ಲಾಕ್‌ಡೌನ್ ಉಲ್ಲಂಘನೆ; ದೇಶದಲ್ಲೇ ಮೊದಲ ಶಿಕ್ಷೆ ಜಾರಿ!

ಮುಂಬೈ, ಏಪ್ರಿಲ್ 2: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೇರಲಾಗಿರುವ ಲಾಕ್‌ಡೌನ್ ಉಲ್ಲಂಘಿಸಿದ್ದ ಮಹಾರಾಷ್ಟ್ರದ ಮೂವರನ್ನು ಅಲ್ಲಿನ ಸರ್ಕಾರ ಜೈಲಿಗೆ ತಳ್ಳಿದೆ.ದೇಶದಲ್ಲಿ ಲಾಕ್ ಡೌನ್ ಉಲ್ಲಂಘಿಸಿದವರಿಗೆ ಶಿಕ್ಷೆಯಾಗುತ್ತಿರುವ ಮೊದಲ ಪ್ರಕರಣ ಇದಾಗಿದೆ.

ಲಾಕ್‌ಡೌನ್‌ ಉಲ್ಲಂಘಿಸಿ ಹೊರಗೆ ತಿರುಗಾಡುತ್ತಿದ್ದ ಮೂವರಿಗೆ ಮಹಾರಾಷ್ಟ್ರದ ಬಾರಾಮತಿ ಕೋರ್ಟ್ ಮೂರು ದಿನ ಜೈಲುಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಬಾರಾಮತಿ ಕೋರ್ಟ್ ನ್ಯಾಯಾಧೀಶ ಜೆ.ಜೆ.ಬಾಚುಲ್ಕರ್ ಅವರು, ಆರೋಪಿಗಳಾದ ಅಫ್ಜಲ್ ಅತ್ತಾರ್, ಚಂದ್ರಕುಮಾರ್ ಶಾ ಹಾಗೂ ಅಕ್ಷಯ್ ಶಾಗೆ ಮೂರು ದಿನ ಜೈಲುಶಿಕ್ಷೆ ವಿಧಿಸಿ ಪ್ರತಿಯೊಬ್ಬರಿಗೂ 500 ರೂಪಾಯಿ ದಂಡ ವಿಧಿಸಿದ್ದಾರೆ.

3 Persons Sent To Jail In Maharastra For Lockdown Violation

ಅನಾವಶ್ಯಕವಾಗಿ ಪುಣೆ ಜಿಲ್ಲೆಯ ಬಾರಾಮತಿ ನಗರದಲ್ಲಿ ತಿರುಗಾಡುತ್ತಿದ್ದ ಮೂವರು ಯುವಕರ ವಿರುದ್ಧ ಐಪಿಸಿ ಸೆಕ್ಷನ್ 188ರ ಪ್ರಕಾರ ದೂರು ದಾಖಲಿಸಲಾಗಿತ್ತು. ಅಪರಾಧ ದಂಡಸಂಹಿತೆ ಸೆಕ್ಷನ್ 144ರ ಪ್ರಕಾರ ಜಾರಿಗೊಳಿಸಿದ್ದ ಆದೇಶ ಹಾಗೂ ಲಾಕ್ ಡೌನ್ ಉಲ್ಲಂಘಿಸಿ ತಿರುಗಾಡಿದ್ದಕ್ಕೆ ಪ್ರಕರಣ ದಾಖಲಿಸಲಾಗಿತ್ತು.

ಆದೇಶ ಉಲ್ಲಂಘಿಸಿದ್ದಕ್ಕೆ ಕಡಿಮೆ ಪ್ರಮಾಣದ ಶಿಕ್ಷೆ ಕೋರ್ಟ್ ವಿಧಿಸಿದೆ. ಇನ್ನು ಮುಂದೆ ತಪ್ಪೆಸಗಿದರೆ ಆರೋಪಿಗಳ ಪಾಸ್ ಪೋರ್ಟ್ ಹಾಗೂ ಇತರ ಲೈಸೆನ್ಸ್ ಗಳನ್ನು ವಶಕ್ಕೆ ಪಡೆಯಲು ಅವಕಾಶ ಇರುತ್ತದೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+