ಬಂದ್‌: ಗುಂಪುಗಳ ನಡುವೆ ಘರ್ಷಣೆ, ಉದ್ವಿಗ್ನಗೊಂಡ ಉದಗಿರಿ

ಮುಂಬೈ, ಜು.25: ಮರಾಠಿಗರಿಗೆ ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ವಿವಿಧ ಮರಾಠ ಸಂಘಟನೆಗಳು ಮಹಾರಾಷ್ಟ್ರ ಬಂದ್‌ ಆಚರಿಸುತ್ತಿದ್ದಾರೆ.

ಹೋರಾಟ ತೀವ್ರಗೊಂಡಿದ್ದು ಉದಗಿರಿಯಲ್ಲಿ ಒತ್ತಾಯಪೂರ್ವಕವಾಗಿ ಮಳಿಗೆಗಳನ್ನು ಬಂದ್‌ ಮಾಡಿಸುತ್ತಿದ್ದ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಂದರ್ಭವನ್ನು ಹತೋಟಿಗೆ ತರಲು ಯಶಸ್ವಿಯಾಗಿದ್ದಾರೆ.

ಸುಮಾರು ದಿನಗಳಿಂದ ಈ ಬೇಡಿಕೆ ಈಡೇರಿಸುವಂತೆ ಕೇಂದ್ರ ಮತ್ತು ಮಹರಾಷ್ಟ್ರದ ಸರ್ಕಾರದ ವಿರುದ್ಧ ಸಮುದಾಯದ ಮುಖಂಡರು ಹೋರಾಟ ನಡೆಸುತ್ತಿದ್ದರು. ಇದೀಗ ನಿನ್ನೆಯಿಂದ ಮಹಾರಾಷ್ಟ್ರದಲ್ಲಿ ಹಿಂಸಾಸ್ವರೂಪದ ಹೋರಾಟ ನಡೆಸುತ್ತಿದ್ದಾರೆ. ಇಂದು ಬಂದ್​ಗೆ ಕರೆ ನೀಡಿರುವ ಸಮುದಾಯದ ಕಾರ್ಯಕರ್ತರು, ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದ್ಧಾರೆ.

Clashes break out between two groups in Udgir

ಮರಾಠ ಸಮುದಾಯ ಹಲವು ವರ್ಷಗಳಿಂದಲೇ ಸಮುದಾಯಕ್ಕೆ ಒಬಿಸಿ ಕೋಟಾದಲ್ಲಿ ವಿಶೇಷ ಮೀಸಲಾತಿಗಾಗಿ ನೀಡುವಂತೆ ಆಗ್ರಹಿಸುತ್ತಲೇ ಬಂದಿದೆ. ಈ ಸಂಬಂಧ ಬಾಂಬೆ ಹೈಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆಯೂ ಕೂಡ ನಡೆಯುತ್ತಿದೆ. ಈ ಹಿಂದಿನ ದೇವೇಂದ್ರ ಫಡ್ನವೀಸ್​ ಸರ್ಕಾರ 72 ಸಾವಿರ ಹುದ್ದೆಗಳಲ್ಲಿ ಶೇಕಡಾ 16 ರಷ್ಟು ಬ್ಯಾಕ್ ​ಲಾಗ್​ ಹುದ್ದೆಗಳನ್ನು ನೀಡುವುದಾಗಿ ಮರಾಠ ಸಮುದಾಯಕ್ಕೆ ತಿಳಿಸಿತ್ತು.

ಮರಾಠ ಸಮುದಾಯದ ಬೇಡಿಕೆಗಳೇನು: ಆರ್ಥಿಕವಾಗಿ ಹಿಂದುಳಿದ ಮರಾಠ ಸಮುದಾಯಕ್ಕೆ ಶೇ.16ರಷ್ಟು ಮೀಸಲಾತಿ ನೀಡಬೇಕು, ಜತೆಗೆ ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕು. ಮರಾಠ ಸಮುದಾಯದ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರವನ್ನು ನಿಲ್ಲಿಸಬೇಕು.ಮರಾಠ ಸಮುದಾಯದ ರೈತರಿಗಾಗಿ ಪಿಂಚಣಿ ಯೋಜನೆ ಆರಂಭಿಸಬೇಕು, ಕೃಷಿ ಉತ್ಪನ್ನಗಳ ದರ ಹೆಚ್ಚಿಸಬೇಕು. ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎನ್ನುವುದು ಪ್ರಮುಖ ಬೇಡಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+