Breaking: ಸತ್ತರೂ ಇಡಿಗೆ ಶರಣಾಗಲ್ಲ; ಸಂಜಯ್ ರಾವತ್
ಮುಂಬೈ, ಜುಲೈ 31: ಜಾರಿ ನಿರ್ದೇಶನಾಲಯ (ಇಡಿ) ಭಾನುವಾರ ಬೆಳಗ್ಗೆ ಮುಂಬೈನಲ್ಲಿರುವ ಶಿವಸೇನೆ ಸಂಸದ ಸಂಜಯ್ ರಾವತ್ ನಿವಾಸದ ಮೇಲೆ ದಾಳಿ ಮಾಡಿದೆ. ದಾಳಿ ಬೆನ್ನಲ್ಲೇ ಸರಣಿ ಟ್ವೀಟ್ ಮಾಡಿರುವ ಸಂಜಯ್ ರಾವತ್, ಸತ್ತರೂ ಸರಿ ಇಡಿಗೆ ಶರಣಾಗುವುದಿಲ್ಲ ಎಂದಿದ್ದಾರೆ.
ಪತ್ರಾ ಚಾಲ್ ಭೂ ಹಗರಣ ಪ್ರಕರಣದ ಸಂಬಂಧ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾವತ್‌ರನ್ನು ಇಡಿ ಈಗಾಗಲೇ ವಿಚಾರಣೆ ನಡೆಸುತ್ತಿದೆ.
ಬೆಳಗ್ಗೆ ಜಾರಿ ನಿರ್ದೇಶನಾಯಲದ ಅಧಿಕಾರಿಗಳು ಸಂಸದರ ಮನೆಗೆ ಬಂದ ತಕ್ಷಣವೇ ರಾವತ್ ಬೆಂಬಲಿಗರು ಅವರ ನಿವಾಸದ ಹೊರಗೆ ಜಮಾಯಿಸಿ ಇಡಿ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

ದಾಳಿ ಕುರಿತು ಟ್ವೀಟ್ ಮಾಡಿರುವ ಸಂಸದ, "ಸುಳ್ಳು ಕ್ರಮ..ಸುಳ್ಳು ಸಾಕ್ಷ್ಯ... ನಾನು ಶಿವಸೇನೆ ಬಿಡುವುದಿಲ್ಲ.. ನಾನು ಸತ್ತರೂ.. ನಾನು ಶರಣಾಗುವುದಿಲ್ಲ..ಜೈ ಮಹಾರಾಷ್ಟ್ರ" ಎಂದು ಹೇಳಿದ್ದಾರೆ.
खोटी कारवाई..
— Sanjay Raut (@rautsanjay61) July 31, 2022
खोटे पुरावे
मी शिवसेना सोडणार नाही..
मरेन पण शरण जाणार नाही
जय महाराष्ट्र
ಮುಂದುವರೆದು, "ನನಗೂ ಯಾವುದೇ ಹಗರಣಕ್ಕೂ ಸಂಬಂಧವಿಲ್ಲ. ಶಿವಸೇನೆ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಅವರ ಮೇಲೆ ಪ್ರಮಾಣ ಮಾಡಿ ಇದನ್ನು ಹೇಳುತ್ತಿದ್ದೇನೆ. ಬಾಳಾಸಾಹೇಬರು ನಮಗೆ ಹೋರಾಡಲು ಕಲಿಸಿದರು. ನಾನು ಶಿವಸೇನೆಗಾಗಿ ಹೋರಾಟವನ್ನು ಮುಂದುವರಿಸುತ್ತೇನೆ" ಎಂದು ಇಂದು ಬೆಳಿಗ್ಗೆ ಮರಾಠಿಯಲ್ಲಿ ಟ್ವೀಟ್ ಮಾಡಿದ್ದಾರೆ.
कोणत्याही घोटाळ्याशी माझा काडीमात्र संबंध नाही.
— Sanjay Raut (@rautsanjay61) July 31, 2022
शिवसेना प्रमुख बाळासाहेब ठाकरे यांची शपथ घेऊन मी हे सांगत आहे..बाळासाहेबांनी आम्हाला लढायला शिकवलंय..
मी शिवसेनेसाठी लढत राहीन.
ಈ ಹಿಂದೆ ಜುಲೈ 20 ರಂದು ತನಿಖಾ ಸಂಸ್ಥೆಯಿಂದ ಸಂಜಯ್ ರಾವತ್‌ಗೆ ಸಮನ್ಸ್ ನೀಡಲಾಗಿತ್ತು, ಅದನ್ನು ವಿಚಾರಣೆಗೆ ಹಾಜರಾಗಿರಲಿಲ್ಲ. ಸಂಸತ್ತಿನ ಅಧಿವೇಶನ ನಡೆಯುತ್ತಿರುವ ಕಾರಣ ಆಗಸ್ಟ್ 7 ರ ನಂತರ ಮಾತ್ರ ವಿಚಾರಣೆಗೆ ಹಾಜರಾಗಬಹುದು ಎಂದು ತಮ್ಮ ವಕೀಲರ ಮೂಲಕ ತಿಳಿಸಿದ್ದರು. ಜುಲೈ 1 ರಂದು ಒಮ್ಮೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು.

ಪ್ರವೀಣ್ ರಾವತ್ ಮತ್ತು ಪಾಟ್ಕರ್ ಅವರೊಂದಿಗಿನ "ವ್ಯವಹಾರ ಮತ್ತು ಇತರ ಸಂಪರ್ಕಗಳ" ಬಗ್ಗೆ ಮತ್ತು ಅವರ ಪತ್ನಿ ಒಳಗೊಂಡಿರುವ ಆಸ್ತಿ ವ್ಯವಹಾರಗಳ ಬಗ್ಗೆ ವಿಚಾರಣೆ ನಡೆಸಲು ಸಂಸದ ಸಂಜಯ್ ರಾವತ್ ಅವರಿಗೆ ಸಮನ್ಸ್ ನೀಡಲಾಗಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಇಡಿ ಸಂಜಯ್ ರಾವತ್‌ಗೆ ಸೇರಿದ 1034 ಕೋಟಿ ರೂ. ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.












Click it and Unblock the Notifications