The Kashmir Files: 'ಗುಜರಾತ್ ಚುನಾವಣೆ ಮೇಲೆ ಕಣ್ಣಿಟ್ಟು ಬಿಜೆಪಿಯಿಂದ ಸಿನಿಮಾ ಪ್ರಚಾರ'
ಮುಂಬೈ, ಮಾರ್ಚ್ 20: ಗುಜರಾತ್ ಮತ್ತು ರಾಜಸ್ಥಾನದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಪ್ರಚಾರ ಮಾಡುತ್ತಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಭಾನುವಾರ ಆರೋಪ ಮಾಡಿದ್ದಾರೆ. ಚಿತ್ರದಲ್ಲಿ ಹಲವಾರು "ಕಠಿಣ ಸತ್ಯಗಳನ್ನು" ಹತ್ತಿಕ್ಕುವ ಪ್ರಯತ್ನವನ್ನು ಮಾಡಲಾಗಿದೆ ಎಂದು ಕೂಡಾ ಆರೋಪಿಸಿದ್ದಾರೆ.
ಶಿವಸೇನೆಯ ಮುಖವಾಣಿ 'ಸಾಮ್ನಾ'ದಲ್ಲಿ ತಮ್ಮ ಸಾಪ್ತಾಹಿಕ ಅಂಕಣ 'ರೋಖ್‌ಥೋಕ್'ನಲ್ಲಿ ಶಿವಸೇನಾ ಸಂಸದ ಸಂಜಯ್ ರಾವತ್, ಕಾಶ್ಮೀರಕ್ಕೆ ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರನ್ನು ಹಿಂದಿರುಗಿಸುವುದನ್ನು ಖಚಿತಪಡಿಸಿಕೊಳ್ಳುವುದು ಬಿಜೆಪಿಯ ಭರವಸೆಯಾಗಿದೆ. ಆದರೆ 370 ನೇ ವಿಧಿಯನ್ನು ರದ್ದುಗೊಳಿಸಿದರೂ ಅದೇ ಸಂಭವಿಸಿಲ್ಲ. ಅದು ಯಾರ ವೈಫಲ್ಯ ಎಂದು ತಿಳಿಯಬೇಕು," ಎಂದು ಉಲ್ಲೇಖ ಮಾಡಲಾಗಿದೆ.
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ಪ್ರಮುಖ ಪ್ರಚಾರಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಂದು ಕೂಡಾ ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದರು. ಬಿಜೆಪಿಯ ಮೇಲೆ ದಾಳಿ ಮಾಡಿದ ರಾಜ್ಯಸಭಾ ಸದಸ್ಯರು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಭಾರತದೊಂದಿಗೆ ಸಂಯೋಜಿಸುವ ಭರವಸೆ ಏನಾಯಿತು ಎಂದು ಎನ್‌ಡಿಎ ಕೂಟಕ್ಕೆ ಪ್ರಶ್ನೆ ಮಾಡಿದ್ದಾರೆ.

ವಿವೇಕ್ ಅಗ್ನಿಹೋತ್ರಿ ಬರೆದು ನಿರ್ದೇಶಿಸಿದ ಮತ್ತು ಜೀ ಸ್ಟುಡಿಯೋಸ್ ನಿರ್ಮಿಸಿದ 'ದಿ ಕಾಶ್ಮೀರ್ ಫೈಲ್ಸ್' ಚಲನಚಿತ್ರವು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಸಮುದಾಯದ ಜನರನ್ನು ವ್ಯವಸ್ಥಿತವಾಗಿ ಹತ್ಯೆಗೈದ ನಂತರ ಕಾಶ್ಮೀರಿ ಹಿಂದೂಗಳು ಕಾಶ್ಮೀರದಿಂದ ವಲಸೆ ಹೋಗುವುದನ್ನು ಚಿತ್ರಿಸಿದೆ. ಮಾರ್ಚ್ 11 ರಂದು ಬಿಡುಗಡೆಯಾದಾಗಿನಿಂದ, ಚಿತ್ರವು ರಾಜಕೀಯ ಪಕ್ಷಗಳಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಮಧ್ಯಪ್ರದೇಶ ಮತ್ತು ಗುಜರಾತ್ ಸೇರಿದಂತೆ ಹಲವು ಬಿಜೆಪಿ ಆಡಳಿತದ ರಾಜ್ಯಗಳು ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ನೀಡಿದೆ.
ಹಿಂದೂ-ಮುಸ್ಲಿಮರನ್ನು ವಿಭಜಿಸುವ ಪ್ರಯತ್ನ
"ಕಾಶ್ಮೀರದಲ್ಲಿ ಹಿಂದೂ ಪಂಡಿತರ ಪಲಾಯನ, ಅವರ ಹತ್ಯೆಗಳು, ಅವರ ಮೇಲೆ ನಡೆದ ದೌರ್ಜನ್ಯಗಳು ಮತ್ತು ಅವರ ಕೋಪವು ಒಬ್ಬರ ಮನಸ್ಸನ್ನು ಕಲಕುವ ಕಥೆಯನ್ನು ಆಧರಿಸಿದೆ. ಆದರೆ ಅದಕ್ಕಿಂತಲೂ ಹೆಚ್ಚು ತೊಂದರೆಯುಂಟುಮಾಡುವುದು (ಕಥೆ) ಮತ್ತೆ ಹಿಂದೂ-ಮುಸ್ಲಿಮರನ್ನು ವಿಭಜಿಸುವ ಪ್ರಯತ್ನವಾಗಿದೆ. ಹಾಗೆಯೇ ಮುಂಬರುವ ಚುನಾವಣೆಗಳನ್ನು ಗೆಲ್ಲುವ ಪ್ರಯತ್ನ ಇದರಲ್ಲಿ ಇದೆ," ಎಂದರು. "ಗುಜರಾತ್ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಮುಂಬರುವ ಚುನಾವಣೆಗಳನ್ನು ಗೆಲ್ಲಲು ಕಾಶ್ಮೀರಿ ಪೈಲ್ಸ್ ಅನ್ನು ಬಿಡುಗಡೆ ಮಾಡಲಾಗಿದೆ," ಎಂದು ಕೂಡಾ ದೂರಿದ್ದಾರೆ.
'ದಿ ತಾಷ್ಕೆಂಟ್ ಫೈಲ್ಸ್' ಸಿನಿಮಾದ ಉಲ್ಲೇಖ
'ದಿ ಕಾಶ್ಮೀರ್ ಫೈಲ್ಸ್' ನಂತಹ ಚಲನಚಿತ್ರಗಳನ್ನು ರಚಿಸಬೇಕು. ಆದರೆ ಅಂತಹ ಚಲನಚಿತ್ರಗಳ ಅಜೆಂಡಾ ಈಗ (ರಾಜಕೀಯ) ವಿರೋಧಿಗಳ ಬಗ್ಗೆ ದ್ವೇಷ ಮತ್ತು ಗೊಂದಲವನ್ನು ಹರಡುವುದು ಆಗಿದೆ. 'ದಿ ಕಾಶ್ಮೀರ್ ಫೈಲ್ಸ್' ತಯಾರಕರು ಈ ಹಿಂದೆ 'ದಿ ತಾಷ್ಕೆಂಟ್ ಫೈಲ್ಸ್' ಅನ್ನು ನಿರ್ಮಿಸಿದ್ದರು. ಅದರ ಮೂಲಕ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಾವಿಗೆ ಗಾಂಧಿ ಕುಟುಂಬ ಮಾತ್ರ ಕಾರಣ ಎಂದು ಹೇಳುವಂತೆ ಚಿತ್ರಣ ಮಾಡಿದ್ದರು. ಇದು ಬರೀ ರಾಜಕೀಯ ವಿರೋಧಿಗಳನ್ನು ಬೊಟ್ಟು ಮಾಡಿ ಅವರು ನಿರ್ಮಾಣ ಮಾಡುವ ಸಿನಿಮಾನಗಳಾಗಿವೆ ಎಂದು ಒತ್ತಿ ಹೇಳಿದರು.
ಕಾಶ್ಮೀರಿ ಪಂಡಿತರಲ್ಲದೆ ಮುಸ್ಲಿಮರೂ ಸಾವನ್ನಪ್ಪಿದ್ದಾರೆ ಎಂದ ರಾವತ್
"ದಿ ಕಾಶ್ಮೀರ್ ಫೈಲ್ಸ್" ನಲ್ಲಿ, ಸತ್ಯ ಸುದ್ದಿಗಳನ್ನು ತೋರಿಸುವಾಗ ಇತರ ಹಲವಾರು ಕಟು ಸತ್ಯಗಳನ್ನು ಹತ್ತಿಕ್ಕುವ ಪ್ರಯತ್ನವನ್ನು ಮಾಡಲಾಗಿದೆ. ಮೂವತ್ತೆರಡು ವರ್ಷಗಳ ಹಿಂದೆ, ಕಾಶ್ಮೀರದ ವಾತಾವರಣವು ಕಾಶ್ಮೀರಿ ಪಂಡಿತರಿಗೆ ಮಾತ್ರವಲ್ಲದೆ ಎಲ್ಲರಿಗೂ ಕೆಟ್ಟದಾಗಿತ್ತು. ಆ ಸಮಯದಲ್ಲಿ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರಲ್ಲದೆ, ಕಾಶ್ಮೀರಿ ಸಿಖ್ಖರು ಮತ್ತು ಮುಸ್ಲಿಮರೂ ಸಾವನ್ನಪ್ಪಿದ್ದಾರೆ," ಎಂದು ವಸೇನಾ ಸಂಸದ ಸಂಜಯ್ ರಾವತ್ ಉಲ್ಲೇಖ ಮಾಡಿದ್ದಾರೆ.












Click it and Unblock the Notifications