KEA NEET 2026 : ರೋಲ್ ನಂಬರ್ ಹಾಗೂ ಪ್ರವೇಶ ಪತ್ರ ಅಪ್‌ಲೋಡ್ ಮಾಡಲು ಲಿಂಕ್ ಬಿಡುಗಡೆ ಮಾಡಿದ ಕೆಇಎ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಯುಜಿಸಿಇಟಿ-2026 ಕ್ಕೆ ಸಂಬಂಧಿಸಿದಂತೆ ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದೆ. ಸಿಇಟಿಗೆ ಅರ್ಜಿ ಸಲ್ಲಿಸಿ, ಈಗಾಗಲೇ ನೀಟ್ (NEET) ಪರೀಕ್ಷೆ ಬರೆದಿರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಪ್ರಾಧಿಕಾರವು ಹೊಸ ಲಿಂಕ್ ಅನ್ನು ಬಿಡುಗಡೆ ಮಾಡಿದೆ. ಈ ಲಿಂಕ್ ಮೂಲಕ ಅಭ್ಯರ್ಥಿಗಳು ತಮ್ಮ ನೀಟ್ ರೋಲ್ ನಂಬರ್, ಅರ್ಜಿ ಸಂಖ್ಯೆ ಹಾಗೂ ನೀಟ್ ಪ್ರವೇಶ ಪತ್ರವನ್ನು ಅಪ್‌ಲೋಡ್ ಮಾಡಲು ಸೂಚಿಸಲಾಗಿದೆ.

ಸಾಮಾನ್ಯವಾಗಿ ಪ್ರತಿ ವರ್ಷ ನೀಟ್ ಫಲಿತಾಂಶ ಪ್ರಕಟವಾದ ನಂತರವೇ ನೋಂದಣಿ ಪ್ರಕ್ರಿಯೆಗಳು ಮತ್ತು ಮಾಹಿತಿ ಸಂಗ್ರಹಣೆ ಆರಂಭವಾಗುತ್ತಿತ್ತು. ಆದರೆ, ಫಲಿತಾಂಶದ ನಂತರದ ಗಡಿಬಿಡಿಯಲ್ಲಿ ತಾಂತ್ರಿಕ ತೊಂದರೆಗಳು ಮತ್ತು ಕೊನೆಯ ಕ್ಷಣದ ಗೊಂದಲಗಳು ಉಂಟಾಗುತ್ತಿದ್ದವು. ಈ ಗೊಂದಲಗಳನ್ನು ತಪ್ಪಿಸುವ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ (IAS) ಅವರು ಈ ಬಾರಿ ಮುನ್ನೆಚ್ಚರಿಕೆ ಕ್ರಮವಾಗಿ ಫಲಿತಾಂಶಕ್ಕೂ ಮುನ್ನವೇ ಅಭ್ಯರ್ಥಿಗಳ ಮಾಹಿತಿ ಸಂಗ್ರಹಿಸಲು ನಿರ್ಧರಿಸಿದ್ದಾರೆ.

KEA

ಈ ಹೊಸ ವ್ಯವಸ್ಥೆಯಿಂದಾಗಿ ಅಭ್ಯರ್ಥಿಗಳ ದತ್ತಾಂಶವನ್ನು ಮುಂಚಿತವಾಗಿಯೇ ಸಿದ್ಧಪಡಿಸಿಕೊಳ್ಳಲು ಪ್ರಾಧಿಕಾರಕ್ಕೆ ಸಾಧ್ಯವಾಗುತ್ತದೆ. ಹೀಗಾಗಿ ನೀಟ್ ಪರೀಕ್ಷೆ ಬರೆದ ಪ್ರತಿಯೊಬ್ಬ ಅಭ್ಯರ್ಥಿಯು ಕಡ್ಡಾಯವಾಗಿ ತಮ್ಮ ನೀಟ್ ರೋಲ್ ನಂಬರ್ ಅನ್ನು ಈ ಲಿಂಕ್‌ನಲ್ಲಿ ದಾಖಲಿಸಬೇಕಿದೆ.

ಆದರೆ, ಒಂದು ವಿಷಯವನ್ನು ಅಭ್ಯರ್ಥಿಗಳು ನೆನಪಿಡಬೇಕು; ಈಗ ಮಾಹಿತಿ ದಾಖಲಿಸಿದ ಎಲ್ಲರಿಗೂ ಸೀಟು ಹಂಚಿಕೆಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ನೀಟ್ ಫಲಿತಾಂಶ ಬಂದ ನಂತರ, ಯಾರು ಅರ್ಹತೆ ಪಡೆಯುತ್ತಾರೋ ಅಂತಹ ಅಭ್ಯರ್ಥಿಗಳಿಗೆ ಮಾತ್ರ ಮುಂದಿನ ಹಂತದಲ್ಲಿ ಆಪ್ಷನ್ ಎಂಟ್ರಿ (Options Entry) ಅಥವಾ ಕಾಲೇಜು ಆಯ್ಕೆ ದಾಖಲಿಸಲು ಅವಕಾಶ ನೀಡಲಾಗುತ್ತದೆ.

ನೀಟ್ ರೋಲ್ ನಂಬರ್ ದಾಖಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://cetonline.karnataka.gov.in/neetenroll2026/forms/login.aspx

ಅಭ್ಯರ್ಥಿಗಳು ಅಪ್‌ಲೋಡ್ ಮಾಡುವಾಗ ತಮ್ಮ ಪ್ರವೇಶ ಪತ್ರದ ಸ್ಕ್ಯಾನ್ ಮಾಡಿದ ಪ್ರತಿಯನ್ನು ಸಿದ್ಧವಾಗಿಟ್ಟುಕೊಳ್ಳುವುದು ಉತ್ತಮ. ಯಾವುದೇ ತಪ್ಪು ಮಾಹಿತಿ ದಾಖಲಿಸದಂತೆ ಎಚ್ಚರಿಕೆ ವಹಿಸಲು ಪ್ರಾಧಿಕಾರ ಕೋರಿದೆ. ಈ ಪ್ರಕ್ರಿಯೆಯು ಕೌನ್ಸೆಲಿಂಗ್ ಹಂತವನ್ನು ಸುಗಮಗೊಳಿಸಲು ಮತ್ತು ವಿಳಂಬವನ್ನು ತಪ್ಪಿಸಲು ಸಹಕಾರಿಯಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರಲು ಸೂಚಿಸಲಾಗಿದೆ. ಈ ಕ್ರಮವು ಸಾವಿರಾರು ವಿದ್ಯಾರ್ಥಿಗಳಿಗೆ ಕೊನೆಯ ಕ್ಷಣದ ಒತ್ತಡದಿಂದ ಮುಕ್ತಿ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+