ಸಚಿನ್ vs ಲತಾ ವಿಡಿಯೋ ವಿವಾದ, ತನ್ಮಯ್ ಗೆ ಪ್ರಾಣಭೀತಿ

Posted By:
Subscribe to Oneindia Kannada

ಮುಂಬೈ, ಮೇ 30: ದೇಶದ ಇಬ್ಬರು 'ಭಾರತರತ್ನ' ಗಳ ಕುರಿತಂತೆ ವ್ಯಂಗ್ಯ, ಅಣಕು, ತರ್ಲೆ ವಿಡಿಯೋ ಮಾಡುವ ಮೂಲಕ ಎಐಬಿಯ ತನ್ಮಯ್ ಭಟ್ ಈಗ ಹಲವಾರು ಮಂದಿಯ ವಿರೋಧ ಕಟ್ಟಿಕೊಂಡಿದ್ದಾರೆ. ವಿಡಿಯೋ ನೋಡಿ ಕಿಡಿಕಾರಿರುವ ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಮ್​ನ್ಎಸ್) ದೂರು ನೀಡಿರುವ ಆಧಾರದ ಮೇಲೆ ತನ್ಮಯ್ ಭಟ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಎಫ್ ಐಆರ್ ಹಾಕಲಾಗಿದೆ. [ಅಶ್ಲೀಲ, ಅವಾಚ್ಯ, ನಿಂದನಾ 'ಎಐಬಿ'ವಿಡಿಯೋ ಇನ್ನಿಲ್ಲ]

ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಪರವಾಗಿ ಅಮೆಯ ಖೋಪ್ಕರ್ ಅವರು ನೀಡಿದ ದೂರಿನ ಮೇರೆಗೆ ಶಿವರಾಜ್ ಪಾರ್ಕ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಎಮ್​ನ್ಎಸ್ ಅಧ್ಯಕ್ಷ, ಈ ರೀತಿ ವಿಡೀಯೋ ಚಿತ್ರೀಕರಣ ಮಾಡುವುದು ಕೀಳು ಮಟ್ಟದ ಪ್ರಚಾರಕ್ಕಾಗಿ. ಕೂಡಲೇ ಇವರನ್ನು ಬಂಧಿಸಬೇಕು. ಇಲ್ಲವಾದರೆ ರಸ್ತೆಗಿಳಿದು ಪ್ರತಿಭಟಿಸಲಾಗುವುದು ಎಂದು ರಾಜ್ ಠಾಕ್ರೆ ಅವರ ಎಂಎನ್ ಎಸ್ ಎಚ್ಚರಿಕೆ ನೀಡಿದೆ. [ಮೂರು ಬಿಟ್ಟು ಮಾತಾಡಿದ್ದಕ್ಕೆ ಕರಣ್, ಅರ್ಜುನ್ ಮೇಲೆ ಕೇಸ್]

AIB's Tanmay Bhat in Deep Trouble, MNS ready to thrash, FIR against him

ತನ್ಮಯ್ ಭಟ್ ಅವರ ಸ್ನಾಪ್ ಚಾಟ್(ವ್ಯಕ್ತಿಗಳ ಮುಖವನ್ನು ಬದಲಾಯಿಸಿಕೊಂಡು ಹಾಸ್ಯದ ತುಣುಕು ನಿರ್ಮಿಸಬಲ್ಲಂತ ಅಪ್ಲಿಕೇಷನ್) ವಿಡಿಯೋದಲ್ಲಿ ಸಚಿನ್ ಹಾಗೂ ಲತಾ ಮಂಗೇಶ್ಕರ್ ಅವರಿಬ್ಬರು ಮಾತುಕತೆ ನಡೆಸುವ ತುಣುಕುಗಳಿವೆ. Sachin vs Lata Civil War ಹೆಸರಿನ ವಿಡಿಯೋದಲ್ಲಿ ಕೊಹ್ಲಿ ಹಾಗೂ ಸಚಿನ್ ನಡುವೆ ಯಾರು ಶ್ರೇಷ್ಠ ಎಂಬ ಸಂಭಾಷಣೆಗಳಿವೆ.

ಈ ವಿಡಿಯೋದಲ್ಲಿ ಹಾಸ್ಯವೇ ಇಲ್ಲ, ಕೀಳು ಅಭಿರುಚಿಯ ವಿಡಿಯೋ ಎಂದು ಹಲವಾರು ಮಂದಿ ಪ್ರತಿಕ್ರಿಯಿಸಿದ್ದರೆ, ಮತ್ತೆ ಕೆಲವರು, ಭಾರತದಲ್ಲಿ ಇಂಥ ವಿಡಿಯೋ ನೋಡುವ ಮನಸ್ಥಿತಿ ಇನ್ನು ಬೆಳೆದಿಲ್ಲ ಎಂದಿದ್ದಾರೆ. ಒಟ್ಟಾರೆ ತನ್ಮಯ್ ಪರ ವಿರೋಧ ಚರ್ಚೆ ತಾರಕಕ್ಕೇರುತ್ತಿದೆ.[ದೀಪಿಕಾಗೆ ರಣವೀರ್ ಕಿಸ್ ಕೊಟ್ಟಿದ್ದಕ್ಕೆ ಎಫ್ ಐಆರ್]

-
-
-
-
-
ಸಚಿನ್ vs ಲತಾ ವಿಡಿಯೋ ವಿವಾದ, ತನ್ಮಯ್ ಗೆ ಪ್ರಾಣಭೀತಿ

ಸಚಿನ್ vs ಲತಾ ವಿಡಿಯೋ ವಿವಾದ, ತನ್ಮಯ್ ಗೆ ಪ್ರಾಣಭೀತಿ

-
-

ಬಾಲಿವುಡ್ ನಟ ಅನುಪಮ್ ಖೇರ್, ರಿತೇಶ್ ದೇಶ್ ಮುಖ್, ನಟಿ ಸೆಲಿನಾ ಜೇಟ್ಲಿ ಮುಂತಾದವರು ವಿಡಿಯೋ ಬಗ್ಗೆ ಕಿಡಿಕಾರಿದ್ದಾರೆ. ಅನುಪಮ್ ಅವರು ಟ್ವೀಟ್ ಮಾಡಿ, 'ನನಗೆ 9 ಬಾರಿ ಉತ್ತಮ ಹಾಸ್ಯ ನಟ ಎಂಬ ಪ್ರಶಸ್ತಿ ಲಭಿಸಿದೆ. ಅಷ್ಟೇ ಅಲ್ಲ ನನಗೆ ಉತ್ತಮ ಹಾಸ್ಯ ಪ್ರಜ್ಞೆ ಕೂಡ ಇದೆ. ಆದರೆ ಇಂಥ ಕೀಳು ಮಟ್ಟದ ಹಾಸ್ಯವನ್ನು ನಿರೀಕ್ಷಿಸಿರಲಿಲ್ಲ' ಎಂದಿದ್ದಾರೆ.

'ಮಹಾನ್ ಸಾಧಕರ ವಿಚಾರವಾಗಿ ನಿರ್ಮಿಸಿರುವ ಹಾಸ್ಯದಿಂದ ನನಗೆ ಆಘಾತವಾಗಿದೆ. ಇದು ಹಾಸ್ಯವಲ್ಲ ಅಗೌರವ' ಎಂದು ರಿತೇಶ್ ಟ್ವೀಟಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
AIB's Tanmay Bhat is in deep trouble after posting snapchat video which contains a mock conversation between two Bharat Ratna's Lata Mangeshkar and Sachin Tendulkar.
Please Wait while comments are loading...