ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಕೆಲವೇ ನಿಮಿಷಗಳ ಅಂತರದಲ್ಲಿ 2 ಬಾರಿ ಭೂಕಂಪ

|
Google Oneindia Kannada News

ಮುಂಬೈ, ಜುಲೈ 25: ಮಹಾರಾಷ್ಟ್ರದಲ್ಲಿ ಕೆಲವೇ ನಿಮಿಷಗಳ ಅಂತರದಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ಕೇವಲ 12 ನಿಮಿಷಗಳ ಅಂತರದಲ್ಲಿ ಮಹಾರಾಷ್ಟ್ರದ ಎರಡು ಕಡೆ ಭೂಕಂಪ ಸಂಭವಿಸಿದೆ. ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಭೂಕಂಪನದ ಅನುಭವವಾಗಿದೆ.

ಮೊದಲ ಭೂಕಂಪನವು 1.03 ಗಂಟೆಗೆ ನಡೆದಿದ್ದು, ರಿಕ್ಟರ್‌ ಮಾಪಕದಲ್ಲಿ 3.8ರಷ್ಟು ತೀವ್ರವಾಗಿತ್ತು. ಎರಡನೇಯ ಭೂಕಂಪವು 1.15ರ ಸುಮಾರಿಗೆ ನಡೆದಿತ್ತು. ಇದು ಕೂಡಾ ಲಘು ಭೂಕಂಪವೇ ಆಗಿದ್ದು, ಇದರ ತೀವ್ರತೆ 3.6ರಷ್ಟು ರಿಕ್ಟರ್‌ ಮಾಪಕದಲ್ಲಿ ದಾಖಲಾಗಿದೆ.

2018ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ದುರಂತಗಳ ಪಟ್ಟಿ 2018ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ದುರಂತಗಳ ಪಟ್ಟಿ

ಈ ಪ್ರದೇಶದಲ್ಲಿ 2018ರಿಂದ ಪದೇ ಪದೇ ಭೂಕಂಪನದ ಅನುಭವವಾಗುತ್ತಿದೆ. ಭೂಕಂಪನದ ಮೂಲ ದುಧಲ್ವಾಡಿ ಗ್ರಾಮದಲ್ಲಿದೆ ಎಂದು ವರದಿಯಾಗಿದೆ. ರಿಕ್ಟರ್ ಮಾಪಕದಲ್ಲಿ ಮೊದಲು 3.8 ಹಾಗೂ 3.6 ಮ್ಯಾಗ್ನಿಟ್ಯೂಟ್ ದಾಖಲಾಗಿದೆ.

2 earthquakes strike Maharashtra on Thursady

ಕಳೆದ ಒಂದು ವಾರದ ಹಿಂದಷ್ಟೇ ಅರುಣಾಚಲ ಪ್ರದೇಶದಲ್ಲಿ ಕೂಡ ಎರಡು ಬಾರಿ ಭೂಕಂಪ ಸಂಭವಿಸಿತ್ತು. 24 ಗಂಟೆಗಳಲ್ಲಿ ಅರುಣಾಚಲ ಪ್ರದೇಶದಲ್ಲಿ ಎರಡನೇ ಬಾರಿಗೆ ಭೂಮಿ ಕಂಪಿಸಿತ್ತು. ಭೂಕಂಪ ತೀವ್ರತೆ ರಿಕ್ಟರ್ ಮಾಪನದಲ್ಲಿ 5.5 ತೀವ್ರತೆ ದಾಖಲಾಗಿದೆ.

ಈಶಾನ್ಯ ರಾಜ್ಯದ ಅರುಣಾಚಲ ಪ್ರದೇಶದಲ್ಲಿ ಶನಿವಾರ ಬೆಳಗಿನ ಜಾವ 4.24ಕ್ಕೆ 5.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಪ್ರಾಥಮಿಕ ವರದಿ ಪ್ರಕಾರ ಯಾವುದೇ ಸಾವು, ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಭೂಕಂಪನದ ಕೇಂದ್ರ ಬಿಂದು ಅರುಣಾಚಲ ಪ್ರದೇಶದ ಪೂರ್ವ ಕಮೆಂಗ್ ಭಾಗದಲ್ಲಿನ 64ಕಿಲೋ ಮೀಟರ್ ಆಳದಲ್ಲಿ ಸಂಭವಿಸಿರುವುದಾಗಿ ಭೂಗರ್ಭಶಾಸ್ತ್ರ ತಜ್ಞರು ತಿಳಿಸಿದ್ದಾರೆ ಎಂದು ವರದಿ ಹೇಳಿದೆ.

ವರದಿ ಪ್ರಕಾರ, ರಿಕ್ಟರ್ ಮಾಪಕದಲ್ಲಿ 5,5ರಷ್ಟು ತೀವ್ರತೆ ದಾಖಲಾಗಿದೆ. ಅಲ್ಲದೇ ಗುವಾಹಟಿ ಮತ್ತು ಅರುಣಾಚಲ ಪ್ರದೇಶದ ಕೆಲವು ಭಾಗದಲ್ಲಿ ಭೂಕಂಪನ ಸಂಭವಿಸಿದೆ ಎಂದು ತಿಳಿಸಿದೆ.

ಶುಕ್ರವಾರವೂ ಕೂಡ ಇದೇ ಪ್ರದೇಶದಲ್ಲಿ ಭೂಮಿ ಕಂಪಿಸಿತ್ತು ಭೂಕಂಪ ತೀವ್ರತೆ 5.5 ವರದಿಯಾಗಿತ್ತು. ಅಸ್ಸಾಂ ಅರುಣಾಚಲ ಪ್ರದೇಶದಲ್ಲಿ ಪ್ರವಾಹವೂ ಕೂಡ ಇದ್ದು ಅಲ್ಲಿನ ಜನತೆ ತೊಂದರೆಗೀಡಾಗಿದ್ದಾರೆ. ಒಂದೆಡೆ ಪ್ರವಾಹ, ನೀರು ಬೇರೆ ಪ್ರದೇಶಗಳಿಗೆ ಸ್ಥಳಾಂತರ ಅಲ್ಲಿನ ಜನತೆ ಜೀವನ ಅಕ್ಷರಶಃ ನರಕವಾಗಿದೆ.

English summary
2 earthquakes strike Maharashtra on Thursady, The first quake with a magnitude of 3.8 on the Richter scale hit the region at 1:03 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X