• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತಕ್ಕೆ 2014ರಲ್ಲಿ ಸಿಕ್ಕಿದ್ದು ನಿಜವಾದ ಸ್ವಾತಂತ್ರ್ಯ ಎಂದ ಕಂಗನಾ ವಿರುದ್ಧ ದೂರು

|
Google Oneindia Kannada News

ಮುಂಬೈ, ನವೆಂಬರ್ 11: ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ದೂರು ದಾಖಲಾಗಿದೆ.

ಆಗ ಸಿಕ್ಕಿದ್ದು ಭಿಕ್ಷೆ, ಭಾರತಕ್ಕೆ 2014 ರಿಂದ ನಿಜವಾದ ಸ್ವಾತಂತ್ರ್ಯ ಬಂದಿದೆ ಎನ್ನುವ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ದ ಮುಂಬೈ ನಲ್ಲಿ ದೂರು ದಾಖಲಾಗಿದೆ.

ಒಂದು ಪಕ್ಷ ಮತ್ತು ವ್ಯಕ್ತಿಯನ್ನು ಹೊಗಳುವ ಭರಾಟೆಯಲ್ಲಿ ಇಷ್ಟು ವರ್ಷ ದೇಶದಲ್ಲಿ ಆಡಳಿತ ನಡೆಸಿದ ವ್ಯವಸ್ಥೆಯನ್ನು ನಟಿ ಕಂಗನಾ ರಾಣಾವತ್ ಅಣಕವಾಡಿದ್ದಾರೆ.ಇದು ಒಂದು ರೀತಿ ದೇಶದ್ರೋಹದ ಪ್ರಕರಣ. ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.

ನಟಿ ಕಂಗನಾ ರಣಾವತ್ ಅವರು ದೇಶದ್ರೋಹದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಅಧ್ಯಕ್ಷೆ ಪ್ರೀತಿ ಮೆನನ್ ದೂರು ದಾಖಲು ಮಾಡಿದ್ದಾರೆ‌
ಕಾರ್ಯಕ್ರಮ ವೊಂದರಲ್ಲಿ ಪಾಲ್ಗೊಂಡ ನಟಿ ಕಂಗನಾ ರಣಾವತ್, ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಬಂದದ್ದು 2014 ರ ನಂತರ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ.


504, 505 ಮತ್ತು 124A ಅಡಿಯಲ್ಲಿ ಅವರ ದೇಶದ್ರೋಹ ಮತ್ತು ಪ್ರಚೋದಕ ಹೇಳಿಕೆ ಅಡಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಬಿಜೆಪಿ ಸಂಸದ ವರುಣ್​ ಗಾಂಧಿ ಕೂಡ ಕಂಗನಾ ಹೇಳಿಕೆಗೆ ಕಿಡಿ ಕಾರಿದ್ದು, ಇದು ದೇಶದ್ರೋಹದ ಹೇಳಿಕೆ ಎಂದು ಟೀಕಿಸಿದ್ದಾರೆ. ಈ ರೀತಿ ಹೇಳಿಕೆ ನೀಡುವುದು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಎಲ್ಲರಿಗೂ ದ್ರೋಹ ಮಾಡಿದಂತಾಗುತ್ತದೆ.

ಸ್ವಾತಂತ್ರ್ಯ ಚಳವಳಿ ಅನೇಕರ ತ್ಯಾಗ ಮತ್ತು ಬಲಿದಾನದಿಂದ ಸಿಕ್ಕಿರುವುದು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇಂತಹ ನಾಚಿಕೆ ಇಲ್ಲದ ಹೇಳಿಕೆಗಳನ್ನು ನೀಡುವುದನ್ನು ಕಂಗನಾ ನಿಲ್ಲಿಸಬೇಕು ಎಂದಿದ್ದಾರೆ.

ಇನ್ನು ಇದಕ್ಕೆ ಇನ್ಸ್ಟಾಗ್ರಾಂ ಮೂಲಕ ಉತ್ತರಿಸಿರುವ ನಟಿ, 1857 ರ ಕ್ರಾಂತಿಯ ಮೊದಲ ಸ್ವಾತಂತ್ರ್ಯ ಹೋರಾಟವನ್ನು ನಾನು ಉಲ್ಲೇಖಿಸಿ ಮಾತನಾಡಿದ್ದೇನೆ. ಇದು ಬ್ರಿಟಿಷರಿಂದ ಹೆಚ್ಚು ದೌರ್ಜನ್ಯಗಳು ಮತ್ತು ಕ್ರೌರ್ಯಗಳಿಗೆ ಕಾರಣವಾಗಿತ್ತು. ಇದಾದ ಸುಮಾರು ಒಂದು ಶತಮಾನದ ನಂತರ ನಮಗೆ ಸ್ವಾತಂತ್ರ್ಯವನ್ನು ಗಾಂಧಿಯವರ ಭಿಕ್ಷಾ ಪಾತ್ರೆಯಲ್ಲಿ ನೀಡಲಾಯಿತು ಎಂದಿದ್ದಾರೆ.

ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ಕುಮಾರ್ ಮಾಂಝಿ ಅವರು ನಟಿಯ ವಿವಾದಾತ್ಮಕ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಕಂಗನಾಗೆ ಅವರಿಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮನವಿ ಮಾಡಿದ್ದಾರೆ.

ಒಂದಲ್ಲ ಒಂದು ಕಿರಿಕ್: ನಟಿ ಕಂಗನಾ ರಣಾವತ್ ಅವರು ಒಂದಲ್ಲ ಒಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವುದು ಇತ್ತೀಚೆಗೆ ರೂಢಿಯಾಗಿದೆ.

ಮುಂಬೈ ಒಂದು ರೀತಿ ಪಾಕಿಸ್ತಾನ ಆಗಿದೆ ಎಂದು ಶಿವಸೇನೆ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದ ಕಂಗನಾಗೆ ಕೇಂದ್ರ ಸರ್ಕಾರ ವೈ ಶ್ರೇಣಿಯ ಭದ್ರತೆ ನೀಡಿದೆ. ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಚಿತ್ರ ರಂಗದ ವಿರುದ್ಧ ಹೇಳಿಕೆ ನೀಡಿ ಒಂದಷ್ಟು ಸುದ್ದಿಯಾಗಿದ್ದರು.

ಜೊತೆಗೆ ಪದ್ಮಶ್ರೀ, ಮೇಲಿಂದ ಮೇಲೆ ಕಂಗನಾ ಚಿತ್ರಗಳಿಗೆ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ನಟಿ ಕಂಗನಾ ಕಾಂಗ್ರೆಸ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳನ್ನು ತೆಗಳುತ್ತಿದ್ದಾರೆ.

English summary
National executive chairman of the Aam Aadmi Party Preethi Menon has filed a complaint with the Mumbai Police seeking an FIR against Bollywood actor Kangana Ranaut for her seditious remarks at a conclave where she was a guest speaker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X