ವೈದ್ಯೆಯರ ಸ್ನಾನದ ದೃಶ್ಯ ಸೆರೆ: ವೈದ್ಯನ ಬಂಧನ

bombay-hospital-doc-yash-shah-held-filming-female-colleagues-bathing
ಮುಂಬೈ, ಡಿ.19: ತನ್ನಿಬ್ಬರು ಮಹಿಳಾ ಸಹೋದ್ಯೋಗಿಗಳು ಸ್ನಾನ ಮಾಡುತ್ತಿರುವ ದೃಶ್ಯಗಳನ್ನು ಚಿತ್ರೀಕರಿಸಿದ ಆರೋಪದ ಮೇಲೆ ಯುವ ವೈದ್ಯನೊಬ್ಬನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

ಪೂನಾ ಮೂಲದ ಡಾ. ಯಶ್ ಷಾ ಎಂಬ 27 ವರ್ಷದ ವೈದ್ಯ ಮಹಾಶಯ ಬಾಂಬೆ ಆಸ್ಪತ್ರೆಯಲ್ಲಿ ಈ ಗಲೀಜು ಕೃತ್ಯವೆಸಗಿದ್ದಾನೆ. ಬಾಂಬೆ ಆಸ್ಪತ್ರೆಯ ಪಿಜಿ ಕ್ವಾರ್ಟರ್ಸ್ ನಲ್ಲಿ ವಾಸವಿದ್ದ ಬಾಧಿತ ಮಹಿಳಾ ವೈದ್ಯರು ಜಳಕವಾಡುತ್ತಿರುವಾಗ ಆರೋಪಿ ಯಶ್, ತನ್ನ ಮೊಬೈಲಿನಿಂದ ಆ ದೃಶ್ಯಗಳನ್ನು ವಿಡಿಯೋ ಮಾಡಿದ್ದಾನೆ. ಡಿಸೆಂಬರ್ 17ರಂದು ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ಮೊಬೈಲ್ ಫೋನನ್ನು ವಶಪಡಿಸಿಕೊಂಡಿದ್ದಾರೆ.

ಆರ್ಥೋಪಿಡಿಕ್ಸ್ ವಿಷಯದಲ್ಲಿ ಸ್ನಾತಕೋತ್ತರ ಮಾಡುತ್ತಿರುವ ಡಾ. ಯಶ್ ಷಾ, ಆಸ್ಪತ್ರೆಯ 15ನೇ ಅಂತಸ್ತಿನಲ್ಲಿರುವ ಪಿಜಿ ಕೋಣೆಯಲ್ಲಿ ಡಿ. 13ರಂದು ಒಬ್ಬ ಮಹಿಳಾ ವೈದ್ಯೆ ಸ್ನಾನ ಮಾಡುತ್ತಿದ್ದಾಗ ಮತ್ತು ಡಿ. 15ರಂದು ಮತ್ತೊಬ್ಬ ಮಹಿಳಾ ವೈದ್ಯೆ ಸ್ನಾನ ಮಾಡುತ್ತಿದ್ದಾಗ ವಿಡಿಯೋ ಚಿತ್ರೀಕರಣ ಮಾಡಿದ್ದ ಎಂದು ಆರೋಪಿಸಲಾಗಿದೆ. ಮಹಿಳೆಯರು ಮತ್ತು ಪುರುಷರ ಪಿಜಿ ಕೋಣೆಗಳು ಅಕ್ಕಪಕ್ಕ ಇದ್ದು, ನಡುವಣ ಸಣ್ಣ ಬಿರುಕಿನಿಂದ ಮಹಿಳೆಯರ ಸ್ನಾನದ ದೃಶ್ಯಗಳನ್ನು ಚಿತ್ರೀಕರಿಸಿದ್ದ ಎನ್ನಲಾಗಿದೆ.

ಡಿ. 13ರಂದು ಒಬ್ಬ ಮಹಿಳಾ ವೈದ್ಯೆ ಸ್ನಾನ ಮಾಡುತ್ತಿದ್ದಾಗ ಗೋಡೆ ಮೇಲೆ ಏನೋ ಸರಿದಾಡಿದ್ದನ್ನು ಗಮನಿಸಿದ್ದರು. ಗಾಬರಿಗೊಂಡ ಆಕೆ ತಕ್ಷಣ ಬಟ್ಟೆ ಧರಿಸಿ, ಬಾತ್ ರೂಮಿನಿಂದ ಹೊರ ಬಂದಿದ್ದರು.

ಎರಡು ದಿನಗಳ ನಂತರ ತನ್ನ ಮತ್ತೊಬ್ಬ ಸಂಗಾತಿಗೂ ಇಂಥಹುದೇ ಅನುಭವ ಆದಾಗ ಅವರು ಎಚ್ಚೆತ್ತಿದ್ದಾರೆ. ತಕ್ಷಣ ಹೊರಬಂದು ನೋಡಿದಾಗ ಡಾ. ಯಶ್ ಷಾ ಕೈಯಲ್ಲಿ ಮೊಬೈಲ್ ಹಿಡಿದು ನಿಂತಿರುವುದು ಕಂಡುಬಂದಿದೆ. ವಿಚಾರಿಸಲಾಗಿ ಡಾ. ಯಶ್ ತಡಬಡಾಯಿಸಿದನಾದರೂ ತಾನು ಅಂಥದ್ದೇನನ್ನೂ ಮಾಡಿಲ್ಲ ಎಂದು ಉತ್ತರಿಸಿದ್ದಾನೆ. ಆದರೆ ಅಷ್ಟಕ್ಕೆ ಬಿಡದ ಯುವತಿಯರು ಆಸ್ಪತ್ರೆ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಪೊಲೀಸರು ಷಾ ವಿರುದ್ಧ Indian Penal Code Section 509 (outraging the modesty of a woman), Section 66(A) of the Information Technology Act (sending offensive messages through a communication service) ಪ್ರಕರಣಗಳನ್ನು ದಾಖಲಿಸಿಕೊಂಡು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿ, ನ್ಯಾಯಾಲಯ ಜಾಮೀನಿನ ಮೇಲೆ ಆತನನ್ನು ಬಿಟ್ಟು ಕಳುಹಿಸಿದೆ.

ಪೊಲೀಸರು ಡಾ. ಯಶ್ ಷಾನಿಂದ ವಶಪಡಿಸಿಕೊಂಡ ಮೊಬೈಲನ್ನು ತಪಾಸಣೆ ಮಾಡಿದಾಗ ಅದರಲ್ಲಿ ಬಾಧಿತರಿಬ್ಬರು ಸ್ನಾನ ಮಾಡುತ್ತಿರುವುದು ಕಂಡುಬಂದಿದೆ. ಇದರಿಂದ ಡಾ. ಯಶ್ ವಿರುದ್ಧ ಕೇಸ್ ಸ್ಟ್ರಾಂಗ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಷಾದದ ಸಂಗತಿಯೆಂದರೆ ಡಾ. ಯಶ್ ಷಾಗೆ ಇತ್ತೀಚೆಗಷ್ಟೇ ಬೇರೊಬ್ಬ ಮಹಿಳಾ ವೈದ್ಯರ ಜತೆಗೆ ನಿಶ್ಚಿತಾರ್ಥ ನಡೆದಿದೆ. ಆದರೆ ಭಾವಿ ಪತ್ನಿಯ ಸಂಗಾತಿಗಳು ಸ್ನಾನ ಮಾಡುತ್ತಿರುವುದನ್ನು ವಿಡಿಯೋ ಮಾಡುವ ಮೂಲಕ ಇದೀಗ ಆಕೆಯಿಂದ ಭಾರಿ ಮುಖಂಭಂಗಕ್ಕೀಡಾಗಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+