ಮುಂಬೈ ಮ್ಯಾರಥಾನ್ ವೇಳೆ 7 ಮಂದಿಗೆ ಹೃದಯಾಘಾತ, ಓರ್ವ ಮೃತ
ಮುಂಬೈ
, ಜನವರಿ 19: ಟಾಟಾ ಮುಂಬೈ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದ ಸ್ಪರ್ಧಾಳುಗಳ ಪೈಕಿ 7 ಮಂದಿಗೆ ಹೃದಯಾಘಾತವಾಗಿದೆ. ಈ ಪೈಕಿ ಓರ್ವ ವ್ಯಕ್ತಿ ಮೃತಪಟ್ಟಿದೆ ಎಂದು ಬಾಂಬೆ ಆಸ್ಪತ್ರೆಯ ವಕ್ತಾರರು ಹೇಳಿದ್ದಾರೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಮ್ಯಾರಥಾನ್
ಓಡುವಾಗಲೇ 64 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಗಜಾನನ್ ಮಲ್ಜಲ್ಕರ್ ಎಂದು ಗುರುತಿಸಲಾಗಿದೆ. ಕೆನರಾ ಬ್ಯಾಂಕಿನ ನಿವೃತ್ತ ಅಧಿಕಾರಿಯಾಗಿದ್ದ ಗಜಾನನ್ ಅವರು ನಲಾ ಸಪೋರಾ ನಿವಾಸಿಯಾಗಿದ್ದರು. ಗಜಾನನ್ ಅವರಿಗೆ ಹೃದಯಾಘಾತವಾದ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಲಿದೆ. ಆದರೆ, ಹೃದಯಾಘಾತವಾದ ತಕ್ಷಣವೇ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿ ತಿಳಿಸಿದ್ದಾರೆ. id='are-slot-2' class='oiad oi-axt oiadv'>












Click it and Unblock the Notifications