ಸಾರ್ವಜನಿಕ ಗಣೇಶೋತ್ಸವದ ಬಗ್ಗೆ ಮುಂಬೈನಲ್ಲಿ ಮಹತ್ವದ ನಿರ್ಧಾರ

ಮುಂಬೈ, ಮೇ 26: ಕೊರೊನಾ ಹಾವಳಿಯಿಂದ ಜಗತ್ತಿನಲ್ಲಿ ಹಲವಾರು ಬದಲಾವಣೆಗಳು ಆಗುತ್ತಿವೆ. ದೇವರು, ದೇವಸ್ಥಾನ, ಧಾರ್ಮಿಕ ಕಾರ್ಯಕ್ರಮಗಳ ಮೇಲೂ ಸಾಕಷ್ಟು ಪರಿಣಾಮ ಬೀರುತ್ತಿದೆ ಮಾರಕ ಕೊರೊನಾ.

Recommended Video

      ಟೀಮ್ ಇಂಡಿಯಾಕ್ಕೆ ಮರಳಲು ಫಿಟ್ ಆದ್ರೂ ಹರ್ಭಜನ್ ಸಿಂಗ್ | Harbhajan Singh Back to team National Team?

      ಕೊರೊನಾ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ. ಈ ಹಿನ್ನೆಲೆಯಲ್ಲಿ ಇಡೀ ದೇಶದಲ್ಲೇ ಅದ್ದೂರಿಯಾಗಿ ಆಚರಿಸಲಾಗುವ ಮುಂಬೈ ಸಾರ್ವಜನಿಕ ಗಣೇಶೋತ್ಸವಕ್ಕೂ ಕಂಟಕ ಬಂದೊದಗಿದೆ.

      ಇದರಿಂದ ಈ ವರ್ಷದ ಗಣೇಶ ಚತುರ್ಥಿಯ ಮುಂಬೈ ಸಾರ್ವಜನಿಕ ಗಣೇಶ ಹಬ್ಬವನ್ನು ಮುಂದೂಡಲಾಗಿದೆ. ಇದು ಕೇವಲ ಮುಂಬೈ ಅಲ್ಲದೇ ದೇಶದ ಗಮನವನ್ನೇ ಸೆಳೆದಿದೆ.

      ಜಿಎಸ್‌ಬಿ ಮಂಡಳ

      ಜಿಎಸ್‌ಬಿ ಮಂಡಳ

      ಮುಂಬೈನ ಅತಿದೊಡ್ಡ ಗಣೇಶೋತ್ಸವ ಮಂಡಳವಾದ ವಡಾಲಾದ ಜಿಎಸ್‌ಬಿ ಮಂಡಳ ಮುಂಬೈನಲ್ಲಿ ಪ್ರತಿವರ್ಷ ಗಣೇಶ ಚತುರ್ಥಿಯಲ್ಲಿ ಅದ್ಧೂರಿಯಾಗಿ ಗಣೇಶೋತ್ಸವವನ್ನು ಆಚರಿಸುತ್ತದೆ. ಆಗಸ್ಟ್‌ ಅಥವಾ ಸೆಪ್ಟೆಂಬರ್‌ನಲ್ಲಿ ವಿಜೃಂಭಣೆಯಿಂದ ಮಂಡಳದ ಅಣತಿಯಂತೆ ನೂರಾರು ಗಣೇಶ ಮಂಡಳಗಳು ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸುತ್ತವೆ. ಈ ವರ್ಷ ಕೊರೊನಾ ನಿಲ್ಲುವ ಸೂಚನೆಗಳ ಕಾಣುತ್ತಿಲ್ಲವಾದ್ದರಿಂದ ಜಿಎಸ್‌ಬಿ ಮಂಡಳದವರು ಈ ವರ್ಷದ ಗಣೇಶೋತ್ಸವವನ್ನೇ ಮುಂದೂಡಿದ್ದಾರೆ.

      ರದ್ದಾಗಿಲ್ಲ, ಮುಂದೂಡಿದ್ದಾರೆ

      ರದ್ದಾಗಿಲ್ಲ, ಮುಂದೂಡಿದ್ದಾರೆ

      ಅನಿವಾರ್ಯವಾಗಿ ಮುಂಬೈ ಗಣೇಶ ಮಂಡಳದವರು ಈ ಸಾರಿಯ ಗಣೇಶೋತ್ಸವವನ್ನು ಮುಂದೂಡಿದ್ದಾರೆ ಹೊರತು ರದ್ದು ಮಾಡಿಲ್ಲ. 2021 ರ ಫೆಬ್ರವರಿಯ ಮಾಘ ಶುದ್ಧ ಚತುರ್ಥಿಯಲ್ಲಿ ಗಣೇಶೋತ್ಸವವನ್ನು ಆಚರಿಸಲು ಜಿಎಸ್‌ಬಿ ಮಂಡಳ ನಿರ್ಧರಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

      ಕಳೆದ ಆರವತ್ತು ವರ್ಷಗಳಿಂದ

      ಕಳೆದ ಆರವತ್ತು ವರ್ಷಗಳಿಂದ

      ಜಿಎಸ್‌ಬಿ ಗಣೇಶೋತ್ಸವ ಮಂಡಳ ಕಳೆದ ಆರವತ್ತು ವರ್ಷಗಳಿಂದ ಮುಂಬೈನಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸುತ್ತಾ ಬಂದಿದೆ. ಪ್ರತಿ ವರ್ಷ ಗಣೇಶ ಚತುರ್ಥಿಯಲ್ಲಿ ವಡಾಲದಲ್ಲಿ ಹತ್ತು ದಿನ ಅದ್ಧೂರಿ ಗಣೇಶೋತ್ಸವವನ್ನು ಆಚರಿಸಲಾಗುತ್ತದೆ. ದೇಶ ವಿದೇಶದಲ್ಲಿ ಜಿಎಸ್‌ಬಿ ಮಂಡಳದ ಗಣೇಶೋತ್ಸವ ಜನಪ್ರಿಯವಾಗಿದೆ.

      ಮಹಾರಾಷ್ಟ್ರದಲ್ಲಿ 50,231 ಜನರಿಗೆ ಕೊರೊನಾ ಸೋಂಕು

      ಮಹಾರಾಷ್ಟ್ರದಲ್ಲಿ 50,231 ಜನರಿಗೆ ಕೊರೊನಾ ಸೋಂಕು

      ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಹಾವಳಿ ವ್ಯಾಪಕವಾಗಿದೆ ಮಂಗಳವಾರದ ಅಂತ್ಯಕ್ಕೆ 50,231 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದುವರೆಗೆ 1,635 ಜನ ಮೃತಪಟ್ಟಿದ್ದಾರೆ. ಮುಂಬೈ ಒಂದರಲ್ಲಿ 40,438 ಜನರಿಗೆ ಕೊರೊನಾ ತಗುಲಿದೆ. ೧ ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಕೊರೊನಾ ಮುಂಬೈನಲ್ಲಿ ತೀವ್ರ ಆತಂಕ ಹುಟ್ಟಿಹಾಕಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+