ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಹಣ ವರ್ಗಾವಣೆ: ಮಾಜಿ ಸಚಿವ ಅನಿಲ್‌ನ 4 ಕೋಟಿ ಆಸ್ತಿ ಮುಟ್ಟುಗೋಲು ಹಾಕಿದ ಇಡಿ

|
Google Oneindia Kannada News

ಮುಂಬೈ, ಜು.16: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಮತ್ತು ಇತರರ ವಿರುದ್ಧದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ ಅಥವಾ ಇಡಿ ಸುಮಾರು 4 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ತಾತ್ಕಾಲಿಕ ಮುಟ್ಟುಗೋಲು ಆದೇಶ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

 ಅಕ್ರಮ ಹಣ ವರ್ಗಾವಣೆ: ಮಾಜಿ ಸಚಿವ ಅನಿಲ್ ದೇಶ್‌ಮುಖ್ ಬಂಧನ ಸಾಧ್ಯತೆ ಅಕ್ರಮ ಹಣ ವರ್ಗಾವಣೆ: ಮಾಜಿ ಸಚಿವ ಅನಿಲ್ ದೇಶ್‌ಮುಖ್ ಬಂಧನ ಸಾಧ್ಯತೆ

72 ವರ್ಷದ ಅನಿಲ್ ದೇಶ್ಮುಖ್‌ರನ್ನು ಪ್ರಶ್ನಿಸಲು ಜಾರಿ ನಿರ್ದೇಶನಾಲಯ (ಇಡಿ) ಮೂರು ಸಮನ್ಸ್‌ ನೀಡಿದ್ದು, ಅನಿಲ್‌ ಯಾವುದೇ ವಿಚಾರಣೆಗಾ ಹಾಜಾರಾಗಿಲ್ಲ.

ED Attaches ₹ 4 Crore Assets In Case Against Maharashtras Ex-Home Minister

ಅನಿಲ್ ದೇಶ್ಮುಖ್‌ ಪುತ್ರ ಹೃಷಿಕೇಶ್ ಮತ್ತು ಪತ್ನಿಯನ್ನು ಆರತಿಗೆ ಜಾರಿ ನಿರ್ದೇಶನಾಲಯ ಬುಧವಾರ ಸಮನ್ಸ್‌ ನೀಡಿತ್ತು. ಆದರೆ ಅವರಿಬ್ಬರೂ ಹಾಜರಾಗಿಲ್ಲ ಎನ್ನಲಾಗಿದೆ.

100 ಕೋಟಿ ಲಂಚ ಹಾಗೂ ಸುಲಿಗೆ ದಂಧೆಗೆ ಸಂಬಂಧಿಸಿದಂತೆ ಪಿಎಂಎಲ್‌ಎ ಅಡಿಯಲ್ಲಿ ದಾಖಲಾದ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಸಮನ್ಸ್ ಜಾರಿಗೊಳಿಸಲಾಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಗೃಹ ಸಚಿವ ಸ್ಥಾನಕ್ಕೆ ಅನಿಲ್ ದೇಶ್ಮುಖ್ ರಾಜೀನಾಮೆ ನೀಡಿದ್ದರು.

ಅನಿಲ್ ದೇಶ್ಮುಖ್ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಅನಿಲ್‌ ಪರ ವಕೀಲರು, ಅನಿಲ್‌ ವಿರುದ್ದ ಇಡಿ ಕ್ರಮವನ್ನು ನ್ಯಾಯಸಮ್ಮತವಲ್ಲ ಎಂದಿದ್ದಾರೆ. ಈ ನಡುವೆ ಮಾಜಿ ಸಚಿವರು ಇಡಿಯ ಯಾವುದೇ ಬಲವಂತದ ಕ್ರಮದಿಂದ ರಕ್ಷಣೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಭಾರತಕ್ಕೆ ಉದ್ಯಮಿ ನೀರವ್ ಮೋದಿ ಹಸ್ತಾಂತರ ಇನ್ನು ದೂರವಿಲ್ಲಭಾರತಕ್ಕೆ ಉದ್ಯಮಿ ನೀರವ್ ಮೋದಿ ಹಸ್ತಾಂತರ ಇನ್ನು ದೂರವಿಲ್ಲ

''ಜಾರಿ ನಿರ್ದೇಶನಾಲಯದ ಪ್ರಕರಣವು ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರ ಹೇಳಿಕೆಯನ್ನು ಆಧಾರಿಸಿದೆ. ಆದರೆ ಆಯೋಗದ ಮುಂದೆ ಹೇಳಿಕೆ ನೀಡುವಾಗ ವಾಜೆ ಬೇರೆಯದೇ ಮಾಹಿತಿ ನೀಡಿದ್ದರು. ಹಾಗೆಯೇ ಸಿಬಿಐ ಹಾಗೂ ಇ.ಡಿ ಮುಂದೆ ನೀಡಿರುವ ಹೇಳಿಕೆಯೂ ಅಫಿಡವಿಟ್‌ನಲ್ಲಿ ಸಲ್ಲಿಸಿದ ವಿವರಕ್ಕೂ ವ್ಯತ್ಯಾಸವಿದೆ. ಅನಿಲ್ ದೇಶ್‌ಮುಖ್ ಆಗಲಿ, ಸಹಾಯಕ ಕುಂದನ್ ಶಿಂಧೆ ಆಗಲಿ ಹಣ ನೀಡಿರುವ ಬಗ್ಗೆ ಅವುಗಳಲ್ಲಿ ಯಾವ ಉಲ್ಲೇಖವೂ ಇಲ್ಲ,'' ಎಂದು ಅನಿಲ್ ದೇಶ್‌ಮುಖ್ ಪರ ವಕೀಲರು ಹೇಳಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Enforcement Directorate or ED has attached assets worth about ₹ 4 crore in connection with its money laundering case against Maharashtra's former Home Minister Anil Deshmukh and others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X