ಶೀನಾ ಬೊರಾ ಹತ್ಯೆ: ಸಂಚು ರೂಪಿಸಿದ್ದು ಪೀಟರ್ ಮುಖರ್ಜಿಯೇ!

Posted By:
Subscribe to Oneindia Kannada

ಮುಂಬೈ, ಫೆ. 17: ಶೀನಾ ಬೊರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯಕ್ಕೆ ಸಿಬಿಐ ತಂಡ ಹೊಸದಾಗಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದೆ. ಶೀನಾ ಹತ್ಯೆಗೆ ಸಂಚು ರೂಪಿಸಿದ್ದು ಇಂದ್ರಾಣಿಯಲ್ಲ, ಪೀಟರ್ ಮುಖರ್ಜಿ ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಸಿಬಿಐ ತನ್ನ ಚಾರ್ಜ್ ಶೀಟ್ ನಲ್ಲಿ ಹೇಳಿದೆ.

ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಅವರ ಪತಿ ಪೀಟರ್ ಮುಖರ್ಜಿ ಅವರು ತಮ್ಮ ಮಲ ಮಗಳಾದ ಶೀನಾ ಹತ್ಯೆ ಮಾಡಲು ಸಂಪೂರ್ಣ ಸ್ಕೆಚ್ ಹಾಕಿದ್ದರು. 2009ರಲ್ಲೆ ಸ್ಕೆಚ್ ತಯಾರಿಸಲಾಗಿತ್ತು. ಆದರೆ, ಇಂದ್ರಾಣಿ ಬಗ್ಗೆ ವಿವರಗಳಿದ್ದ ದಾಖಲೆಗಳನ್ನು ಶೀನಾ ತನ್ನ ಗೆಳತಿಯೊಬ್ಬರಿಗೆ ಇಮೇಲ್ ಮಾಡಿದ್ದು ಪತ್ತೆಯಾದ ಮೇಲೆ ಆಕೆಯನ್ನು ಕೊಲ್ಲಲು ದಂಪತಿ ಮುಂದಾಗಿದ್ದಾರೆ. [ಶೀನಾ ಬೋರಾ ಕೊಲೆ ಪ್ರಕರಣ ಸಿಬಿಐ ತನಿಖೆಗೆ]

ಇಂದ್ರಾಣಿ ಒಳ್ಳೆ ತಾಯಿಯಲ್ಲ, ನನಗೆ ಯಾವುದೇ ಸ್ವಾತಂತ್ರ್ಯ ನೀಡುತ್ತಿಲ್ಲ. ರಿಲಯನ್ಸ್ ನಲ್ಲಿ ನಾನು ಉದ್ಯೋಗ ತೊರೆಯುವಂತೆ ಮಾಡಿದರು ಎಂದು ತಾಯಿಯ ಬಗ್ಗೆ ಶೀನಾ ಬರೆದುಕೊಂಡಿದ್ದರು. ಇದಲ್ಲದೆ, ಶೀನಾ ಅವರ ಸೋದರ ಮೈಕಲ್ ಅವರ ಹತ್ಯೆಗೂ ಇಂದ್ರಾಣಿ ಹಾಗೂ ಪೀಟರ್ ಜೋಡಿ ಯತ್ನಿಸಿತ್ತು ಎಂದು ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ.

ಖಚಿತ ಪಡಿಸಿದ ಕಾಲ್ ರೆಕಾರ್ಡ್

ಖಚಿತ ಪಡಿಸಿದ ಕಾಲ್ ರೆಕಾರ್ಡ್

ಏಪ್ರಿಲ್ 24 ರಿಂದ 25, 2012 ರ ತನಕ ಇಂದ್ರಾಣಿ ಹಾಗೂ ಪೀಟರ್ ನಡುವಿನ ಫೋನ್ ಸಂಭಾಷಣೆ ವಿವರಗಳನ್ನು ಆಲಿಸಿದ ಪೊಲೀಸರಿಗೆ ಇವರಿಬ್ಬರು ಮಾಡಿದ ಸಂಚು ಬಯಲಿಗೆಳೆಯಲು ಸಾಧ್ಯವಾಗಿದೆ. ಆಗ ಪೀಟರ್ ಯುಕೆಯಲ್ಲಿ, ಇಂದ್ರಾಣಿ ಭಾರತದಲ್ಲಿದ್ದರು. ಶೀನಾ ಕೊಲೆಯಾದ ಮೇಲೆ ಶೀನಾ ಇನ್ನೂ ಯುಎಸ್ ನಲ್ಲಿದ್ದಾಳೆ ಎಂದು ಕಥೆ ಕಟ್ಟಿದರು. ಹೊಸ ಬಾಯ್ ಫ್ರೆಂಡ್ ಸಿಕ್ಕಿದ್ದಾನೆ. ಪೀಟರ್ ಅವರ ಮಗ ರಾಹುಲ್ ಜೊತೆ ಇಲ್ಲ ಎಂದು ರೂಪಿಸಿದರು.

ವಿಚಾರಣೆ ಬಳಿಕ ಪ್ರಕರಣ ಮತ್ತೊಂದು ತಿರುವು ಸಿಕ್ಕಿತ್ತು

ವಿಚಾರಣೆ ಬಳಿಕ ಪ್ರಕರಣ ಮತ್ತೊಂದು ತಿರುವು ಸಿಕ್ಕಿತ್ತು

9 ‌ಎಕ್ಸ್ ಸುದ್ದಿ ಸಂಸ್ಥೆ ಸ್ಥಾಪಕ ಪೀಟರ್ ಅವರ ಬಂಧನ, ವಿಚಾರಣೆ ಬಳಿಕ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. 24 ವರ್ಷ ವಯಸ್ಸಿನ ಶೀನಾ ಹತ್ಯೆಗೆ ಸಂಬಂಧಿಸಿದಂತೆ ಪೀಟರ್ ಮುಖರ್ಜಿ ವಿರುದ್ಧ ಪೊಲೀಸ್ ತಂಡ ಐಪಿಸಿ ಸೆಕ್ಷನ್ 302, 201, 34, 420, 364 ಹಾಗೂ 120 ಬಿ ಅನ್ವಯ ಪ್ರಕರಣ ದಾಖಲಿಸಿಕೊಂಡಿತ್ತು.

ಭಾರಿ ಹಣಕಾಸು ಅವ್ಯವಹಾರದ ಶಂಕೆ

ಭಾರಿ ಹಣಕಾಸು ಅವ್ಯವಹಾರದ ಶಂಕೆ

ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಾಣಿ ಅವರ ಕಾರು ಚಾಲಕ ಶ್ಯಾಮ್ ರಾಯ್, ಇಂದ್ರಾಣಿ ಅವರ ಮಾಜಿ ಪತಿ ಸಂಜೀವ್ ಖನ್ನಾರನ್ನು ಈಗಾಗಲೇ ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. 2012ರ ಏ.24ರಂದು ಶೀನಾ ಬೋರಾ ಹತ್ಯೆಯಾಗಿತ್ತು. ಪ್ರಕರಣದಲ್ಲಿ ಭಾರಿ ಮೊತ್ತದ ಹಣಕಾಸು ಅವ್ಯವಹಾರ ಇರುವುದರಿಂದ ತನಿಖೆಯನ್ನು ಸಿಬಿಐಗೆ ಮಹಾರಾಷ್ಟ್ರ ಸರ್ಕಾರ ವಹಿಸಿತ್ತು.

ಶೀನಾಗೆ ಹಿಂಸೆ ಕೊಡುತ್ತಿದ್ದ ಇಂದ್ರಾಣಿ

ಶೀನಾಗೆ ಹಿಂಸೆ ಕೊಡುತ್ತಿದ್ದ ಇಂದ್ರಾಣಿ

ಕೊಲೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಶೀನಾ ಸಹೋದರ ಮಿಖಾಯಲ್ , ತಾಯಿ ನನ್ನ ಪಾಕೆಟ್ ಮನಿಗೆ ಅಡ್ಡಗಾಲು ಹಾಕುತ್ತಿದ್ದಾರೆ. ಅಲ್ಲದೇ ಬೆದರಿಕೆ ಹಾಕುತ್ತಿದ್ದಾರೆ ಎಂದು ಶೀನಾ ಹೇಳಿಕೊಂಡಿದ್ದಳು ಎಂದು ತಿಳಿಸಿದ್ದರು. ಇದೇ ವಿಷಯವನ್ನು ಶೀನಾ ಕೂಡಾ ತನ್ನ ಆಪ್ತರಿಗೆ ಇಮೇಲ್ ಮಾಡಿದ್ದಳು. ಪೀಟರ್ ಅವರ ಮಗ ರಾಹುಲ್ ಜೊತೆ ಓಡಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಇಂದ್ರಾಣಿ ಕೊನೆಗೆ ಶೀನಾಳನ್ನು ಬಲಿ ಪಡೆದುಕೊಂಡರು.


ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The supplementary chargesheet filed by the CBI yesterday stated in details former INX Media Chief Peter Mukerjea's involvement in the murder conspiracy of Sheena Bora, along with his wife Indrani Mukerjea.
Please Wait while comments are loading...