Mother’s Day Special: ಕಡಿಮೆ ಖರ್ಚಿನಲ್ಲಿ ಅಮ್ಮನ ಜೊತೆ ಈ ಸುಂದರ ತಾಣಗಳಿಗೆ ಭೇಟಿ ನೀಡಿ

ಬೇಸಿಗೆಯ ಬಿಸಿಲು ಮತ್ತು ದಿನನಿತ್ಯದ ಒತ್ತಡದ ಜೀವನದಿಂದ ಸ್ವಲ್ಪ ವಿಶ್ರಾಂತಿ ಪಡೆಯಲು ಮತ್ತು ಅಮ್ಮನೊಂದಿಗೆ ವಿಶೇಷ ಸಮಯ ಕಳೆಯಲು 'ತಾಯಂದಿರ ದಿನ' ಅತ್ಯುತ್ತಮ ಅವಕಾಶವಾಗಿದೆ. ಹೆಚ್ಚು ಹಣ ಖರ್ಚು ಮಾಡದೇ ಕಡಿಮೆ ಬಜೆಟ್‌ನಲ್ಲಿಯೇ ಸುಂದರ ಪ್ರವಾಸವನ್ನು ಯೋಜಿಸಬಹುದು. ಕೇವಲ 5000 ಒಳಗೆ ಭಾರತದ ಅದ್ಬುತವಾದ ಕೆಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಅಮ್ಮನೊಂದಿಗೆ ಸುಂದರ ಕ್ಷಣಗಳನ್ನು ಕಳೆಯಬಹುದು. ಇಲ್ಲಿವೆ 'ತಾಯಂದಿರ ದಿನ' 2026ಕ್ಕೆ ಸೂಕ್ತವಾದ 5 ಕಡಿಮೆ ಬಜೆಟ್ ಪ್ರವಾಸಿ ತಾಣಗಳು.

ಹೃಷಿಕೇಶ

ಹೃಷಿಕೇಶ ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಗಂಗಾ ನದಿಯ ತೀರದಲ್ಲಿರುವ ಅತ್ಯಂತ ಸುಪ್ರಸಿದ್ಧ ತೀರ್ಥಯಾತ್ರೆ ಮತ್ತು ಪ್ರವಾಸಿ ತಾಣವಾಗಿದೆ. ಗಂಗಾ ನದಿಯ ತೀರದಲ್ಲಿರುವ ಹೃಷಿಕೇಶ ಪ್ರಶಾಂತವಾದ ವಾತಾವರಣ ಮತ್ತು ಆಧ್ಯಾತ್ಮಿಕ ಅನುಭವಕ್ಕೆ ಪ್ರಸಿದ್ಧವಾಗಿದೆ. ಸಂಜೆ ಗಂಗಾ ಆರತಿ ನೋಡುವುದು, ನದಿತೀರದಲ್ಲಿ ಸಮಯ ಕಳೆಯುವುದು ಮತ್ತು ಪ್ರಕೃತಿಯ ನಡುವೆ ವಿಶ್ರಾಂತಿ ಪಡೆಯುವುದು ಇಲ್ಲಿ ಪ್ರಮುಖ ಆಕರ್ಷಣೆ. ದೆಹಲಿಯಿಂದ ಕಡಿಮೆ ವೆಚ್ಚದಲ್ಲಿ ಪ್ರವಾಸ ಮಾಡಬಹುದು.

Mother s Day 2026

ಜೈಪುರ

ಜೈಪುರವು ರಾಜಸ್ಥಾನದ ರಾಜಧಾನಿ ಮತ್ತು ಭಾರತದ ಮೊದಲ ಯೋಜಿತ ನಗರವಾಗಿದೆ, ಇತಿಹಾಸ ಮತ್ತು ಸಂಸ್ಕೃತಿಯನ್ನು ಇಷ್ಟಪಡುವವರಿಗೆ ಜೈಪುರ ಉತ್ತಮ ಆಯ್ಕೆಯಾಗಿದೆ. ಹವಾ ಮಹಲ್, ಸಿಟಿ ಪ್ಯಾಲೇಸ್‌ಗಳಂತಹ ಐತಿಹಾಸಿಕ ತಾಣಗಳನ್ನು ನೋಡಬಹುದು. ಜೊತೆಗೆ ರಾಜಸ್ಥಾನಿ ಆಹಾರ ಮತ್ತು ಸ್ಥಳೀಯ ಮಾರುಕಟ್ಟೆಗಳಲ್ಲಿ ಶಾಪಿಂಗ್ ಮಾಡುವ ಅನುಭವವೂ ಸಿಗುತ್ತದೆ. ರೈಲು ಮತ್ತು ಬಜೆಟ್ ಹೋಟೆಲ್‌ಗಳಿಂದ ಕಡಿಮೆ ವೆಚ್ಚದಲ್ಲಿ ಪ್ರವಾಸ ಮಾಡಬಹುದು.

ಕೊಡಗನ್ನು
ಕೊಡಗನ್ನು"ಭಾರತದ ಸ್ಕಾಟ್‌ಲ್ಯಾಂಡ್" ಎಂದು ಕರೆಯೋದು ಯಾಕೆ ಗೊತ್ತಾ?

ಪುದುಚೇರಿ

ಪುದುಚೇರಿ (ಹಿಂದೆ ಪಾಂಡಿಚೇರಿ) ಭಾರತದ ಆಗ್ನೇಯ ಕರಾವಳಿಯಲ್ಲಿರುವ ಫ್ರೆಂಚ್ ಸಂಸ್ಕೃತಿಯ ಪ್ರಭಾವ ಹೊಂದಿರುವ ಸುಂದರ ಪ್ರದೇಶವಾಗಿದೆ. ಪುದುಚೇರಿ ಕಡಲತೀರ ಮತ್ತು ಫ್ರೆಂಚ್ ಶೈಲಿಯ ಬೀದಿಗಳಿಂದ ಪುದುಚೇರಿ ಪ್ರವಾಸಿಗರನ್ನು ಸೆಳೆಯುತ್ತದೆ. ಬೇಸಿಗೆಯಲ್ಲಿ ಸಮುದ್ರ ತೀರದಲ್ಲಿ ಸಮಯ ಕಳೆಯಲು ಇದು ಸೂಕ್ತವಾದ ಜಾಗವೆಂದು ಹೇಳಬಹುದು. ಸೈಕಲ್‌ನಲ್ಲಿ ಈ ನಗರವನ್ನು ಸುತ್ತಾಟ ಮಾಡಬಹುದು ಮತ್ತು ಕಡಿಮೆ ವೆಚ್ಚದಲ್ಲಿ ರುಚಿಕರ ಆಹಾರವನ್ನು ಸವಿಯಬಹುದು.

ವಾರಣಾಸಿ

ಗಂಗಾ ನದಿಯ ದಡದಲ್ಲಿರುವ ವಾರಣಾಸಿ ಉತ್ತರ ಪ್ರದೇಶದ ಅತ್ಯಂತ ಪುರಾತನ ಮತ್ತು ಪವಿತ್ರ ನಗರವಾಗಿದೆ. ಹಿಂದೂ ದರ್ಮದ ಪ್ರಮುಖ ಯಾತ್ರಾಸ್ಥಳವಾದ ಇದು ಶಿವನ ನೆಲೆ ಎಂದು ನಂಬಲಾಗಿದೆ. ವಾರಣಾಸಿ ಆಧ್ಯಾತ್ಮಿಕ ಅನುಭವಕ್ಕೆ ಹೆಸರುವಾಸಿಯಾಗಿದೆ. ಗಂಗಾ ನದಿಯಲ್ಲಿ ದೋಣಿ ವಿಹಾರ, ಸಂಜೆ ಆರತಿ ಮತ್ತು ದೇವಾಲಯಗಳ ಭೇಟಿ ಪ್ರವಾಸಕ್ಕೆ ವಿಶೇಷ ಅನುಭವ ನೀಡುತ್ತದೆ. ಕಡಿಮೆ ವೆಚ್ಚದಲ್ಲಿ ಸ್ಮರಣೀಯ ಪ್ರವಾಸ ಮಾಡಬಹುದು.

Lakshadweep Travel 2026: ಈ 2 ಹೊಸ ನಿಯಮಗಳಿಂದ ಈಗ ಲಕ್ಷದ್ವೀಪ ಪ್ರವಾಸ ಇನ್ನಷ್ಟು ಸುಲಭ
Lakshadweep Travel 2026: ಈ 2 ಹೊಸ ನಿಯಮಗಳಿಂದ ಈಗ ಲಕ್ಷದ್ವೀಪ ಪ್ರವಾಸ ಇನ್ನಷ್ಟು ಸುಲಭ

ಅಮೃತಸರ

ಪಂಜಾಬ್‌ನ ಅಮೃತಸರ ಸಿಖ್ ಧರ್ಮದ ಪವಿತ್ರ ತಾಣವಾಗಿದೆ, ಆಧ್ಯಾತ್ಮಿಕ ಅನುಭವ ಮತ್ತು ಪಂಜಾಬಿ ಸಂಸ್ಕೃತಿಯನ್ನು ಅನುಭವಿಸಲು ಅಮೃತಸರ ಉತ್ತಮ ತಾಣವಾಗಿದೆ. ಗೋಲ್ಡನ್ ಟೆಂಪಲ್‌ನ ಶಾಂತ ವಾತಾವರಣ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಜೊತೆಗೆ ಪಂಜಾಬಿ ಆಹಾರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕಡಿಮೆ ವೆಚ್ಚದ ಹೋಟೆಲ್ ಮತ್ತು ಸಾರಿಗೆ ವ್ಯವಸ್ಥೆ ಇಲ್ಲಿ ಸಿಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+