• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುಶಾಂತ್ ಸಾವು ಪ್ರಕರಣ: ರಿಯಾ ವಿರುದ್ಧ ಸಿಬಿಐ ಎಫ್ಐಆರ್

|

ಮುಂಬೈ, ಆ. 6: ಜನಪ್ರಿಯ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನ್ನ ತನಿಖೆ ಆರಂಭಿಸಿದೆ. ಸುಶಾಂತ್‌ ಸಿಂಗ್‌ ರಜಪೂತ್‌ ಲಿವ್‌ ಇನ್‌ ಪಾರ್ಟ‌ನರ್‌ ರಿಯಾ ಚಕ್ರವರ್ತಿ ಸೇರಿದಂತೆ ಹಲವಾರು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಎಫ್ಐಆರ್ ಹಾಕಿದೆ.

ಇನ್ನೊಂದೆಡೆ ತನಿಖೆ ಮುಂದುವರೆಸಿರುವ ಜಾರಿ ನಿರ್ದೇಶನಾಲಯವು ವಿಚಾರಣೆಗೆ ಹಾಜರಾಗಲು ನಟಿ ರಿಯಾ ಚಕ್ರವರ್ತಿಗೆ ಸಮನ್ಸ್ ಜಾರಿ ಮಾಡಿದೆ. ಆಗಸ್ಟ್ 7ರಂದು ಮುಂಬೈನ ಕಚೇರಿಗೆ ಖುದ್ದು ಹಾಜರಾಗಲು ತಿಳಿಸಲಾಗಿದೆ

ಸುಶಾಂತ್ ಸಿಂಗ್ ಕೇಸ್: ಸುಪ್ರೀಂಕೋರ್ಟ್ ಹೇಳಿದ ಪ್ರಮುಖ ಅಂಶಗಳು

ಸುಶಾಂತ್ ಸಿಂಗ್ ಅವರ ತಂದೆ ಕೆಕೆ ಸಿಂಗ್ ಅವರು ಬಿಹಾರ ಪೊಲೀಸರ ಬಳಿ ರಿಯಾ ವಿರುದ್ಧ ದೂರು ದಾಖಲಿಸಿದ್ದರು. ಈ ಮಾಹಿತಿಯನ್ನು ಪಡೆದುಕೊಂಡಿರುವ ಸಿಬಿಐ ತಂಡವು, ರಿಯಾ ಚಕ್ರವರ್ತಿ, ಸೌಮಿಕ್ ಚಕ್ರವರ್ತಿ, ಸ್ಯಾಮುಯಲ್ ಮಿರಾಂಡಾ, ಶ್ರುತಿ ಮೋದಿ, ಇಂದ್ರಜೀತ್ ಚಕ್ರವರ್ತಿ, ಸಂಧ್ಯಾ ಚಕ್ರವರ್ತಿ ಸೇರಿದಂತೆ ಹಲವಾರು ಮಂದಿ ವಿರುದ್ಧ ಎಫ್ಐಆರ್ ಹಾಕಿದೆ.

ಮುಂಬೈ ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಸುಶಾಂತ್ ಅಪ್ಪ ಕೆಕೆ ಸಿಂಗ್ ಕಿಡಿ

ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ಸಿಂಗ್ ಬಾಂದ್ರಾದಲ್ಲಿರುವ ತಮ್ಮ ಫ್ಲ್ಯಾಟ್‌ನಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಸಂಬಂಧ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಿಹಾರ ಪೊಲೀಸರು ಕೂಡಾ ತನಿಖೆ ಕೈಗೆತ್ತಿಕೊಂಡಿದ್ದರು. ಈ ನಡುವೆ ಮಹಾರಾಷ್ಟ್ರ ಹಾಗೂ ಬಿಹಾರ ಸರ್ಕಾರದ ನಡುವೆ ತನಿಖೆ ಪೈಪೋಟಿ, ಸುಶಾಂತ್ ಆಪ್ತರ ಆಗ್ರಹಪೂರ್ವಕ ಮನವಿಯಂತೆ ಕೇಂದ್ರ ಸರ್ಕಾರವು ಪ್ರಕರಣವನ್ನು ಸಿಬಿಐಗೆ ವಹಿಸಿದೆ.

English summary
CBI registers FIR against Rhea Chakraborty, Indrajit Chakraborty, Sandhya Chakraborty, Showik Chakraborty, Samuel Miranda, Shruti Modi, and others in connection with #SushantSinghRajput's death case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X