ಪಾಲ್ಗಾರ್ ಸಾಧುಗಳ ಹತ್ಯೆ; 7 ಆರೋಪಿಗಳ ಬಂಧನ
ಮುಂಬೈ, ಮೇ 14: ಮಹಾರಾಷ್ಟ್ರದ ಪಾಲ್ಗಾರ್ ಸಾಧುಗಳ ಹತ್ಯೆಗೆ ಸಂಬಂಧಿಸಿದಂತೆ ಏಳು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಏಪ್ರಿಲ್ 16 ರಂದು ಪಾಲ್ಗಾರ್ ಎಂಬ ಹಳ್ಳಿಯಲ್ಲಿ ಇಬ್ಬರು ಸಾಧುಗಳನ್ನು ಹಾಗೂ ಅವರನ್ನು ಕರೆದುಕೊಂಡು ಬಂದಿದ್ದ ಕಾರ್ ಡ್ರೈವರ್‌ನನ್ನು ಮಕ್ಕಳ ಕಳ್ಳರೆಂದು ಭಾವಿಸಿ ಹೊಡೆದು ಕೊಂದಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.
ಅಕ್ರಮ ಪಡಿತರ ಸಾಗಾಟ: ಲಾರಿ ಸಹಿತ ಓರ್ವನ ಬಂಧನ
ಇಂದು ಆರು ವ್ಯಕ್ತಿಗಳು ಹಾಗೂ ಒಬ್ಬ ಬಾಲಕನನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಸಿಐಡಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅತುಲ್‌ಚಂದ್ರ ಕುಲಕರ್ಣಿ ಹೇಳಿದ್ದಾರೆ.
ಗಲಭೆ ಸಂದರ್ಭದಲ್ಲಿ ಸಾಧುಗಳಾದ ಮಹಾಂತ್ ಕಲ್ಪವೃಕ್ಷಗಿರಿ, ಸುಶೀಲ್ ಗಿರಿ ಮಹಾರಾಜ್ ಹಾಗೂ ಚಾಲಕ ನಿತೇಶ್ ಹತ್ಯೆಯಾಗಿದ್ದರು.