ಸಲ್ಮಾನ್ ಚಿತ್ರದ ನಾಯಕಿ ಮೇಲೆ ಎಫ್ ಐಆರ್
ಮುಂಬೈ, ಫೆ.13: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ 'ಜೈ ಹೋ' ಚಿತ್ರದ ನಾಯಕಿ ಡೈಸಿ ಶಾ ಅವರ ಮೇಲೆ ಕೊಲೆ ಕೇಸ್ ಬಿದ್ದಿದೆ. ಡೈಸಿ ಶಾ ಅವರು ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಹಾಗೂ ರಜನೀಶ್ ದುಗ್ಗಾಲ್ ಅವರ ನೆರವು ಪಡೆದು ಭೋಜ್ ಪುರಿ ನಟನೊಬ್ಬನನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.
ನಟಿ ಡೈಸಿ ಶಾ ಹಾಗೂ ಮತ್ತಿಬ್ಬರು ಸೇರಿಕೊಂಡು ಭೋಜ್ ಪುರಿ ನಟ ಸತ್ಯೇಂದ್ರ ಸಿಂಗ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ಡೈಸಿ ಶಾ, ಗಣೇಶ್ ಆಚಾರ್ಯ, ರಜನೀಶ್ಡ್ ವಿರುದ್ಧ ಸತ್ಯೇಂದ್ರ ಅವರು ಪೊಲೀಸರಿಗೆ ದೂರು ನೀಡಿದ್ದು, ಮೂವರು ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಭೋಜ್ ಪುರಿ ನಟ ಸತ್ಯೇಂದ್ರ ಸಿಂಗ್ ಅವರಿಗೆ ಭೂಗತ ಪಾತಕಿ ಅಬುಸಲೇಂ ಅವರ ನಿಕಟ ಸಂಪರ್ಕ ಇದೆ ಎನ್ನಲಾಗಿದೆ. ಇಂಥ ನಟ ಮೇಲೆ ಹತ್ಯೆ ಸಂಚು ರೂಪಿಸಿದ ಈ ಮೂವರ ಸಾಹಸ ಕಂಡು ಬಾಲಿವುಡ್ ಬೆಚ್ಚಿ ಬಿದ್ದಿದೆ.
ಡೈಸಿ ಶಾ ಕನ್ನಡದಲ್ಲಿ ಭದ್ರ, ಗಜೇಂದ್ರ, ಬಾಡಿಗಾರ್ಡ್ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನೂ ತೆರೆ ಕಾಣದ ಆಕ್ರಮಣ ಚಿತ್ರದ ನಾಯಕಿಯಾಗಿದ್ದಾರೆ. ಗಣೇಶ್ ಆಚಾರ್ಯ ಗೆಳೆತನದಿಂದ ಹಾಗೂ ಹೀಗೂ ಸ್ಟಾರ್ ನಟ ಸಲ್ಮಾನ್ ಖಾನ್ ಜತೆ ಜೈ ಹೋ ಚಿತ್ರದಲ್ಲಿ ಮುಖ್ಯ ನಾಯಕಿಯಾಗಿ ನಟಿಸಿದ್ದೇ ದೊಡ್ಡ ಸಾಧನೆ.

ಸತ್ಯೇಂದ್ರ ಹೇಳಿಕೆ: ನಾನು ಇತ್ತೀಚೆಗೆ ರಸ್ತೆ ಅಪಘಾತಕ್ಕೊಳಗಾದೆ. ಮೊದಲಿಗೆ ಅದೊಂದು ಆಕಸ್ಮಿಕ ಘಟನೆ ಎಂದು ತಿಳಿದಿದ್ದೆ. ಆದರೆ, ನನ್ನನ್ನು ಸೇತುವೆಯಿಂದ ಹೊರಕ್ಕೆ ತಳ್ಳಲು ಕಾರಿನಲ್ಲಿದ್ದ ವ್ಯಕ್ತಿ ಯತ್ನಿಸಿದ್ದು ಕಂಡು ಬಂದಿತು ಎಂದಿದ್ದಾರೆ. ಮೇಲ್ಕಂಡ ಮೂವರು ಆರೋಪಿಗಳು ಸತ್ಯೇಂದ್ರ ಅವರು ಅಪಘಾತದ ಮೂಲಕ ಕೊಲ್ಲಲು ಯತ್ನಿಸಿದರು ಎಂದು ದೂರಿನಲ್ಲಿ ಹೇಳಲಾಗಿದೆ.
'ಸೋದಾ' ಎಂಬ ಹೆಸರಿನ ಚಿತ್ರದಲ್ಲಿ ಸತ್ಯೇಂದ್ರ ನಾಯಕ ನಟರಾಗಿದ್ದರು. ಈ ಚಿತ್ರದ ನಾಯಕಿಯಾಗಿದ್ದ ಡೈಸಿ ಶಾಗೆ ಸತ್ಯೇಂದ್ರ ಅವರು ನಾಯಕರಾಗುವುದು ಇಷ್ಟವಿರಲಿಲ್ಲ. ಇತ್ತೀಚೆಗೆ ಬಂದಿರುವ ದಿಢೀರ್ ಜನಪ್ರಿಯತೆ ಆಕೆ ತಲೆ ತಿರುಗುವಂತೆ ಮಾಡಿತ್ತು. ಹೀಗಾಗಿ, ಆ ಚಿತ್ರದ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಹಾಗೂ ಮತ್ತೊಬ್ಬ ನಟ ರಜನೀಶ್ ನೆರವು ಪಡೆದು ಸತ್ಯೇಂದ್ರನನ್ನು ಮುಗಿಸಲು ಯತ್ನ ನಡೆದಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡೈಸಿ ಶಾ, ನನಗೆ ನಿಜಕ್ಕೂ ಶಾಕ್ ಆಗಿದೆ. ಎಫ್ ಐಆರ್ ಏಕೆ ಹಾಕಿದ್ದಾರೋ ನನಗೆ ಗೊತ್ತಿಲ್ಲ. ಸುಮಾರು 16 ತಿಂಗಳ ಹಿಂದೆ ಆ ಚಿತ್ರಕ್ಕಾಗಿ ಒಂದು ಹಾಡಿನಲ್ಲಿ ನಟಿಸಿದ್ದೆ. ನಂತರ ಚಿತ್ರೀಕರಣ ನಿಂತು ಹೋಗಿದೆ. ಚಿತ್ರದ ತಾರಾಗಣ ಬದಲಿ ಬಗ್ಗೆ ನಾನೇನು ಹಸ್ತಕ್ಷೇಪ ಮಾಡಿಲ್ಲ' ಎಂದಿದ್ದಾರೆ.
ಎರಡನೇ ಆರೋಪಿಯಾಗಿರುವ ಗಣೇಶ್ ಆಚಾರ್ಯ ಹೇಳಿಕೆ ನೀಡಿ, 'ನನಗೆ ಸತ್ಯೇಂದ್ರ ಆಗಲಿ, ದೂರಿನ ಬಗ್ಗೆಯಾಗಲಿ ಏನೂ ಗೊತ್ತಿಲ್ಲ ಎಂದಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಖತ್ರೋ ಕಿ ಖಿಲಾಡಿ ಶೋಗಾಗಿ ಶೂಟಿಂಗ್ ನಡೆಸುತ್ತಿರುವ ಮೂರನೇ ಆರೋಪಿ ದುಗ್ಗಾಲ್ ಅವರು ಮಾತನಾಡಿ, ನಾನು ಸೋದಾ ಎಂಬ ಯಾವ ಚಿತ್ರದಲ್ಲೂ ನಟಿಸಿಲ್ಲ. ನನಗೆ ಸತ್ಯೇಂದ್ರ ಗೊತ್ಟೇ ಇಲ್ಲ. ಪ್ರಚಾರ ತಂತ್ರಕ್ಕಾಗಿ ಯಾರೋ ಮಾಡಿರುವ ಸಂಚು ಇದಾಗಿದೆ. ಸ್ಪಾರ್ಕ್ ಎಂಬ ಚಿತ್ರದಲ್ಲಿ ಇತ್ತೀಚೆಗೆ ನಟಿಸಿದ್ದೆ ಅಷ್ಟೇ ಎಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ತನಿಖೆ ಮುಂದುವರೆಸಿದ್ದು, ಸದ್ಯಕ್ಕೆ ಯಾರನ್ನು ಬಂಧಿಸಿಲ್ಲ.
-
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Gold: ದುಬೈಯಿಂದ ಭಾರತಕ್ಕೆ ಚಿನ್ನದ ಪೂರೈಕೆ ಪುನರಾರಂಭ; ಗ್ರಾಹಕರ ನಿರ್ಧಾರದಿಂದ ಬೆದರಿದ ವ್ಯಾಪಾರಿಗಳು -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ












Click it and Unblock the Notifications