ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ರೈಲು ಸ್ಫೋಟ: 12 ಜನ ದೋಷಿ, ಒಬ್ಬ ಖುಲಾಸೆ

|
Google Oneindia Kannada News

ಮುಂಬೈ, ಸೆಪ್ಟೆಂಬರ್. 10: 2006ರಲ್ಲಿ ಸಂಭವಿಸಿದ ಮುಂಬೈ ಉಪನಗರ ಸರಣಿ ರೈಲು(7/11) ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ವಿಶೇಷ ಮೋಕಾ(ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ) ನ್ಯಾಯಾಲಯ 12 ಜನರನ್ನು ದೋಷಿ ಎಂದು ಶುಕ್ರವಾರ ತೀರ್ಪು ನೀಡಿದ್ದು ಒಬ್ಬನನ್ನು ಖುಲಾಸೆ ಮಾಡಿದೆ.

2006ರಲ್ಲಿ 7 ರೈಲುಗಳನ್ನು ಆರ್ ಡಿಎಕ್ಸ್ ಬಾಂಬ್ ಇಟ್ಟು ಸ್ಫೋಟಗೊಳಿಸಿದ ಪ್ರಕರಣದ ತೀರ್ಪು ಸುಮಾರು 9 ವರ್ಷಗಳ ನಂತರ ಹೊರಬಿದ್ದಿದೆ. 13 ಮಂದಿ ಆರೋಪಿಗಳಲ್ಲಿ 12 ಮಂದಿ ವಿರುದ್ಧ ಆರೋಪ ಸಾಬೀತಾಗಿದೆ.[ಅವರು (ಕರಾಚಿ) ಮನೇಲಿದ್ದಾರೆ, ಮಲಗಿದ್ದಾರೆ : ದಾವೂದ್ ಹೆಂಡತಿ]

india

ಕಮಲ್ ಅಹ್ಮದ್ ಅನ್ಸಾರಿ (37) ತನ್ವೀರ್ ಅಹ್ಮದ್ ಅನ್ಸಾರಿ (37) ಮೊಹಮ್ಮದ್ ಫೈಸಲ್ ಶೇಕ್(36) ಸಿದ್ದಿಕಿ (30), ಮೊಹಮ್ಮದ್ ಮಜೀದ್ ಶಫಿ (32), ಶೇಕ್ ಆಲಂ ಶೇಕ್(41), ಮೊಹಮ್ಮದ್ ಸಾಜಿದ್ ಅನ್ಸಾರಿ (34), ಮುಝಾಮಿಲ್ ಶೇಕ್ (27), ಸೋಹೈಲ್ ಮೆಹಮೂದ್ ಶೇಕ್(43), ಜಮೀರ್ ಅಹ್ಮದ್ ಶೇಕ್ (36), ನವೀದ್ ಹುಸೈನ್ ಖಾನ್ (30) ಮತ್ತು ಅಸೀಫ್ ಖಾನ್ (38) ರನ್ನು ದೋಷಿ ಎಂದು ನ್ಯಾಯಾಲಯ ತಿಳಿಸಿದೆ. ಅಬ್ದುಲ್ ವಾಹಿದ್ ಶೇಕ್ ನನ್ನು ಪ್ರಕರಣದಿಂದ ಖುಲಾಸೆ ಮಾಡಲಾಗಿದೆ.

ಜು.11ರಂದು ಮುಂಬೈ ಉಪನಗರ ರೈಲಿನಲ್ಲಿ ಸರಣಿ ಸ್ಫೋಟ ಸಂಭವಿಸಿತ್ತು. ಸುಮಾರು 188 ಜನರು ಸಾವನ್ನಪ್ಪಿದ್ದರು. ಖಾರ್‌ರೋಡ್‌ -ಸಾಂತಾಕ್ರೂಜ್‌ ಮತ್ತು ಬೊರಿವಲಿ ಮಧ್ಯೆ ವಿವಿಧೆಡೆ 7 ಆರ್‌ ಡಿಎಕ್ಸ್‌ಗಳು ಸ್ಫೋಟಿಸಿ 829 ಮಂದಿ ಗಾಯಗೊಂಡಿದ್ದರು.

English summary
The Special MCOCA court on Friday, Sept 11 convicted 12 out of the 13 accused in the 2006 serial train bombing case at Mumbai. While 12 persons were held guilty of conspiring and carrying out the blasts, one person Abdul Wahid Shaikh was acquitted in the case. The special MCOCA court judge, Yatin Shinde delivered the verdict today in a case that spanned over for 9 years. The court is yet to deliver the verdict on sentencing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X