ಮಹಾರಾಷ್ಟ್ರದಲ್ಲಿ 6 ಸಾವಿರ, ಮುಂಬೈ ಒಂದರಲ್ಲೇ 4 ಸಾವಿರ ಕೊರೊನಾ ಸೋಂಕಿತ ಪ್ರಕರಣ
ಮುಂಬೈ, ಏಪ್ರಿಲ್ 23: ಮಹಾರಾಷ್ಟ್ರದಲ್ಲಿ ಒಟ್ಟು 6,427 ಕೊರೊನಾ ಸೋಂಕಿತ ಪ್ರಕರಣಗಳಿದ್ದು ಅದರಲ್ಲಿ ಮುಂಬೈ ಒಂದರಲ್ಲೇ 4025 ಪ್ರಕರಣಗಳಿವೆ.
ಮಹಾರಾಷ್ಟ್ರದಲ್ಲಿ ಇಂದು ಮತ್ತೆ 778 ಪ್ರಕರಣಗಳು ದೃಢಪಟ್ಟಿವೆ. ಒಟ್ಟು 283 ಮಂದಿ ಸಾವನ್ನಪ್ಪಿದ್ದಾರೆ.ಮುಂಬೈನಲ್ಲಿ ಇಂದು 522 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ.
ಮುಂಬೈನ ಧಾರಾವಿಯ ಸ್ಲಮ್‌ಗಳಲ್ಲಿ 8ಲಕ್ಷಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. ಅಲ್ಲಿ ಕೊರೊನಾ ಸೋಂಕಿತ ಪ್ರಕರಣ 214ಕ್ಕೆ ತಲುಪಿದ್ದು, ಇದುವರೆಗೆ 13 ಮಂದಿ ಮೃತಪಟ್ಟಿದ್ದಾರೆ.

ಇಡೀ ದೇಶದಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳಿರುವುದು ಮುಂಬೈನಲ್ಲಿ, ಕೊರೊನಾ ಹರಡುವುದನ್ನು ತಡೆಗಟ್ಟಲು ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.
ದೇಶದಲ್ಲಿ 21,700 ಕೊರೊನಾ ಪ್ರಕರಣಗಳಿದ್ದು, 686 ಮಂದಿ ಮೃತಪಟ್ಟಿದ್ದಾರೆ.4325 ಮಂದಿ ಗುಣಮುಖರಾಗಿದ್ದಾರೆ.












Click it and Unblock the Notifications