ಪನಾಮಾ ಮತ್ತು ಕೋಸ್ಟರಿಕಾದಲ್ಲಿ 6.8ರಷ್ಟು ತೀವ್ರತೆ ಭೂಕಂಪನ
ಪನಾಮಾ, ಜುಲೈ 22: ಜೋಲ್ಟ್ಸ್ ಪನಾಮಾ ಮತ್ತು ಕೋಸ್ಟರಿಕಾ ಪ್ರದೇಶದಲ್ಲಿ ತೀವ್ರ ಭೂಕಂಪನ ಸಂಭವಿಸಿದೆ. ಬುಧವಾರ ಮಧ್ಯಾಹ್ನದ ವೇಳೆಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ರಿಕ್ಟರ್ ಮಾದಕದಲ್ಲಿ ಭೂಕಂಪನ ತೀವ್ರತೆ 6.8ರಷ್ಟು ತೀವ್ರತೆ ದಾಖಲಾಗಿದೆ.
ಅತಿಹೆಚ್ಚು ಜನಸಂಖ್ಯೆ ಹೊಂದಿರುವ ನಗರದಲ್ಲಿ ತೀವ್ರ ಭೂಕಂಪನ ಸಂಭಿವಿಸಿದ್ದು, ಪ್ರಾಥಮಿಕ ವರದಿ ಪ್ರಕಾರ ಯಾವುದೇ ಸಾವು-ನೋವು ಮತ್ತು ಹಾನಿಯ ಬಗ್ಗೆ ತಿಳಿದು ಬಂದಿಲ್ಲ. ಭೂಕಂಪನದ ಕೇಂದ್ರ ಬಿಂದು ಪನಾಮಾ ಮತ್ತು ಕೋಸ್ಟರಿಕಾ ಗಡಿಯ ಫೆಸಿಫಿಕ್ ಕೋಸ್ಟ್ ಪ್ರದೇಶದಿಂದ 30 ಮೈಲಿ ದೂರದಲ್ಲಿರುವ ದಕ್ಷಿಣದ ಪಂಟಾ-ದೆ ಬುರಿಕಾ ಎಂದು ಯುಎಸ್ ಭೂವಿಜ್ಞಾನ ಸಮೀಕ್ಷೆ ತಿಳಿಸಿದೆ.
ಪನಾಮದ ರಾಜಧಾನಿಯಲ್ಲಿ ಯಾವುದೇ ರೀತಿ ಭೂಕಂಪನದ ಅನುಭವವಾಗಿಲ್ಲ. ಆದರೆ ಪಶ್ಚಿಮ ಪನಾಮ ಮತ್ತು ಕೋಸ್ಟರಿಕಾದ ಕೆಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಯಾವುದೇ ಸಾವು-ನೋವಿನ ವರದಿ ಆಗಿಲ್ಲ:
ಪನಾಮಾ ಮತ್ತು ಕೋಸ್ಟರಿಕಾ ಪ್ರದೇಶದಲ್ಲಿ ಸಂಭವಿಸಿರುವ ತೀವ್ರ ಭೂಕಂಪನದಿಂದ ಯಾವುದೇ ಸಾವು-ನೋವು ಮತ್ತು ಆಸ್ತಿ-ಪಾಸ್ತಿ ಹಾನಿಯಾಗಿಲ್ಲ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ.
ರಾಜಸ್ಥಾನದಲ್ಲಿ ಗುರುವಾರ ಕಂಪಿಸಿದ ಭೂಮಿ:
ರಾಜಸ್ಥಾನದಲ್ಲಿ ಸತತ ಎರಡನೇ ದಿನವೂ ಭೂಮಿ ಕಂಪಿಸಿದ ಅನುಭವವಾಗಿದೆ. ಗುರುವಾರ ಬೆಳಗ್ಗೆ 7.42 ಹೊತ್ತಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.8ರಷ್ಟು ತೀವ್ರತೆ ದಾಖಲಾಗಿದೆ ಎಂದು ಭೂವಿಜ್ಞಾನ ಇಲಾಖೆ ತಿಳಿಸಿದೆ. ಬಿಕಾನೇರ್ ಪ್ರದೇಶವೇ ಭೂಕಂಪನದ ಕೇಂದ್ರ ಬಿಂದು ಎಂದು ಗುರುತಿಸಲಾಗಿದೆ.
ಬುಧವಾರವಷ್ಟೇ ರಾಜಸ್ಥಾನದ ಬಿಕಾನೇರ್‌ನಲ್ಲಿ 5.3ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತ್ತು. ರಾಷ್ಟ್ರೀಯ ಭೂಕಂಪನ ವೀಕ್ಷಣಾ ಕೇಂದ್ರ (NCS) ಪ್ರಕಾರ, ಬಿಕಾನೇರ್‌ನಲ್ಲಿ ಬೆಳಗ್ಗಿನ ಜಾವ 5.24ಕ್ಕೆ ಭೂಕಂಪ ಸಂಭವಿಸಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಪ್ರಾಥಮಿಕ ವರದಿಯಾಗಿತ್ತು.












Click it and Unblock the Notifications