ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Maharashtra Floor Test : ಮಹಾರಾಷ್ಟ್ರದಲ್ಲಿ ಸೋಮವಾರ ಶಿಂಧೆ ಸರ್ಕಾರಕ್ಕೆ 'ವಿಶ್ವಾಸ' ಪರೀಕ್ಷೆ

|
Google Oneindia Kannada News

ಮುಂಬೈ, ಜುಲೈ 04: ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿರುವ ಏಕನಾಥ್ ಶಿಂಧೆ ಸರ್ಕಾರಕ್ಕೆ ಸೋಮವಾರ ಅಗ್ನಿ ಪರೀಕ್ಷೆಯಿದೆ. 10 ದಿನಗಳ ಬಂಡಾಯ ಬಾವುಟ ಹಾರಿಸಿದ ನಂತರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನವಾಗಿದೆ. ತದನಂತರದಲ್ಲಿ ಗದ್ದುಗೆ ಏರಿದ ಶಿಂಧೆ ಸರ್ಕಾರ ಸೋಮವಾರ ಬಹುಮತ ಸಾಬೀತುಪಡಿಸಬೇಕಿದೆ.

ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನದ ಎರಡನೇ ದಿನವಾದ ಸೋಮವಾರ ನೂತನ ಮಹಾರಾಷ್ಟ್ರ ಸರ್ಕಾರವು ವಿಶ್ವಾಸಮತ ಪರೀಕ್ಷೆಯನ್ನು ಎದುರಿಸಲಿದೆ. ಭಾನುವಾರ ಸಂಜೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಮ್ಮ ಬಣದ ಶಾಸಕರೊಂದಿಗೆ ಮುಂಬೈನ ಹೋಟೆಲ್‌ನಲ್ಲಿ ಸಭೆ ನಡೆಸಿದರು. ಇನ್ನೊಂದೆಡೆ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಬಿಜೆಪಿ ಶಾಸಕರು ಮತ್ತು ಪಕ್ಷದ ಇತರ ಮುಖಂಡರೊಂದಿಗೆ ಸಭೆ ನಡೆಸಿ ವಿಶ್ವಾಸಮತ ಯಾಚನೆಗೆ ತಂತ್ರ ರೂಪಿಸಿದ್ದಾರೆ.

ಮಹಾರಾಷ್ಟ್ರ ರಾಜಕೀಯ; ಅಳಿಯ ಸ್ಪೀಕರ್, ಮಾವ ಸಭಾಪತಿ!ಮಹಾರಾಷ್ಟ್ರ ರಾಜಕೀಯ; ಅಳಿಯ ಸ್ಪೀಕರ್, ಮಾವ ಸಭಾಪತಿ!

"ಶಿವಸೇನೆ-ಬಿಜೆಪಿ ಮೈತ್ರಿ ಸರ್ಕಾರವು ವಿಧಾನಮಂಡಲದ ವಿಶೇಷ ಅಧಿವೇಶನದ ಎರಡನೇ ದಿನವಾದ ಸೋಮವಾರ ಬಹುಮತದ ಪರೀಕ್ಷೆಯನ್ನು ಎದುರಿಸಲಿದೆ. ಇಂದು ಎಲ್ಲ ಶಾಸಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ಕಾರ್ಯತಂತ್ರ ಏನೆಂಬುದರ ಬಗ್ಗೆ ಚರ್ಚಿಸಲಾಯಿತು," ಎಂದು ಮೂಲಗಳು ತಿಳಿಸಿವೆ. ಬಹುಮತ ಸಾಬೀತಿಗೆ ಮೈತ್ರಿ ಶಾಸಕರು ಏನೆಲ್ಲಾ ಯೋಜನೆ ಹಾಕಿಕೊಂಡಿದ್ದಾರೆ ಮತ್ತು ಹೇಗೆ ಅಣಿಯಾಗಿದ್ದಾರೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

40 ಶಾಸಕರ ಬೆಂಬಲವನ್ನು ಹೊಂದಿರುವ ಸಿಎಂ ಶಿಂಧೆ

40 ಶಾಸಕರ ಬೆಂಬಲವನ್ನು ಹೊಂದಿರುವ ಸಿಎಂ ಶಿಂಧೆ

ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಮಗೆ 40 ಬಂಡಾಯ ಶಾಸಕರ ಬೆಂಬಲವಿದೆ ಎಂದು ಪ್ರತಿಪಾದಿಸುತ್ತಿದ್ದಾರೆ. ಈ ಹಿನ್ನೆಲೆ ಈಗಾಗಲೇ ಸ್ಪೀಕರ್ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯು ಸೋಮವಾರದ ವಿಶ್ವಾಸಮತಯಾಚನೆಯಲ್ಲೂ ಯಶಸ್ವಿಯಾಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಶಿಂಧೆ ಸರ್ಕಾರ 166 ಮತಗಳಿಂದ ಬಹುಮತ ಸಾಬೀತುಪಡಿಸಲಿದೆ ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ನಾವು ವಿಶ್ವಾಸಮತದಲ್ಲಿ ಗೆಲ್ಲುತ್ತೇವೆ ಎಂದ ಡಿಸಿಎಂ

ನಾವು ವಿಶ್ವಾಸಮತದಲ್ಲಿ ಗೆಲ್ಲುತ್ತೇವೆ ಎಂದ ಡಿಸಿಎಂ

"2 ಶಾಸಕರು ಆರೋಗ್ಯ ಸಮಸ್ಯೆಯಿಂದ ಬರಲು ಸಾಧ್ಯವಾಗದ ಕಾರಣ ಭಾನುವಾರ ನಡೆದ ಸ್ಪೀಕರ್ ಚುನಾವಣೆಯಲ್ಲಿ ನಮ್ಮ ಸ್ಪೀಕರ್ ಅಭ್ಯರ್ಥಿ 164 ಮತಗಳಿಂದ ಗೆಲುವು ಸಾಧಿಸಿದ್ದಾರೆ. ವಿಶ್ವಾಸ ಮತದಲ್ಲಿ 166 ಮತಗಳಿಂದ ಬಹುಮತ ಸಾಬೀತು ಪಡಿಸಲಿದ್ದೇವೆ ಎಂದು ಡಿಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

ಬಹುಮತ ಸಾಬೀತಿನ ಲೆಕ್ಕಾಚಾರ ಹೇಗಿದೆ?

ಬಹುಮತ ಸಾಬೀತಿನ ಲೆಕ್ಕಾಚಾರ ಹೇಗಿದೆ?

288 ಸದಸ್ಯರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 106 ಶಾಸಕರನ್ನು ಹೊಂದಿದೆ. ಸಿಎಂ ಏಕನಾಥ್ ಶಿಂಧೆ 39 ಬಂಡಾಯ ಶಿವಸೇನೆ ಶಾಸಕರು ಮತ್ತು ಕೆಲವು ಸ್ವತಂತ್ರ ಶಾಸಕರ ಬೆಂಬಲವನ್ನು ಹೊಂದಿದ್ದಾರೆ. ಇತ್ತೀಚೆಗೆ ಶಿವಸೇನೆಯ ಶಾಸಕರೊಬ್ಬರ ಮರಣದ ನಂತರ, ವಿಧಾನಸಭೆಯ ಪ್ರಸ್ತುತ ಬಲವು 287ಕ್ಕೆ ಇಳಿದಿದೆ, ಹೀಗಾಗಿ ಬಹುಮತಕ್ಕೆ 144 ಮತಗಳ ಅಗತ್ಯವಿದೆ.

ಸ್ಪೀಕರ್ ಚುನಾವಣೆಯಲ್ಲಿ ಶಿಂಧೆ ಬಣಕ್ಕೆ ಗೆಲುವು

ಸ್ಪೀಕರ್ ಚುನಾವಣೆಯಲ್ಲಿ ಶಿಂಧೆ ಬಣಕ್ಕೆ ಗೆಲುವು

ಶಿವಸೇನಾ ಅಭ್ಯರ್ಥಿ ರಾಜನ್ ಸಾಲ್ವಿ ಅನ್ನು ಸೋಲಿಸಿ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಆಗಿ ಬಿಜೆಪಿಯ ರಾಹುಲ್ ನಾರ್ವೇಕರ್ ಆಯ್ಕೆಯಾಗಿದ್ದಾರೆ. ಆ ಮೂಲಕ ಶಿಂಧೆ ನೇತೃತ್ವದ ಪಾಳಯ ಮತ್ತು ಬಿಜೆಪಿ ಭಾನುವಾರ ಭರ್ಜರಿ ಗೆಲುವು ಸಾಧಿಸಿದೆ. ಏಕನಾಥ್ ಶಿಂಧೆ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಎರಡು ಶಿವಸೇನೆ ಬಣಗಳ ನಡುವೆ ನಡೆಯುತ್ತಿರುವ ಕದನದ ನಡುವೆ, ಭಾನುವಾರದಂದು ಸ್ಪೀಕರ್ ಚುನಾವಣೆಯ ಸಂದರ್ಭದಲ್ಲಿ ಆಯಾ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಲು ಎರಡೂ ಪಕ್ಷಗಳು ತಮ್ಮ ಶಾಸಕರಿಗೆ ಪ್ರತ್ಯೇಕ ವಿಪ್ ನೀಡಿದ್ದರೂ ಪರಸ್ಪರ ವಿಪ್ ಉಲ್ಲಂಘಿಸಿರುವ ಬಗ್ಗೆ ಆರೋಪಿಸಲಾಗಿದೆ.

ಉದ್ಧವ್ ಠಾಕ್ರೆ ಪಾಳಯದಲ್ಲಿರುವ ಶಿವಸೇನೆ ಸಂಸದ ಅರವಿಂದ್ ಸಾವಂತ್, ಪಕ್ಷದ 39 ಶಾಸಕರು ತಮ್ಮ ವಿಪ್ ಅನ್ನು ಪಾಲಿಸಲಿಲ್ಲ, ಆದ್ದರಿಂದ ಅವರನ್ನು ರಾಜ್ಯ ವಿಧಾನಸಭೆಯಿಂದ ಅನರ್ಹಗೊಳಿಸುವಂತೆ ಕೋರಿವುದಾಗಿ ಹೇಳಿದರು. "ನಮ್ಮ 39 ಶಾಸಕರು ನಮ್ಮ ವಿಪ್ ಅನ್ನು ಪಾಲಿಸಲಿಲ್ಲ ಮತ್ತು ಪಕ್ಷದ ಆದೇಶವನ್ನು ಪಾಲಿಸಲಿಲ್ಲ, ಆದ್ದರಿಂದ ಅವರನ್ನು ಅನರ್ಹಗೊಳಿಸುವಂತೆ ನೂತನ ಸ್ಪೀಕರ್ ರಾಹುಲ್ ನಾರ್ವೇಕರ್ ಬಳಿ ಕೋರಿದ್ದೇವೆ. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಅಜಯ್ ಚೌಧರಿ ಅವರನ್ನು ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಸಾವಂತ್ ಹೇಳಿದರು.

ನೂತನ ಸ್ಪೀಕರ್ ಬಳಿ 16 ಶಾಸಕರ ಅನರ್ಹತೆಯ ಅರ್ಜಿ

ನೂತನ ಸ್ಪೀಕರ್ ಬಳಿ 16 ಶಾಸಕರ ಅನರ್ಹತೆಯ ಅರ್ಜಿ

ಸಿಎಂ ಏಕನಾಥ್ ಶಿಂಧೆ ನೇತೃತ್ವದ ಬಣದ ವಿರುದ್ಧ ಮುಖ್ಯ ಸಚೇತಕ ಭರತ್ ಗೊಗವಾಲೆ ಕಳುಹಿಸಿರುವ ಪತ್ರವನ್ನು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ದಾಖಲೆಯಾಗಿ ತೆಗೆದುಕೊಂಡಿದ್ದಾರೆ. 16 ಶಾಸಕರು ಶಿವಸೇನೆ ವಿಪ್ ಉಲ್ಲಂಘಿಸಿದ್ದಾರೆ ಎಂದು ಗೋಗಾವಾಲೆ ಹೇಳಿದ್ದಾರೆ. ಭಾನುವಾರ ನಡೆದ ಸ್ಪೀಕರ್ ಚುನಾವಣೆಯಲ್ಲಿ ನಾರ್ವೇಕರ್ ಪರವಾಗಿ ಬಿಜೆಪಿಯ106 ಶಾಸಕರು ಸೇರಿದಂತೆ ಒಟ್ಟು 164 ಮತಗಳನ್ನು ಪಡೆದಿದ್ದರೆ, ಶಿವಸೇನೆ ಅಭ್ಯರ್ಥಿಯು 107 ಮತಗಳನ್ನು ಪಡೆದಿದ್ದರು. ಸ್ಪೀಕರ್ ಚುನಾವಣೆ ವೇಳೆ 12 ಸದಸ್ಯರು ಮತ್ತು 3 ಶಾಸಕರು ಮತದಾನಕ್ಕೆ ಗೈರಾಗಿದ್ದರು.

ಇತ್ತೀಚಿನ ಬೆಳವಣಿಗೆಯಲ್ಲಿ, ಶಿವಸೇನೆಯ ಉದ್ಧವ್ ಠಾಕ್ರೆ ಬಣವು ಶಿಂಧೆ ಸೇರಿದಂತೆ 16 ಶಾಸಕರನ್ನು ಅನರ್ಹಗೊಳಿಸಲು ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಮಹಾರಾಷ್ಟ್ರ ವಿಧಾನಸಭೆಯ ನೂತನ ಸ್ಪೀಕರ್ ರಾಹುಲ್ ನಾರ್ವೇಕರ್ , "16 ಶಾಸಕರು ತಮ್ಮ ವಿಪ್ ಉಲ್ಲಂಘಿಸಿದ್ದಾರೆ ಮತ್ತು ಅವರು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದನ್ನು ನಾನು ಗಮನಿಸಿದ್ದೇನೆ," ಎಂದು ಹೇಳಿದರು.

ಠಾಕ್ರೆಗೆ ತಿರುಗೇಟು ಕೊಟ್ಟ ಏಕನಾಥ್ ಶಿಂಧೆ

ಠಾಕ್ರೆಗೆ ತಿರುಗೇಟು ಕೊಟ್ಟ ಏಕನಾಥ್ ಶಿಂಧೆ

ಮುಖ್ಯಮಂತ್ರಿಯಾಗಿ ಭಾನುವಾರ ಮಹಾರಾಷ್ಟ್ರ ವಿಧಾನಸಭೆಯ ಕಲಾಪವನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾಷಣದಲ್ಲಿ ಏಕನಾಥ್ ಶಿಂಧೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅನ್ನು ಹೊಗಳಿದರು. ತಮ್ಮ ಪಕ್ಷಕ್ಕಿಂತ ಹೆಚ್ಚಿನ ಸದಸ್ಯರನ್ನು ಹೊಂದಿದ್ದರೂ ಸರ್ಕಾರವನ್ನು ಮುನ್ನಡೆಸಲು ತಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದು ಹಲವರ ಕಣ್ಣು ತೆರೆಸಿದೆ," ಎಂದು ಹೇಳಿದರು.

ರಾಜ್ಯದಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಪತನಗೊಂಡ ನಂತರ, ಪಕ್ಷದ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ನಂಬಿಕೆಯ ಆಧಾರದ ಮೇಲೆ "ಬಿಜೆಪಿ-ಶಿವಸೇನಾ ಸರ್ಕಾರ" ಅಧಿಕಾರ ವಹಿಸಿಕೊಂಡಿದೆ ಎಂದು ಶಿಂಧೆ ಹೇಳಿದರು.

Recommended Video

Miss India ಪ್ರಶಸ್ತಿ ಗೆದ್ದ Sini Shetty ಯಾರು | *Entertainment | OneIndia Kannada

English summary
CM Eknath Shinde-led Maharashtra govt to face floor test on Monday; Here Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X