ರೈತರ ಆತ್ಮಹತ್ಯೆ ಏರಿಕೆ ವಿಚಾರ: ರಾಜ್ಯ ಸರ್ಕಾರ ವಿರುದ್ಧ ಆರ್‌.ಅಶೋಕ ವಾಗ್ದಾಳಿ

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಆರ್‌.ಅಶೋಕ್‌ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ, ದಿನಬೆಳಗಾದರೆ ಹೈಕಮಾಂಡ್ ನಿಂದ ಏನು ಸಂದೇಶ ಬರುತ್ತೋ, ಕುರ್ಚಿ ಬಿಡುವಂತೆ ಯಾವಾಗ ದೆಹಲಿಗೆ ಬುಲಾವ್ ಬರುತ್ತೋ ಎನ್ನುವ ತವಕದ ನಡುವೆ ಅನ್ನದಾತನ ಆಕ್ರಂದನ ನಿಮಗೆ ಕೇಳಿಸುತ್ತಿಲ್ಲ ಅನ್ನಿಸುತ್ತೆ.

ಎನ್‌ಸಿಆರ್‌ಬಿ (NCRB) ವರದಿಯನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಗಳೇ ರೈತರ ಸಂಕಷ್ಟಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.

Karnataka Farmer Suicides Rise

ದೇಶದ ಹಲವು ರಾಜ್ಯಗಳಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗುತ್ತಿರುವಾಗ ಕರ್ನಾಟಕದಲ್ಲಿ ಮಾತ್ರ ಶೇ.22.61ರಷ್ಟು ಏರಿಕೆಯಾಗಲು ಕಾರಣವೇನು?.

 ಶೃಂಗೇರಿ ಚುನಾವಣೆ ವಿವಾದ: 2023ರಲ್ಲಿ ಮತಗಳ ತಿದ್ದುಪಡಿ ಆಗಿದೆ: ಸಿದ್ದರಾಮಯ್ಯ ಆರೋಪ
ಶೃಂಗೇರಿ ಚುನಾವಣೆ ವಿವಾದ: 2023ರಲ್ಲಿ ಮತಗಳ ತಿದ್ದುಪಡಿ ಆಗಿದೆ: ಸಿದ್ದರಾಮಯ್ಯ ಆರೋಪ

ಕಳೆದ ಒಂದು ವರ್ಷದಲ್ಲೇ ರೈತರ ಆತ್ಮಹತ್ಯೆ ಸಂಖ್ಯೆ 2,423ರಿಂದ 2,971ಕ್ಕೆ ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ. ರೈತರ ಸಾವಿನ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿರುವುದು ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ಬೆಳೆ ನಷ್ಟ, ಸಾಲದ ಬಾಧೆ, ವಿದ್ಯುತ್ ದರ ಏರಿಕೆ ಮತ್ತು ನೀರಿನ ಸಮಸ್ಯೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ರೈತರ ಸಾವಿನ ಸಂಖ್ಯೆಯಲ್ಲಿ ಕರ್ನಾಟಕವನ್ನು ದೇಶದಲ್ಲೇ 2ನೇ ಸ್ಥಾನಕ್ಕೆ ತಂದು ನಿಲ್ಲಿಸಿರುವುದು ನಿಮ್ಮ ಸರ್ಕಾರದ "ಮಾದರಿ ಆಡಳಿತ"ವೇ?

ಡಿಎಂಕೆಗೆ ಕಾಂಗ್ರೆಸ್ ಕೈಕೊಟ್ಟಿದೆ: ಇಂಡಿಯಾ ಒಕ್ಕೂಟ ಪಕ್ಷಗಳು ಪರಾಮರ್ಶೆ ಮಾಡಿಕೊಳ್ಳಲಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ
ಡಿಎಂಕೆಗೆ ಕಾಂಗ್ರೆಸ್ ಕೈಕೊಟ್ಟಿದೆ: ಇಂಡಿಯಾ ಒಕ್ಕೂಟ ಪಕ್ಷಗಳು ಪರಾಮರ್ಶೆ ಮಾಡಿಕೊಳ್ಳಲಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ

"ರೈತನಿಗೆ ಬೆಳೆಗೂ ಬೆಲೆ ಇಲ್ಲ. ರೈತನ ಜೀವಕ್ಕೂ ಬೆಲೆ ಇಲ್ಲ. ಇದೇನಾ ಜನಪರ ಸರ್ಕಾರ?" ಎಂದು ಪ್ರಶ್ನಿಸಿರುವ ಆರ್‌.ಅಶೋಕ, ಸರ್ಕಾರ ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ಟೀಕಿಸಿರುವ ಅವರು, "ಅನ್ನದಾತನ ಕಣ್ಣೀರಿನ ಮೇಲೆ ಕಟ್ಟಿದ ರಾಜಕೀಯ ಬಹಳ ದಿನ ಉಳಿಯುವುದಿಲ್ಲ. ರೈತರ ಶಾಪಕ್ಕೆ ಯಾವ ಗ್ಯಾರಂಟಿಯೂ ಕವಚವಾಗುವುದಿಲ್ಲ. ಅನ್ನದಾತನ ಕಣ್ಣೀರಿನ ಶಾಪ ಕಾಂಗ್ರೆಸ್ ಪಕ್ಷಕ್ಕೆ ತಟ್ಟದೇ ಇರದು" ಎಂದು ಹೇಳಿದ್ದಾರೆ.

ಕಬ್ಬು ಬೆಳೆಗಾರರಿಗೆ ಭರ್ಜರಿ ಗಿಫ್ಟ್: ಎಫ್‌ಆರ್‌ಪಿ ದರ ₹365ಕ್ಕೆ ಏರಿಕೆ, ಕೇಂದ್ರಕ್ಕೆ ಆರ್.ಅಶೋಕ್ ಧನ್ಯವಾದ
ಕಬ್ಬು ಬೆಳೆಗಾರರಿಗೆ ಭರ್ಜರಿ ಗಿಫ್ಟ್: ಎಫ್‌ಆರ್‌ಪಿ ದರ ₹365ಕ್ಕೆ ಏರಿಕೆ, ಕೇಂದ್ರಕ್ಕೆ ಆರ್.ಅಶೋಕ್ ಧನ್ಯವಾದ

ಕಬ್ಬು ಬೆಳೆಗಾರರಿಗೆ ಕೇಂದ್ರದ ಕೊಡುಗೆ: ಆರ್. ಅಶೋಕ್

ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಅವರು ಸ್ವಾಗತಿಸಿದ್ದಾರೆ. ಕಬ್ಬಿನ ನ್ಯಾಯಸಮ್ಮತ ಮತ್ತು ಲಾಭದಾಯಕ ಬೆಲೆಯನ್ನು (FRP) ಪ್ರತಿ ಕ್ವಿಂಟಾಲ್‌ಗೆ 365 ರೂಪಾಯಿಗಳಿಗೆ ಏರಿಕೆ ಮಾಡಿರುವುದು ರೈತರ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿದೆ. ರೈತ ಸ್ನೇಹಿ ನಿರ್ಧಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಆರ್. ಅಶೋಕ್ ಅವರು ರಾಜ್ಯದ ರೈತರ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

"ಒಂದೆಡೆ ರಾಜ್ಯ ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ, ಆದರೆ ಕೇಂದ್ರ ಸರ್ಕಾರವು ರೈತರ ಆದಾಯ ಹೆಚ್ಚಿಸಲು ಬದ್ಧವಾಗಿದೆ. ಈ ರೈತ ಸ್ನೇಹಿ ನಿರ್ಧಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು" ಎಂದು ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+