2 ನೇ ಪತ್ನಿ ಜೊತೆ ಬಂದು ಹಿಗ್ಗಾಮುಗ್ಗಾ ಥಳಿಸಿಕೊಂಡ ಬಿಜೆಪಿ ಶಾಸಕ

ಯಾವತ್ಮಾಳ್, ಫೆಬ್ರವರಿ 13: ಎರಡನೇ ಮದುವೆಯಾದ ಕಾರಣಕ್ಕೆ ಬಿಜೆಪಿಯ ಶಾಸಕರೊಬ್ಬರಿಗೆ ಅವರ ಮೊದಲ ಪತ್ನಿ ಮತ್ತು ತಾಯಿ ಸೇರಿ ಸಾರ್ವಜನಿಕವಾಗಿಯೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮಹಾರಾಷ್ಟ್ರದ ಯಾವತ್ಮಾಳ್ ನಲ್ಲಿ ನಡೆದಿದೆ.

ಮಹಾರಾಷ್ಟ್ರದ ಅರ್ನಿ ಕ್ಷೇತ್ರದ ಬಿಜೆಪಿ ಶಾಸಕ ರಾಜು ನಾರಾಯಣ್ ಟೋಡ್ಸಮ್ ಎಂಬುವವರು ಇತ್ತೀಚೆಗೆ ಪ್ರಿಯಾ ಶಿಂದೆ ಎಂಬುವವರನ್ನು ಮದುವೆಯಾಗಿದ್ದರು. ರಾಜು ಅವರ ಬೆಂಬಲಿಗರು ಮತ್ತು ಎರಡನೇ ಪತ್ನಿ ಪ್ರಿಯಾ ಸೇರಿಕೊಂಡು ರಾಜು ಅವರ 42 ನೇ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ ಅವರ ಮೊದಲ ಪತ್ನಿ ಅರ್ಚನಾ ಟೋಡ್ಸನ್ ಮತ್ತು ತಾಯಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

ಇಬ್ಬರು ಸೇರಿ ಎರಡನೇ ಪತ್ನಿ ಪ್ರಿಯಾ ಅವರನ್ನು ಥಳಿಸಿದ್ದಾರೆ. ತಪ್ಪಿಸಲು ಬಂದ ಶಾಸಕ ರಾಜು ಅವರಿಗೂ ತಾಯಿ ಮತ್ತು ಪತ್ನಿ ಇಬ್ಬರೂ ಸೇರಿ ಸಾರ್ವಜನಿಕವಾಗಿಯೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

BJP MLA transhed by wife over 2nd marriage

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಜೆಪಿಗೆ ಮುಖಭಂಗವಾಗಿದೆ. ಒಂದೆಡೆ ಬೇಟಿ ಬಚಾವೋ, ಬೇಟಿ ಫಡಾವೋ ಎನ್ನುವ ಬಿಜೆಪಿಯವರು ಮಹಿಳೆಯರ ರಕ್ಷಣೆಗೆ ಬದ್ಧ ಎನ್ನುತ್ತಾರೆ. ಹೆಂಡತಿ ಬದುಕಿರುವಾಗಲೇ ಮತ್ತೊಬ್ಬರನ್ನು ಮದುವೆಯಾಗುವುದು ಮಹಿಳಾ ರಕ್ಷಣೆಯೇ ಎಂದು ಪ್ರಶ್ನಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+