ಮೃಗಶಿರ ನಕ್ಷತ್ರದಲ್ಲಿ ಶುಕ್ರ ಸಂಕ್ರಮಣ: ಇಂದಿನಿಂದ ಬದಲಾಗುವುದು ಈ ರಾಶಿಯವರ ಅದೃಷ್ಟ, ಹೆಚ್ಚಾಗುವುದು ಧನ ಸಂಪತ್ತು

ಸಂಪತ್ತು, ಸಮೃದ್ಧಿ ಮತ್ತು ಪ್ರೀತಿಯನ್ನು ಸಂಕೇತಿಸುವ ಗ್ರಹ ಶುಕ್ರ. ಶುಕ್ರನು ಮೇ 8, ಅಂದರೆ ಇಂದು ರಾತ್ರಿ 9:51 ಕ್ಕೆ ಮೃಗಶಿರ ನಕ್ಷತ್ರಕ್ಕೆ ಸಾಗುತ್ತಾನೆ. ಮಂಗಳನ ಅಧಿಪತ್ಯದ ನಕ್ಷತ್ರಕ್ಕೆ ಶುಕ್ರನ ಆಗಮನವು ನಾಲ್ಕು ರಾಶಿಯವರ ಸಂಪತ್ತು ಹೆಚ್ಚಾಗುವುದು. ವೃತ್ತಿಜೀವನದಲ್ಲಿ ಯಶಸ್ಸು ಸಿಗುವುದು.

ಈ ಸಮಯದಲ್ಲಿ ಈ ರಾಶಿಯವರಿಗೆ ಭಾರೀ ಶುಭ ಫಲ:

ಮೇ 17 ರವರೆಗೆ ಶುಕ್ರನು ಮೃಗಶಿರ ನಕ್ಷತ್ರದಲ್ಲಿಯೇ ಇರುತ್ತಾನೆ. ನಂತರ ಮತ್ತೆ ರೇವತಿ ನಕ್ಷತ್ರಕ್ಕೆ ಸಂಕ್ರಮಿಸುತ್ತಾನೆ.ಶುಕ್ರನು 10 ದಿನಗಳ ಕಾಲ ನಾಲ್ಕು ರಾಶಿಯವರಿಗೆ ವಿಶೇಷ ಆಶೀರ್ವಾದ ಸಿಗಲಿದೆ. ಇವರ ಜೀವನದಲ್ಲಿ ಸಂಪತ್ತಿನ ಸುಧೆ ಹರಿಸಲಿದ್ದಾನೆ. ಅವರ ಜೀವನದಲ್ಲಿ ಪ್ರೀತಿ ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ.

ಶುಕ್ರ ಸಂಕ್ರಮಣದಿಂದ ಯಾವ ರಾಶಿಯವರಿಗೆ ಅದೃಷ್ಟ:

Venus Transit

ಮೇಷ ರಾಶಿ:

ಮೇಷ ರಾಶಿಯ ಅಧಿಪತಿ ಗ್ರಹ ಮಂಗಳ. ಈ ರಾಶಿಯಲ್ಲಿ ಜನಿಸಿದವರಿಗೆ ಆರ್ಥಿಕ ಲಾಭವಾಗುವುದು. ಕೆಲಸ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧ್ಯವಾಗುತ್ತದೆ. ಹೊರಗಡೆ ಸಿಲುಕಿಕೊಂಡಿರುವ ಹಣವು ಮತ್ತೆ ಕೈ ಸೇರುವುದು. ಸಂಬಂಧಗಳಲ್ಲಿ ಪ್ರೀತಿ ಬೆಳೆಯುವುದು. ನಿಮ್ಮ ಮಾತಿನ ಮೂಲಕವೇ ಎದುರಿಗಿರುವವರನ್ನು ಆಕರ್ಷಿಸಬಹುದು.

ಕಟಕ-ಸಿಂಹ ರಾಶಿಯಲ್ಲಿ ಗುರು ಗ್ರಹ ಸಂಚಾರ; ಯಾವ ರಾಶಿಗೆ ಏನು ಫಲ, ಏನಿದೆ ಸುಲಭ ಪರಿಹಾರ? -ಇಲ್ಲಿದೆ ವಿವರ
ಕಟಕ-ಸಿಂಹ ರಾಶಿಯಲ್ಲಿ ಗುರು ಗ್ರಹ ಸಂಚಾರ; ಯಾವ ರಾಶಿಗೆ ಏನು ಫಲ, ಏನಿದೆ ಸುಲಭ ಪರಿಹಾರ? -ಇಲ್ಲಿದೆ ವಿವರ
Venus Transit

ವೃಷಭ ರಾಶಿ:

ಸ್ಥಾನಮಾನ ಹೆಚ್ಚಾಗುವುದು. ಹಣದ ಹರಿವು ಕೂಡಾ ಹೆಚ್ಚಾಗುವುದು. ಶುಕ್ರ ಸಂಚಾರದಿಂದ ಈ ರಾಶಿಯವರ ವೃತ್ತಿಜೀವನದಲ್ಲಿ ಪ್ರಗತಿಯಾಗುವುದು. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಆದಾಯ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಮಾಡುವ ಹೂಡಿಕೆಗಳು ದೊಡ್ಡ ಮಟ್ಟದ ಲಾಭಕ್ಕೆ ಕಾರಣವಾಗುವುದು. ಹಾಗಾಗಿ ಪ್ರಮುಖ ಹೂಡಿಕೆಯನ್ನು ಯೋಜಿಸಬಹುದು. ವ್ಯಾಪಾರ ವ್ಯವಹಾರವು ಲಾಭದಾಯಕವಾಗಿರುತ್ತದೆ. ಪ್ರೇಮ ಜೀವನ ಸಂತೀಷದಿಂದ ಕೂಡಿರುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ.

Venus Transit

ತುಲಾ ರಾಶಿ:

ನಿಮ್ಮ ವೃತ್ತಿಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆಯುವಿರಿ. ತುಲಾ ರಾಶಿಯವರಿಗೆ ಈ ಸಮಯ ವೃತ್ತಿಜೀವನದಲ್ಲಿ ಪ್ರಗತಿ ತರುತ್ತದೆ. ವೇತನ ಹೆಚ್ಚಾಗುವುದು. ಉದ್ಯಮಿಗಳಿಗೆ ಲಾಭವಾಗುವುದು. ಮಾರಾಟದಲ್ಲಿಯೂ ಹೆಚ್ಚಳವಾಗುವುದು. ಜನರು ನಿಮ್ಮ ಸೃಜನಶೀಲತೆಯನ್ನು ನೋಡಿ ಆಶ್ಚರ್ಯಚಕಿತರಾಗುತ್ತಾರೆ. ಪ್ರೇಮ ಸಂಬಂಧಗಳು ಸಿಹಿಯಾಗಿರುತ್ತವೆ. ಆರೋಗ್ಯವು ಸುಧಾರಿಸುತ್ತದೆ.

ಜೂನ್‌ಗೂ ಮುನ್ನ ಈ 4 ರಾಶಿಯವರ ಕೈ ಹಿಡಿಯುವುದು ಅದೃಷ್ಟ: ಮೇ ಕೊನೆಯ ವಾರವೇ ಇವರಿಗೆ ನಿರ್ಣಾಯಕ
ಜೂನ್‌ಗೂ ಮುನ್ನ ಈ 4 ರಾಶಿಯವರ ಕೈ ಹಿಡಿಯುವುದು ಅದೃಷ್ಟ: ಮೇ ಕೊನೆಯ ವಾರವೇ ಇವರಿಗೆ ನಿರ್ಣಾಯಕ
Venus Transit

ಕುಂಭ ರಾಶಿ:

ಶುಕ್ರ ಸಂಕ್ರಮಣದ ಫಲವಾಗಿ ಬಹಳಷ್ಟು ಹಣ ಸಿಗುತ್ತದೆ. ಕುಂಭ ರಾಶಿಯವರಿಗೆ ಶುಕ್ರನ ಸಂಚಾರವು ಆರ್ಥಿಕ ಲಾಭವನ್ನು ತರುತ್ತದೆ. ಬಾಕಿ ಇರುವ ಹಣವು ಗಣನೀಯ ಪ್ರಮಾಣದಲ್ಲಿ ಮತ್ತೆ ಕೈ ಸೇರುವುದರಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಹೂಡಿಕೆ ಮಾಡುವುದಕ್ಕೆ ಇದು ಸಕಾಲ. ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ. ದೀರ್ಘ ಪ್ರವಾಸವನ್ನು ಯೋಜಿಸಬಹುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+