ನಟ, ಬಿಜೆಪಿ ಸಂಸದ ವಿನೋದ್ ಖನ್ನಾ ಆಸ್ಪತ್ರೆಗೆ ದಾಖಲು!

ಹಿರಿಯ ನಟ, ಬಿಜೆಪಿ ಸಂಸದ ವಿನೋದ್ ಖನ್ನಾ ಅವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರವಾದ ಬಿಸಿಲಿನ ತಾಪಕ್ಕೆ ಬಳಲಿ ನಿತ್ರಾಣರಾಗಿದ್ದರು. ಈಗ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ವಿನೋದ್ ಅವರ ಮಗ ರಾಹುಲ್ ಖನ್ನ ಹೇಳಿದ್ದಾರೆ.

ಮುಂಬೈ, ಏಪ್ರಿಲ್ 05: ಹಿರಿಯ ನಟ, ಬಿಜೆಪಿ ಸಂಸದ ವಿನೋದ್ ಖನ್ನಾ ಅವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರವಾದ ಬಿಸಿಲಿನ ತಾಪಕ್ಕೆ ಬಳಲಿ ನಿತ್ರಾಣರಾಗಿದ್ದರು. ಈಗ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ವಿನೋದ್ ಅವರ ಮಗ ರಾಹುಲ್ ಖನ್ನ ಹೇಳಿದ್ದಾರೆ.

ವಿನೋದ್ ಖನ್ನಾ ಅವರನ್ನು ಕಳೆದ ವಾರವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಈ ಬಗ್ಗೆ ಮಂಗಳವಾರ ರಾತ್ರಿ, ರಾಹುಲ್ ಅವರು ಮಾಧ್ಯಮಗಳಿಗೆ ಸುದ್ದಿ ಕೊಟ್ಟಿದ್ದಾರೆ.

BJP MP Actor Vinod Khanna hospitalized

ಪಂಜಾಬಿನ ಗುರ್ ದಾಸನ್ಪುರ್ ಕ್ಷೇತ್ರದ ಹಾಲಿ ಬಿಜೆಪಿ ಸಂಸದರಾಗಿರುವ ವಿನೋದ್ ಖನ್ನಾ ಅವರ ಆರೋಗ್ಯ ಈಗ ಸುಧಾರಿಸಿದೆ. ವಿನೋದ್ ಅವರ ಆರೋಗ್ಯ ಸುಧಾರಣೆಗಾಗಿ ಶುಭ ಹಾರೈಸಿದ ಎಲ್ಲರಿಗೂ ರಾಹುಲ್ ಖನ್ನಾ ಅವರು ಧನ್ಯವಾದ ಅರ್ಪಿಸಿದ್ದಾರೆ.

ಎಚ್. ಎನ್ ರಿಲಯನ್ಸ್ ಫೌಂಡೇಶನ್ ಹಾಗೂ ಆಸ್ಪತ್ರ್ರೆಯಲ್ಲಿ ವಿನೋದ್ ಖನ್ನಾ ಚಿಕಿತ್ಸೆ ಪಡೆಯುತ್ತಿದ್ದಾರೆ. 70 ವರ್ಷ ವಯಸ್ಸಿನ ವಿನೋದ್ ಖನ್ನಾ ಅವರು ಅಮರ್ ಅಕ್ಬರ್ ಅಂಟೋನಿ, ಇನ್ಸಾಫ್, ಮೇರೆ ಅಪ್ನೆ ಮುಂತಾದ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. (ಐಎಎನ್ಎಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+