• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾರಾಷ್ಟ್ರ: ಧನಂಜಯ್ ಮುಂಡೆ ಸೇರಿ 3 ರಾಜ್ಯ ಸಚಿವರಿಗೆ ಕೊರೊನಾ ಸೋಂಕು

|

ಮುಂಬೈ, ಜೂನ್ 12: ಮಹಾರಾಷ್ಟ್ರದಲ್ಲಿ ಸಚಿವ ಧನಂಜಯ್ ಮುಂಡೆ ಸೇರಿ ಮೂವರು ರಾಜ್ಯ ಸಚಿವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

   Bengaluru corona cases are getting scarier everyday | Bengaluru | Oneindia Kannada

   ಧನಂಜಯ ಮುಂಡೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಬುಧವಾರ ರಾಜ್ಯ ಸಂಪುಟ ಸಭೆಯಲ್ಲಿ ಮತ್ತು ಪ್ರಯೋಗಾಲಯು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

   ಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ: ಜೂನ್ 11ರಂದು ದಾಖಲೆಯ ಕೇಸ್ ವರದಿ

   ಮುಂಡೆ ಅವರಿಗೆ ಕೊರೊನಾದ ಯಾವುದೇ ರೋಗ ಲಕ್ಷಣಗಳಿರಲಿಲ್ಲ, ಅವರ ಬಳಿ ಕೆಲಸ ಮಾಡುತ್ತಿದ್ದ ಐವರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಇತ್ತು, ಮುಂಡೆ ಸೇರಿದಂತೆ ಇವರಾರಿಗೂ ರೋಗ ಲಕ್ಷಣಗಳಿರಲಿಲ್ಲ.

   ಈ ಮೊದಲು ಲೋಕೋಪಯೋಗಿ ಸಚಿವ ಅಶೋಕ್ ಚೌಹಾಣ್ ಮತ್ತು ವಸತಿ ಸಚಿವ ಜಿತೇಂದ್ರ ಅಹವಾಡ್ ಕೂಡ ಕೊರೊನಾ ಸೋಂಕಿತರಾಗಿದ್ದರು.

   ಧನಂಜಯ್ ಅವರು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಂಡಿದ್ದರು. ಬೀಡ್ ಜಿಲ್ಲೆಯಲ್ಲಿ ಗಂಟಲು ದ್ರವ ಪರೀಕ್ಷಾ ಕೇಂದ್ರದ ಉದ್ಘಾಟನೆಯನ್ನೂ ಮಾಡಿದ್ದರು.

   ಮಹಾರಾಷ್ಟ್ರದಲ್ಲಿ 97 ಸಾವಿರ ಕೊರೊನಾ ಸೋಂಕಿತ ಪ್ರಕರಣಗಳಿವೆ. ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 10 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿವೆ. 8,498 ಮಂದಿ ಮೃತಪಟ್ಟಿದ್ದಾರೆ. ಒಂದೇ ದಿನ 396 ಮಂದಿ ಸಾವನ್ನಪ್ಪಿದ್ದಾರೆ.

   English summary
   Maharashtra cabinet minister Dhananjay Munde has been tested COVID-19 positive. His test reports came on Thursday night.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X