರವರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಿ ಆರೋಗ್ಯ ಸಚಿವಾಲಯ ಆದೇಶ ಹೊರಡಿಸಿದೆ.