• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಮಾನ ಅಪಹರಣ ಬೆದರಿಕೆ ಹಾಕಿದ್ದ ಮುಂಬೈ ಉದ್ಯಮಿಗೆ ಜೀವಾವಧಿ ಜೈಲು, 5 ಕೋಟಿ ಜುಲ್ಮಾನೆ

|

ಮುಂಬೈ ಮೂಲದ ಉದ್ಯಮಿಗೆ ಮಂಗಳವಾರ ಎನ್ ಐಎ ವಿಶೇಷ ಕೋರ್ಟ್ ನಿಂದ 5 ಕೋಟಿ ಜುಲ್ಮಾನೆ ಹಾಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅಂದ ಹಾಗೆ ಆತ ಮಾಡಿದ ತಪ್ಪೇನು ಗೊತ್ತೆ? 2017ರ ಅಕ್ಟೋಬರ್ ನಲ್ಲಿ ಜೆಟ್ ಏರ್ ವೇಸ್ ನ ವಿಮಾನವನ್ನು ಅಪಹರಿಸುವುದಾಗಿ ಬೆದರಿಕೆ ಹಾಕಿದ್ದ.

ಆರೋಪಿ ಬಿರ್ಜು ಸಲ್ಲಾನಿಂದ ವಸೂಲಾಗುವ ದಂಡದ ಮೊತ್ತವನ್ನು ಆ ದಿನ ತೊಂದರೆಗೆ ಈಡಾದ ವಿಮಾನದ ಸಿಬ್ಬಂದಿ, ಪ್ರಯಾಣಿಕರಿಗೆ ವಿತರಿಸುವಂತೆ ನ್ಯಾ.ಕೆ.ಎಮ್. ದವೆ ಅವರು ಹೇಳಿದ್ದಾರೆ. ವಿಮಾನದ ಶೌಚಾಲಯದಲ್ಲಿ ಇಂಗ್ಲಿಷ್ ಹಾಗೂ ಉರ್ದುವಿನಲ್ಲಿ ಬರೆದಿಟ್ಟಿದ್ದ ವಿಮಾನ ಅಪಹರಣ ಬೆದರಿಕೆಯ ಪತ್ರವನ್ನು ಇಟ್ಟಿದ್ದ.

ಆಗಸಕ್ಕೆ ಹಾರಿದ ಕೆಲವೇ ಕ್ಷಣಗಳಲ್ಲಿ ಸಿಂಗಾಪುರ ಏರ್‌ಲೈನ್ಸ್‌ಗೆ ಹುಸಿ ಬಾಂಬ್ ಕರೆ

ಆ ಘಟನೆ ನಂತರ 'ನ್ಯಾಷನಲ್ ನೋ ಫ್ಲೈ ಲಿಸ್ಟ್' ಸೇರಿದ ಮೊದಲ ವ್ಯಕ್ತಿ ಸಲ್ಲಾ. ಅತ್ಯಂತ ಕಠಿಣವಾದ ಹೈಜಾಕ್ ವಿರೋಧಿ ಕಾಯ್ದೆಯನ್ನು ದಾಖಲಿಸಲಾದ ಮೊದಲ ವ್ಯಕ್ತಿ ಕೂಡ ಈತನೇ. ಕಳೆದ ವರ್ಷ ಜನವರಿಯಲ್ಲಿ ಈತನ ವಿರುದ್ಧ ಎನ್ ಐಎ ಆರೋಪ ಪಟ್ಟಿ ಸಲ್ಲಿಸಿತ್ತು.

ಆತನನ್ನು ಆಗಲೇ ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ತನ್ನ ತಪ್ಪನ್ನು ಆತ ಒಪ್ಪಿಕೊಂಡಿದ್ದ. ದೆಹಲಿಯಲ್ಲಿ ಜೆಟ್ ಏರ್ ವೇಸ್ ಮುಚ್ಚಿದರೆ ತನ್ನ ಗೆಳತಿ ಮುಂಬೈಗೆ ಮರಳಿ ಬರುತ್ತಾಳೆ ಎಂದು ಹಾಗೆ ಮಾಡಿದ್ದಾಗಿ ಹೇಳಿಕೊಂಡಿದ್ದ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mumbai based businessman get life time imprisonment and 5 crore fine for hoax flight hijack threat. NIA Tuesday announced the verdict. Birju Salla is the businessman, who booked under anti hijacking act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more