Breaking: ಹಿಂದಿ ಕಿರುತೆರೆ ನಟ ದೀಪೇಶ್ ಭಾನ್ (41) ನಿಧನ
ಮುಂಬೈ, ಜುಲೈ 23; ಹಿಂದಿಯ ಜನಪ್ರಿಯ ಹಾಸ್ಯ ನಟ ದೀಪೇಶ್ ಭಾನ್ ಶನಿವಾರ ಬೆಳಗ್ಗೆ (ಜುಲೈ 23) ನಿಧನರಾದರು. ಅವರಿಗೆ 41 ವರ್ಷ ವಯಸ್ಸಾಗಿತ್ತು. ಜನಪ್ರಿಯ 'ಭಾಬಿ ಜಿ ಘರ್ ಪರ್ ಹೈ'ನಲ್ಲಿ ಮಲ್ಖಾನ್ ಸಿಂಗ್ ಪಾತ್ರವನ್ನು ನಿರ್ವಹಿಸುತ್ತಿದ್ದರು.
ನಟ ದೀಪೇಶ್ ಭಾನ್ ಅವರ ನಿಧನವನ್ನು ಸಹಾಯಕ ನಿರ್ದೇಶಕ ಮತ್ತು ನಟ ವೈಭವ್ ಮಾಥುರ್ ಖಚಿತಪಡಿಸಿದ್ದಾರೆ. ದೀಪೇಶ್ ಅವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.
ಪವನ್ ಒಡೆಯರ್ ಸಿನಿಮಾ ಡೊಳ್ಳುಗೆ ರಾಷ್ಟ್ರ ಪ್ರಶಸ್ತಿ: ಶೀಘ್ರದಲ್ಲಿಯೇ ಥಿಯೇಟರ್‌ನಲ್ಲಿ ರಿಲೀಸ್!
ವರದಿಗಳ ಪ್ರಕಾರ, ದೀಪೇಶ್ ಭಾನ್ ಇಂದು ಬೆಳಗ್ಗೆ ಮುಂಬೈನಲ್ಲಿ ಕ್ರಿಕೆಟ್ ಆಡುತ್ತಿದ್ದರು. ಆಟ ಆಡುವಾಗ ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ವೈಭವ್ ಮಾಥುರ್ ಅವರಲ್ಲದೆ, ಭಾಬಿ ಜಿ ಘರ್ ಪರ್ ಹೇ ನಿರ್ಮಾಪಕರು ಕೂಡ ನಟ ದೀಪೇಶ್ ಅವರ ಹಠಾತ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಭಾಬಿ ಜಿ ಘರ್ ಪರ್ ಹೈ ತಂಡ "ನಮ್ಮ ಪ್ರೀತಿಯ ದೀಪೇಶ್ ಭಾನ್ ಅವರ ಹಠಾತ್ ನಿಧನದಿಂದ ತೀವ್ರ ದುಃಖ ಮತ್ತು ಆಘಾತವಾಗಿದೆ. ಭಾಬಿಜಿ ಘರ್ ಪರ್ ಹೈ ಚಿತ್ರದಲ್ಲಿನ ಅತ್ಯಂತ ಸಮರ್ಪಿತ ನಟರಲ್ಲಿ ಒಬ್ಬರು ಮತ್ತು ನಮ್ಮ ಕುಟುಂಬದಲ್ಲಿ ಒಬ್ಬರು. ಅವರನ್ನು ಎಲ್ಲರೂ ತುಂಬಾ ಮಿಸ್ ಮಾಡಿಕೊಳ್ಳುತ್ತಾರೆ. ಅವರ ಕುಟುಂಬಕ್ಕೆ ನಮ್ಮ ಸಂತಾಪಗಳು. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ದೇವರು ಅವರ ಕುಟುಂಬಕ್ಕೆ ಈ ನಷ್ಟವನ್ನು ನಿಭಾಯಿಸುವ ಶಕ್ತಿಯನ್ನು ನೀಡಲಿ' ಎಂದಿದ್ದಾರೆ.
ಹಾಸ್ಯ ನಟ ದೀಪೇಶ್ ಭಾನ್ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು, ಸಹ ನಟ, ನಟಿಯರು ಸಾಮಾಜಿಕ ಮಾಧ್ಯಮದಲ್ಲಿ ನಟನ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.












Click it and Unblock the Notifications