E-Swathu: ಇ-ಸ್ವತ್ತು ಪಡೆಯಲು ಮತ್ತಷ್ಟು ಸುಲಭ ಮಾರ್ಗ: ಗ್ರಾಮೀಣ ಆಸ್ತಿದಾರರಿಗೆ ಕರ್ನಾಟಕ ಸರ್ಕಾರದ ಭರ್ಜರಿ ಗುಡ್‌ನ್ಯೂಸ್

E-Swathu: ಕರ್ನಾಟಕ ಸರ್ಕಾರವು ಗ್ರಾಮೀಣ ಭಾಗದ ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಬೆಂಗಳೂರಿನಲ್ಲಿ ಇ ಖಾತಾ ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಈ ರೀತಿ ಇರುವಾಗಲೇ ಇ - ಸ್ವತ್ತು ವಿಚಾರದಲ್ಲೂ ಕರ್ನಾಟಕ ಸರ್ಕಾರವು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಈ ಸಂಬಂಧ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಟ್ವೀಟ್ ಮಾಡಿದ್ದಾರೆ. ಇ ಸ್ವತ್ತು ಪಡೆಯಲು ಇನ್ನಷ್ಟು ಸರಳ ಮಾರ್ಗ ಎಂದು ಕರ್ನಾಟಕ ಸರ್ಕಾರ ಹೇಳಿದೆ.

ಗ್ರಾಮೀಣ ಆಸ್ತಿ ವಹಿವಾಟುಗಳಲ್ಲಿ ಪಾರದರ್ಶಕತೆ ತರಲು, ಅಕ್ರಮ ತಡೆಗೆ ಮತ್ತು ಅಧಿಕೃತ ಮಾಲೀಕತ್ವದ ದಾಖಲೆ ಒದಗಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಇ-ಸ್ವತ್ತು ಅಭಿಯಾನವನ್ನು ಪ್ರಾರಂಭಿಸಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.

E-Swathu

ಇ-ಸ್ವತ್ತು ತಂತ್ರಾಂಶ 2.0 ರಲ್ಲಿ ಪ್ರಾರಂಭದಲ್ಲಿದ್ದ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಜನರು ತಮ್ಮ ಮನೆಯಲ್ಲಿಯೇ ಕುಳಿತು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಡಿಜಿಟಲ್ ಪ್ರಮಾಣ ಪತ್ರವನ್ನು ಪಡೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದಲ್ಲದೆ, ಇನ್ನು ನಿಮ್ಮ ಹತ್ತಿರದ ಬಾಪೂಜಿ ಸೇವಾಕೇಂದ್ರದಲ್ಲಿಯೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದಾಗಿದೆ.

ಈ ಸೇವಾಕೇಂದ್ರದಲ್ಲಿ ಉಚಿತವಾಗಿ ನಮೂನೆ 11ಎ ಮತ್ತು ನಮೂನೆ 11ಬಿಗಳನ್ನು ಪಡೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಗ್ರಾಮ ಒನ್ ಕೇಂದ್ರ, ಕರ್ನಾಟಕ ಒನ್ ಕೇಂದ್ರ, ಬೆಂಗಳೂರು ಒನ್ ಕೇಂದ್ರಗಳಲ್ಲಿಯೂ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಸೇವಾ ಕೇಂದ್ರಗಳಲ್ಲಿ ಅರ್ಜಿ ಶುಲ್ಕ ನಿಗದಿಪಡಿಸಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿ ಈ ಮೂಲಕ ವಿನಂತಿಸುತ್ತೇನೆ.

ಸಾರ್ವಜನಿಕರಲ್ಲಿ ಯಾವುದೇ ಗೊಂದಲಗಳಿದ್ದರೆ, ಇ-ಸ್ವತ್ತು ಸಹಾಯವಾಣಿ ಸಂಖ್ಯೆ 94834 76000 ಕರೆ ಮಾಡಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬಹುದು ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.

ಇ ಸ್ವತ್ತು ಪಡೆಯಲು ಇನ್ನಷ್ಟು ಸರಳ ಮಾರ್ಗ ಎಂದು ಕರ್ನಾಟಕ ಸರ್ಕಾರವು ಹೇಳಿದ್ದು, ನಿಮ್ಮ ಸಮೀಪದ ಸೇವಾ ಕೇಂದ್ರದಲ್ಲಿಯೂ ಸಿಗಲಿದೆ ಇ ಸ್ವತ್ತು ಎಂದು ಹೇಳಲಾಗಿದೆ. ಇ ಸ್ವತ್ತು ಅರ್ಜಿ ಸಲ್ಲಿಸಿ, ನಮೂನೆ 11 ಎ ಮತ್ತು ನಮೂನೆ 11 ಬಿ ಸುಲಭವಾಗಿ ಪಡೆಯಿರಿ. ನಿಮ್ಮ ಆಸ್ತಿಯ ಡಿಜಿಟಲ್ ದಾಖಲೆ, ನಿಮ್ಮ ಹಕ್ಕು ಎಂದು ಹೇಳಿದ್ದು. ಇ ಸ್ವತ್ತು ಸಹಾಯವಾಣಿ ಸಂಖ್ಯೆ: 9483476000.

E-Swathu: ಇ ಸತ್ತು ಪಡೆಯಲು ಇನ್ನಷ್ಟು ಸರಳ ಮಾರ್ಗ

ಬಾಪೂಜಿ ಸೇವಾ ಕೇಂದ್ರ

ಗ್ರಾಮ ಒನ್ ಸೇವಾ ಕೇಂದ್ರ

ಕರ್ನಾಟಕ ಒನ್ ಕೇಂದ್ರ

ಬೆಂಗಳೂರು ಒನ್ ಕೇಂದ್ರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+