ಬಾಲಿವುಡ್ ನಟನ ಮನೆಯಲ್ಲಿ ಕನ್ನಡಿಗನ ಸಾವು

ಮುಂಬೈ, ಮಾ.19: ಹಲವಾರು ಹಿಂದಿ ಚಿತ್ರಗಳಲ್ಲಿ ವಿಲನ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನ ಹಿರಿಯ ನಟ ರಂಜೀತ್ ಅವರ ಮನೆಯ ಈಜುಕೊಳದಲ್ಲಿ ಕರ್ನಾಟಕ ಮೂಲದ ಡ್ರೈವರ್ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ರಂಜೀತ್ ಅವರ ಮೇಲೆ ಕಾನೂನು ಕ್ರಮ ಜರುಗಿಸುವ ಸಾಧ್ಯತೆಯಿದೆ.

ನಟ ರಂಜೀತ್ ಅವರ ಸಿಮ್ಮಿಂಗ್ ಪೂಲ್ ನಲ್ಲಿ ಅವರ ಕಾರಿನ ಚಾಲಕ ಕರ್ನಾಟಕ ಮೂಲದ ನಾಗರಾಜ್ ಗೌಡ ಅವರ ಮೃತದೇಹ ಪತ್ತೆಯಾಗಿದೆ. ನಾಗರಾಜ್ ಅವರ ಸಾವು ಆಕಸ್ಮಿಕವೋ ಅಥವಾ ಆತ್ಮಹತ್ಯೆಯೋ ಇನ್ನೂ ತಿಳಿದು ಬಂದಿಲ್ಲ. ಮಂಗಳವಾರ ತಡರಾತ್ರಿ ಈ ಘಟನೆ ಬಗ್ಗೆ ತಿಳಿದು ನಮಗೆ ಬಂದಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

ಘಟನೆ ಬಗ್ಗೆ ಹೇಳಿಕೆ ನೀಡಿರುವ ನಟ ರಂಜೀತ್ 'ಕಳೆದ ರಾತ್ರಿ ಡ್ರೈವರ್ ನಾಗರಾಜ್ ಗೌಡ ಶುಗರ್ ಲೆವಲ್ ಬಗ್ಗೆ ವಿಚಾರಿಸಲು ನನ್ನ ಪತ್ನಿ ಆತನ ಬಳಿಗೆ ಹೋಗಿದ್ದಾಳೆ. ಆದರೆ, ಆತನ ದೇಹ ಈಜುಕೊಳದಲ್ಲಿ ಪತ್ತೆಯಾಗಿದೆ. ತಕ್ಷಣ ಆತನನ್ನು ಸಮೀಪದ ಆಸ್ಪತ್ರೆಗೆ ಸೇರಿದೆವು. ಆದರೆ, ಆಸ್ಪತ್ರೆಗೆ ಸೇರುವ ಮುನ್ನವೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು'

Actor Ranjeet's Driver Found Dead In His Swimming Pool

ಹಿರಿಯ ನಟ ರಂಜೀತ್ ಅವರ ಕಾರಿನ ಡ್ರೈವರ್ ಆಗಿ ನಾಗರಾಜ್ ಗೌಡ ಸುಮಾರು 30 ವರ್ಷಗಳಿಂದ ಜತೆಯಲ್ಲಿದ್ದರು. ಮರಣೋತ್ತರ ಪರೀಕ್ಷೆ ನಂತರ ದೇಹವನ್ನು ಕುಟುಂಬದವರಿಗೆ ನೀಡಲಾಗುತ್ತದೆ. ಮೃತರ ಅಂತ್ಯಕ್ರಿಯೆ ಕರ್ನಾಟಕದ ಅವರ ಊರಿನಲ್ಲಿ ಜರುಗಲಿದೆ. ರಂಜೀತ್ ಅವರ ಕುಟುಂಬದಲ್ಲಿ ಒಬ್ಬರಂತೆ ಇದ್ದರು. ಸಾವಿನ ಬಗ್ಗೆ ರಂಜೀತ್ ಕುಟುಂಬ ಕೂಡಾ ಏನು ತಿಳಿಯದ ಪರಿಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

44 ವರ್ಷ ವಯಸ್ಸಿನ ನಾಗರಾಜ್ ಗೌಡ ಅವರು ಹಲವು ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದರು. ಕೆಲ ಕಾಲದಿಂದ ಡಯಾಲೀಸಸ್ ಗೂ ಒಳಪಟ್ಟಿದ್ದರು. ಅನಾರೋಗ್ಯದ ಕಾರಣ ಕೆಲ ತಿಂಗಳಿನಿಂದ ವಿಶ್ರಾಂತಿ ಬಯಸಿದ್ದರು ಎಂದು ತಿಳಿದು ಬಂದಿದೆ. ನಾಗರಾಜ್ ಗೌಡ ಅವರ ಜತೆ ಅವರ ಸೋದರ ಹಾಗೂ ಪುತ್ರ ಕೂಡಾ ಮುಂಬೈನಲ್ಲಿ ನೆಲೆಸಿದ್ದರು. ಜುಹೂ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕಳೆದ ಕೆಲವು ತಿಂಗಳುಗಳ ಹಿಂದೆ ನಟ ಮೊಹ್ನಿಸ್ ಬೆಹ್ಲ್ ಅವರ ತೋಟದ ಮನೆ ಬಳಿ ಹಸುಳೆಯೊಂದರ ಶವ ಪತ್ತೆಯಾಗಿತ್ತು. ತಾಯಿ ದಿವಂಗತ ನಟಿ ನೂತನ್ ನೆನಪಿಗಾಗಿ ಈ ಫಾರ್ಮ್ ಹೌಸ್ ಮಾರದೆ ಇಟ್ಟುಕೊಂಡಿದ್ದ ಮೊಹ್ನೀಸ್ ಬೆಹ್ಲ್ ಅವರು ಈ ಶವ ಪತ್ತೆಯಾದ ಮೇಲೆ ಮನೆ ಮಾರಲು ಮುಂದಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+