26/11ರ ದಾಳಿ: ಸದ್ದು! ಡೆಡ್ಲಿ ಹೆಡ್ಲಿಯ ವಿಚಾರಣೆ ನಡೆಯುತ್ತಿದೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಮುಂಬೈ, ಫೆಬ್ರವರಿ 8 : 26/11ರಂದು ಮುಂಬೈನಲ್ಲಿ ನಡೆದ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಡೇವಿಡ್ ಹೆಡ್ಲಿಯ ವಿಚಾರಣೆ ಆರಂಭವಾಗಿದೆ. ಮುಂಬೈನ ಸೆಷನ್ಸ್ ಕೋರ್ಟ್‍ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯುತ್ತಿದೆ. ಡೇವಿಡ್ ಹೆಡ್ಲಿ ಅಮೆರಿಕದ ಜೈಲಿನಲ್ಲಿದ್ದಾನೆ.

[ಹೆಡ್ಲಿ ತಪ್ಪೊಪ್ಪಿಗೆ,ರೋಚಕ ಸತ್ಯಗಳ ವಿವರ ಇಲ್ಲಿದೆ]

ಡೇವಿಡ್ ಹೆಡ್ಲಿ ಪರ ವಕೀಲರಾದ ಮಹೇಶ್ ಜೇಠ್ಮಲಾನಿ, ಎಸ್‌ಪಿಸಿ ಉಜ್ವನ್ ನಿಕ್ಕಮ್ ಸೇರಿದಂತೆ ಅಮೆರಿಕ ರಾಯಭಾರ ಕಚೇರಿಯ ಕೆಲವು ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡಿದ್ದಾರೆ. ಸುಮಾರು 5 ಗಂಟೆಗಳ ಕಾಲ ಹೆಡ್ಲಿ ವಿಚಾರಣೆ ನಡೆಯಲಿದೆ. [ಮುಂಬೈ ದಾಳಿ ರುವಾರಿ ಹೆಡ್ಲಿಗೆ 35 ವರ್ಷ ಶಿಕ್ಷೆ]

david headley

ಲಷ್ಕರ್ ಎ ತೋಯ್ಬಾ ಸಂಘಟನೆಗೆ ಸೇರಿದ ಉಗ್ರ ಡೇವಿಡ್ ಹೆಡ್ಲಿ ಈ ಹಿಂದೆ ರಾಷ್ಟ್ರೀಯ ತನಿಖಾ ದಳದ ವಿಚಾರಣೆ ವೇಳೆಯಲ್ಲಿ ಮುಂಬೈದಾಳಿಯ ಹಿಂದೆ ಐಎಸ್‌ಐ ಕೈವಾಡವಿದೆ ಎಂದು ಹೇಳಿದ್ದ. ದಾಳಿಗೂ ಮುನ್ನ ಮುಂಬೈಗೆ ಭೇಟಿ ಕೊಟ್ಟು ರೂಪುರೇಷೆ ಸಿದ್ಧಪಡಿಸಿದ್ದೆ ಎಂದು ಹೇಳಿಕೆ ನೀಡಿದ್ದ. [ಡೇವಿಡ್ ಹೆಡ್ಲಿ ಬಾಯ್ಬಿಟ್ಟರೆ ಭಾರತಕ್ಕೇನು ಲಾಭ!]

ಪಾಕಿಸ್ತಾನದಲ್ಲಿ ಜನಿಸಿದ ದಾವೂದ್ ಸಯೀದ್ ಗಿಲಾನಿ ಅಲಿಯಾಸ್ ಡೇವಿಡ್ ಹೆಡ್ಲಿ ವಿಚಾರಣೆಗೆ ಯುಎಸ್ಎನಿಂದ ಭಾರತ ಅನುಮತಿ ಪಡೆದುಕೊಂಡಿದೆ. ಅಮೆರಿಕ ಕೋರ್ಟ್ ಈಗಾಗಲೇ ಜೀವಾವಧಿ ಶಿಕ್ಷೆ ವಿಧಿಸಿದ್ದು, ಮುಂಬೈ ಕೋರ್ಟ್ ಮತ್ತೆ ಶಿಕ್ಷೆ ನೀಡಬಾರದು. ಇದಕ್ಕೆ ಒಪ್ಪಿದಲ್ಲಿ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಲು ಸಿದ್ಧ ಎಂದು ಹೆಡ್ಲಿ ಹೇಳಿದ್ದಾನೆ.

ಪಾಕಿಸ್ತಾನದಿಂದ ಅಮೆರಿಕಕ್ಕೆ ವಲಸೆ ಹೋಗಿದ್ದ ಹೆಡ್ಲಿ, ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯೊಂದಿಗೆ ಗುರುತಿಸಿಕೊಂಡು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್​ಐ ಜತೆಗೂ ನಂಟು ಹೊಂದಿದ್ದ. ಭಾರತದ ವಿರುದ್ಧ ಪಾಕ್ ಗುಪ್ತಚರ ಸಂಸ್ಥೆ ಐಎಸ್​ಐ ನಡೆಸಿರುವ ಸಂಚು, ಗಡಿಭಾಗದಲ್ಲಿನ ಭಯೋತ್ಪಾದನೆ ಚಟುವಟಿಕೆಗಳ ಬಗ್ಗೆ ಹೆಡ್ಲಿ ಮಾಹಿತಿ ನೀಡುವ ನಿರೀಕ್ಷೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The first deposition of David Headley in connection with the 26/11 trial has commenced. he is deposing before a Mumbai court from a jail in the US through video conferencing.
Please Wait while comments are loading...