ಚಿತೆ ಮೇಲೆ ಮಲಗಿದ ಆಕೆ ತಾನೇ ಬೆಂಕಿ ಕೊಟ್ಟು ಭಸ್ಮ

ಮುಂಬೈ, ನವೆಂಬರ್ 17: ಹೀಗೂ ಆಲೋಚನೆ ಮಾಡುವವರು ಇರ್ತಾರಾ? ಇದೇನು ಆತ್ಮಹತ್ಯೆಯೋ ಅಥವಾ ಅಂತ್ಯಕ್ರಿಯೆಯೋ ನೀವೇ ನಿರ್ಧರಿಸಿ. ಮಹಾರಾಷ್ಟ್ರ ಕೊಲ್ಲಾಪುರದ ಬಮಾನಿ ಎಂಬಲ್ಲಿ ತೊಂಬತ್ತು ವರ್ಷದ ವೃದ್ಧೆ ಕಲ್ಲವ್ವ ದಾಡು ಕಾಂಬ್ಳೆ ತಮ್ಮ ಮನೆಯಲ್ಲೇ ಚಿತೆ ಸಿದ್ಧಪಡಿಸಿಕೊಂಡು, ಅದರ ಮೇಲೆ ಮಲಗಿ ತಾವೇ ಬೆಂಕಿ ಕೊಟ್ಟಿದ್ದಾರೆ.

ಅವರ ಮಗ ವಿಠ್ಠಲ್ ವೃದ್ಧೆಯ ಮನೆ ಪಕ್ಕದಲ್ಲೇ ಇದ್ದಾರೆ. ಪ್ರತಿ ದಿನ ಅವರೇ ಊಟ-ತಿಂಡಿ ಕಳಿಸುತ್ತಿದ್ದರು. ಕಲ್ಲವ್ವ ಹೀಗೆ ಬೆಂಕಿ ಕೊಡುವ ಹಿಂದಿನ ರಾತ್ರಿ ಕೂಡ ಮೊಮ್ಮಗಳು ಬಂದು ಊಟ ನೀಡಿದ್ದಾಳೆ. ಮಾರನೇ ದಿನ ಆಕೆ ಹಾಲು ನೀಡಲು ತೆರಳಿದಾಗ ಬಾಗಿಲು ತೆರೆದಿಲ್ಲ. ಅನುಮಾನಗೊಂಡು ತನ್ನ ತಂದೆಯನ್ನು ಕರೆದಿದ್ದಾಳೆ.

90 year old woman builds pyre, burns self to death

ಅವರು ಬಂದು ನೋಡಿದಾಗ ಕಟ್ಟಿಗೆ, ಬೆರಣಿ ಬಳಸಿ ಚಿತೆ ಮಾಡಿಕೊಂಡು, ಬೆಂಕಿಗಾಹುತಿ ಆಗಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಒಂಟಿ ಜೀವನಕ್ಕೆ ಬೇಸತ್ತು ಇಂಥ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆಕಸ್ಮಿಕ ಸಾವು ಪ್ರಕರಣ ದಾಖಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+