• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಊರ್ಮಿಳಾ ಮುಖ ನೋಡಿ ಮಣೆ ಹಾಕಿದ ಕಾಂಗ್ರೆಸ್: ಬಿಜೆಪಿ ಸಂಸದ

|

ಮುಂಬೈ, ಏಪ್ರಿಲ್ 12: ಲೋಕಸಭಾ ಚುನಾವಣೆ ಅಖಾಡಕ್ಕೆ ಸ್ಪರ್ಧಿಗಳಾಗಿ, ಪ್ರಚಾರಕರಾಗಿ ಸೆಲೆಬ್ರಿಟಿಗಳನ್ನು ಕರೆ ತರುವುದು ಎಲ್ಲಾ ಪಕ್ಷಗಳು ಮಾಡುವ ನಿರೀಕ್ಷಿತ ತಂತ್ರ. ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರಿ ಮುಂಬೈನಲ್ಲಿ ಅಭ್ಯರ್ಥಿಯಾಗಿರುವ ಊರ್ಮಿಳಾ ಅವರನ್ನು ಕಾಂಗ್ರೆಸ್ಸಿಗೆ ಕರೆ ತರಲು ಅವರ ಮುಖ ಸೌಂದರ್ಯವೇ ಕಾರಣ ಎಂದು ಬಿಜೆಪಿ ಸಂಸದರೊಬ್ಬರು ಹೇಳಿಕೆ ನೀಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮುಂಬೈ ಉತ್ತರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಟಿ ಊರ್ಮಿಳಾ ತೋಂಡ್ಕರ್ ಸ್ಪರ್ಧಿಸುತ್ತಿದ್ದಾರೆ. ಈಗ ಊರ್ಮಿಳಾ ವಿರುದ್ಧ ಈ ಕ್ಷೇತ್ರದ ಹಾಲಿ ಸಂಸದ ಬಿಜೆಪಿ ಮುಖಂಡ ಗೋಪಾಲ್ ಶೆಟ್ಟಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮುಂಬೈ ಉತ್ತರ ಕ್ಷೇತ್ರದ ಸಮಗ್ರ ಮಾಹಿತಿ

"ಮಾತೋಂಡ್ಕರ್ ಅವರ ಮುಖ ನೋಡಿ, ಅವರು ಸೆಲೆಬ್ರೆಟಿಯಾಗಿರುವ ಕಾರಣಕ್ಕಾಗಿ ರಾಜಕೀಯಕ್ಕೆ ಎಳೆದು ತರಲಾಗಿದೆ" ಎಂದಿದ್ದಾರೆ.

"ಊರ್ಮಿಳಾ ಮಾತೋಂಡ್ಕರ್ ಅವರನ್ನು ಯಾರೂ ಆಕ್ಷೇಪ ವ್ಯಕ್ತಪಡಿಸಲು ಕಾರಣವೇ ಇಲ್ಲ. ಅವರು ರಾಜಕಾರಣಿಗಳ ಕುಟುಂಬದಿಂದ ಬಂದವರು, ಅವರು ರಾಜಕೀಯ ಅರ್ಥ ಮಾಡಿಕೊಳ್ಳಬಲ್ಲರು, ಮಾಂತೋಡ್ಕರ್ ಮುಗ್ಧ ಹುಡುಗಿ. ಅವರು ರಾಜಕೀಯದಲ್ಲಿ ಶೂನ್ಯ. ಆದರೆ, ಅವರು ಆಯ್ಕೆ ಮಾಡಿದ ಪಕ್ಷ ಮಾತ್ರ ಕೆಟ್ಟದು" ಎಂದು ಗೋಪಾಲ್ ಶೆಟ್ಟಿ ಹೇಳಿದ್ದಾರೆ.

65 ವರ್ಷದ ಗೋಪಾಲ್ ಶೆಟ್ಟಿ ಅವರು ವಿವಾದಿತ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ, ಸ್ವಾತಂತ್ರ್ಯ ಹೋರಾಟದಲ್ಲಿ ಕ್ರೈಸ್ತರು ಪ್ರಮುಖ ಪಾತ್ರ ವಹಿಸಿಲ್ಲ ಎಂದು ಅವರು ಕಳೆದ ವರ್ಷ ನೀಡಿದ ಹೇಳಿಕೆ ತೀವ್ರ ವಿವಾದಕ್ಕೆ ಒಳಗಾಗಿತ್ತು.

ಮುಂಬೈ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಟಿ ಊರ್ಮಿಳಾ ಕಣಕ್ಕೆ

ಫೆಬ್ರವರಿ 2016ರಲ್ಲಿ ರೈತರ ಆತ್ಮಹತ್ಯೆಯನ್ನು ಫ್ಯಾಷನ್, ಟ್ರೆಂಡ್ ಎಂದು ಹೋಲಿಕೆ ಮಾಡಿ ಎಲ್ಲರಿಂದ ಟೀಕೆ ಎದುರಿಸಿದ್ದರು. ಆದರೆ, ಹೇಳಿಕೆ ಸಮರ್ಥಿಸಿಕೊಂಡು ಮೃತ ರೈತರಿಗೆ ಸಾಂತ್ವನ ಹೇಳುವ ನೆಪದಲ್ಲಿ ಪರಿಹಾರ ನೀಡಲು ಮುಂದಾಗುವುದು ಫ್ಯಾಷನ್ ಟ್ರೆಂಡ್ ಆಗಿದೆ ಎಂದಿದ್ದರು.

2014: ಮುಂಬೈ ಸಂಸದ ಕನ್ನಡಿಗ ಗೋಪಾಲ್ ಶೆಟ್ಟಿ ಸಂದರ್ಶನ

2016ರ ನವೆಂಬರ್ ನಲ್ಲಿ ಅಪನಗದೀಕರಣ ಜಾರಿಗೊಂಡ ಬಳಿಕ ನೂರಾರು ಮಂದಿ ಮೃತಪಟ್ಟ ಬಗ್ಗೆ ಹೇಳಿಕೆ ನೀಡಿ, ಕೆಲವನ್ನು ಪಡೆಯಲು ಕೆಲವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Read in English: BJP MP sparks controversy
English summary
Bharatiya Janata Party (BJP) MP Gopal Shetty on Thursday said that actor Urmila Matondkar, who joined the Congress recently and contesting Lok Sabha elections from Mumbai North seat, has been roped in by the grand old party for polls because of her face.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more