ಬೆಂಗಳೂರು ಯುವಕನ ಆತ್ಮಹತ್ಯೆ- ಫೇಸ್ ಬುಕ್ ಲೈವ್!

ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಡಿಯೋವನ್ನು ಫೇಸ್ ಬುಕ್ ಲೈವ್ ನಲ್ಲಿ ಶೇರ್ ಮಾಡಿರುವ ಅರ್ಜುನ್, ಇದು ಆತ್ಮಹತ್ಯೆ ಹೇಗೆ ಮಾಡಿಕೊಳ್ಳಬೇಕು ಎಂಬುದಕ್ಕೆ ಟ್ಯುಟೋರಿಯಲ್ ಎಂದಿದ್ದಾನೆ!

ಮುಂಬೈ, ಏಪ್ರಿಲ್ 4: ಬೆಂಗಳೂರು ಮೂಲದ 2೦ ವರ್ಷದ ಯುವಕನೊಬ್ಬ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಲೈವ್ ವಿಡಿಯೋವನ್ನು ಫೇಸ್ ಬುಕ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ ಘಟನೆ ಮುಂಬೈನಲ್ಲಿ ನಡೆದಿದೆ.

ಇತ್ತೀಚೆಗಷ್ಟೆ ಶಿಕಾಗೋ ನಲ್ಲಿ ಯುವತಿಯೊಬ್ಬರ ಮೇಲೆ ಆರು ಮಂದಿ ಕಾಮುಕರು ಅತ್ಯಾಚಾರ ಮಾಡಿದ ವಿಡಿಯೋವನ್ನು ಫೇಸ್ ಬುಕ್ ಲೈವ್ ಮೂಲಕ ಹಂಚಿ ವಿವಾದ ಸೃಷ್ಟಿಯಾಗಿತ್ತು, ಫೇಸ್ ಬುಕ್ ನ ಆಡಳಿತ ಮಂಡಳಿ ಸಹ ಇಂಥವುಗಳ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿತ್ತು.

ಈ ಘಟನೆ ಮಾಸುವ ಮೊದಲೇ ಭಾರತದಲ್ಲೂ ಇಂಥದೇ ಘಟನೆ ನಡೆದಿರುವುದು ಆತಂಕ ಸೃಷ್ಟಿಸಿದೆ.

Bengaluru Man commits sucide in Mumbai, after going live on facebook

ಅಲ್ಲಿ ನಡೆದಿದ್ದೇನು?

ಏಪ್ರಿಲ್ 3 ಸೋಮವಾರದಂದು ಮುಂಬೈನ ಬಾಂಧ್ರಾ ಬಳಿಯ ತಾಜ್ ಲ್ಯಾಂಡ್ಸ್ ಎಂಡ್ ಹೊಟೇಲ್ ನಲ್ಲಿ ತಂಗಿದ್ದ ಬೆಂಗಳೂರು ಮೂಲದ ಅರ್ಜುನ್ ಭಾರದ್ವಾಜ್ ಸಂಜೆ 6:30 ರ ಸುಮಾರಿಗೆ 19 ನೇ ಮಹಡಿಯಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನು ಫೇಸ್ ಬುಕ್ ಲೈವ್ ನಲ್ಲಿ ಶೇರ್ ಮಾಡಿರುವ ಅರ್ಜುನ್, ಇದು ಆತ್ಮಹತ್ಯೆ ಹೇಗೆ ಮಾಡಿಕೊಳ್ಳಬೇಕು ಎಂಬುದಕ್ಕೆ ಟ್ಯುಟೋರಿಯಲ್ ಎಂದಿದ್ದಾನೆ!

ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಈತ ಮದ್ಯಪಾನ ಮತ್ತು ಧೂಮಪಾನ ಮಾಡಿದ್ದ ಎನ್ನಲಾಗಿದೆ. ಈತ 9 ಚಿಕ್ಕ ಚೀಟಿಗಳಲ್ಲಿ ಡೆತ್ ನೋಟ್ ಬರೆದಿಟ್ಟಿದ್ದು, ತನ್ನ ಸಾವಿಗೆ ಬೇರೆ ಯಾರೂ ಕಾರಣರಲ್ಲ ಎಂದು ಬರೆದಿದ್ದಾನೆ.

ಮಾದಕ ವ್ಯಸನಿಯಾಗಿದ್ದ ಈತ, ಈ ಚಟದಿಂದ ಹೊರಬರಲಾರದೆ ಖಿನ್ನತೆಯಿಂದ ಒದ್ದಾಡುತ್ತಿದ್ದ. ಆತನ ಸಾವಿಗೆ ಮಾದಕ ವ್ಯಸನ ಮತ್ತು ಖಿನ್ನತೆಯೇ ಕಾರಣ ಎನ್ನಲಾಗಿದೆ. ಅರ್ಜುನ್ ಸಹ ಡೆತ್ ನೋಟಿನಲ್ಲಿ ಅದನ್ನು ಉಲ್ಲೇಖಿಸಿದ್ದಾನೆ.

ಕುರ್ಚಿಯಿಂದ ಕಿಟಕಿಯ ಗಾಜನ್ನು ಕೊರೆದು, ಅಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೊಟೇಲಿನ ಆಡಳಿತ ಮಂಡಳಿ ತಿಳಿಸಿದೆ. ತಕ್ಷಣವೇ ಹತ್ತಿರದ ಲೀಲಾವತಿ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಆಗಲೇ ಆತ ಸತ್ತಿದ್ದಾನೆಂದು ವೈದ್ಯರು ಘೋಷಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+