ಮುಂಬೈನಲ್ಲಿ ಭಾರಿ ಮಳೆ: 22 ವಿಮಾನಗಳ ಮಾರ್ಗ ಬದಲಾವಣೆ

ಮುಂಬೈ, ಜೂನ್ 11: ದೆಹಲಿ, ಮುಂಬೈ ಸೇರಿದಂತೆ ಹಲವೆಡೆ ಮುಂಗಾರು ಪೂರ್ವ ಮಳೆ ಭರ್ಜರಿಯಾಗಿಯೇ ಬರುತ್ತಿದೆ. ಹೀಗಾಗಿ ಮುಂಬೈನಿಂದ 22 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಮುಂಬೈಗೆ ಬರುವ ವಿಮಾನಗಳು ದೆಹಲಿ, ಹೈದರಾಬಾದ್ ಹಾಗೂ ಅಹಮದಾಬಾದ್‌ಗೆ ತೆರಳುತ್ತಿದೆ. ಮುಂಬೈ ಏರ್ ಟ್ರಾಫಿಕ್ ಕಂಟ್ರೋಲ್ ನೀಡಿರುವ ಮಾಹಿತಿ ಪ್ರಕಾರ 16 ಡೊಮೆಸ್ಟಿಕ್ ಹಾಗೂ 6 ಅಂತಾರಾಷ್ಟ್ರೀಯ ವಿಮಾನದ ಮಾರ್ಗ ಬದಲಾಯಿಸಲಾಗಿದೆ.

ಇಷ್ಟು ದಿನ ಬಿಸಿಗಾಳಿಯಿಂದ ಬಳಲುತ್ತಿದ್ದ ಮುಂಬೈ ಜನತೆಗೆ ವರುಣರಾಯ ಸ್ವಲ್ಪ ತಂಪೆರೆದಿದ್ದಾನೆ. ರೈಲು, ರಸ್ತೆ ಎಲ್ಲವೂ ನೀರಿನಿಂದ ತುಂಬಿದು ಎಲ್ಲಿ ನೋಡಿದರೂ ಟ್ರಾಫಿಕ್ ಗೋಚರಿಸುತ್ತಿದೆ. ಸಬರ್ಬನ್ ರೈಲು ಸಂಚಾರ ಸ್ಥಗಿತಗೊಂಡಿದೆ.

22 flights diverted from Mumbai airport due to heavy rain

ಬಾಂದ್ರಾದಲ್ಲಿ ಹಾಲ್ಟ್ ಆಗಿದ್ದ ಹಲವು ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಕೆಲವು ರೈಲುಗಳು ತಾಂತ್ರಿಕ ದೋಷದಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಕೇಂದ್ರ ರೈಲ್ವೆಯಲ್ಲಿ ರೈಲುಗಳು ಎಂದಿನಂತೆ ಚಲಿಸುತ್ತಿವೆ.

ಮಲಾಡ್, ಕುರ್ಲಾ, ಘಾಟ್‌ಕೋಪರ್, ವಿಕ್ರೋಲಿ ಸುತ್ತಮುತ್ತ ವಿಪರೀತ ಮಳೆಯಾಗುತ್ತಿದೆ. ಇದು ಈ ವರ್ಷದ ಮೊದಲ ಮುಂಗಾರು ಪೂರ್ವ ಮಳೆಯಾಗಿದೆ. ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಮುಂಬೈನ ಅಗ್ನಿ ಶಾಮಕ ಸಿಬ್ಬಂದಿಗಳು ತಯಾರಿ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+