Shravani Subramanya Serial: ಶ್ರಾವಣಿ ಸುಬ್ರಮಣ್ಯ: ಒಂದಾದ ತಂದೆ - ಮಗಳು; ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದ ಸುಬ್ಬು
Shravani Subramanya Serial: ಕನ್ನಡದ ಪ್ರಮುಖ ಸೀರಿಯಲ್‌ಗಳಲ್ಲಿ ಒಂದಾಗಿರುವ ಶ್ರಾವಣಿ ಸುಬ್ರಮಣ್ಯ ರೋಚಕ ತಿರುವು ಪಡೆದುಕೊಂಡಿದ್ದು, ಶ್ರಾವಣಿಯ ಬಹು ದಿನಗಳ ಕನಸು ನನಸಾಗಿದೆ. ಕೊನೆಗೂ ತಂದೆ - ಮಗಳು ಒಂದಾಗಿದ್ದು, ಶ್ರಾವಣಿಯೇ ತನ್ನ ಮಗಳು ಎಂದು ವೀರೇಂದ್ರ ದೇಸಾಯಿ ಅವರು ಒಪ್ಪಿಕೊಂಡಿದ್ದಾರೆ. ಈ ಮೂಲಕ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನ ಹೊಸ ಎಪಿಸೋಡ್‌ಗಳು ಭಾವನಾತ್ಮಕ ಕ್ಷಣಗಳಿಗೆ ಕಾರಣವಾಗಿದೆ.
ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನಲ್ಲಿ ಕೊನೆಗೂ ಸತ್ಯದ ಅನಾವರಣವಾಗಿದ್ದು, ತಂದೆ - ಮಗಳು ಒಂದಾಗುವ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಿದೆ. ವೀರು ಅವರೇ ನನ್ನ ತಂದೆ ಎಂದು ಶ್ರಾವಣಿ ಬಲವಾಗಿ ನಂಬಿದ್ದರು, ತಂದೆಯೇ ವಿಯಜಯಾಂಬಿಕೆಯ ಕುತಂತ್ರಕ್ಕೆ ಸಿಲುಕಿದ್ದರೂ ಶ್ರಾವಣಿ ನಂಬಿಕೆ ಕಳೆದುಕೊಂಡಿರಲಿಲ್ಲ.

ಇದೀಗ ಕೊನೆಗೂ ತಂದೆ - ಮಗಳು ಒಂದಾಗುವ ಅಪರೂಪದ ದೃಶ್ಯಗಳು, ಅತ್ಯಂತ ಭಾವನಾತ್ಮಕವಾಗಿ ಮೂಡಿ ಬಂದಿವೆ. ವಿಜಯಾಂಬಿಕಾಳ ಎಲ್ಲ ಸುಳ್ಳುಗಳ ಮುಖವಾಡವು ಕಳಚಿ ಬಿದ್ದಂತೆ ಆಗಿದೆ. ತಂದೆ - ಮಗಳು ಒಂದಾಗುವುದಕ್ಕೆ ಸುಬ್ರಮಣ್ಯ ಮನೆಯವರು ಸಾಕ್ಷಿಯಾಗಿದ್ದಾರೆ. ಪರೀಕ್ಷೆಯಲ್ಲಿ ಮೊದಲ ಬಾರಿಯೇ ಪಾಸ್ ಆಗಿರುವ ಸಂತೋಷವನ್ನು ಶ್ರಾವಣಿ ಹಂಚಿಕೊಂಡಿದ್ದಾಳೆ. ವೀರೇಂದ್ರ ದೇಸಾಯಿ ಸರ್ ಅವರ ಮಗಳು ಮೊದಲ ಅಟ್ಮೆಂಟ್‌ನಲ್ಲಿಯೇ ಪಾಸಾಗಿ ಬಿಟ್ಟಳು ಅಂತ ಹೇಳಿರುವ ದೃಶ್ಯಗಳಿವೆ.
ಪರೀಕ್ಷೆಯಲ್ಲಿ ಪಾಸಾಗಿರುವ ಸಂತೋಷವನ್ನು ಮನೆಯಲ್ಲಿ ಶ್ರಾವಣಿ ಹಂಚಿಕೊಂಡಿದ್ದಾಳೆ. ನೀವು ನನ್ನನ್ನು ಮಗಳಲ್ಲ ಅಂತ ಹೇಳಿದರೂ, ನಾನು ಅಪ್ಪನ ಹೆಸರನ್ನು ಉಳಿಸಿದ್ದೀನಿ ಎನ್ನುವ ಸಂತೋಷ ನನಗಾಗ್ತಿದೆ ಅಂತ ಶ್ರಾವಣಿ ಹೇಳಿದ್ದಾಳೆ. ಮುಂದುವರಿದು ಆದರೂ ಇದೊಂದೇ ಒಂದು ಸಾರಿ ಸಹಿಸಿಕೊಂಡು ನಾನು ಕೊಡುವ ಸಿಹಿ ತಿಂತಿರಾ ಅಪ್ಪ ಎಂದು ಶ್ರಾವಣಿ ಮುದ್ದಾಗಿ ಕೇಳಿದ್ದಾಳೆ.
ಇದಕ್ಕೆ ಸಚಿವ, ಶ್ರಾವಣಿ ತಂದೆ ವೀರೇಂದ್ರ ದೇಸಾಯಿ ಸಾಕಮ್ಮಾ.. ನಿನ್ನ ಬಾಯಿಂದ ಪದೇ ಪದೇ ನೀನು ನನ್ನ ಮಗಳಲ್ಲ... ಮಗಳಲ್ಲ ಅಂತ ಹೇಳಬೇಡಮ್ಮಾ.. ನಾನು ಸಾರಿ ಸಾರಿ ಹೇಳುತ್ತಿದ್ದೇನೆ. ನಿನಗೆ ಜನ್ಮಕೊಟ್ಟ ತಂದೆ ನಾನು. ನೀನು ನನ್ನ ರಕ್ತ ಹಂಚಿಕೊಂಡು ಹುಟ್ಟಿರುವ ಮಗಳು ಅಂತ ವೀರೇಂದ್ರ ದೇಸಾಯಿ ಹೇಳಿದ್ದಾರೆ. ಈ ಸೀನ್‌ನಲ್ಲಿ ಶ್ರಾವಣಿ ಹಾಗೂ ವೀರೇಂದ್ರ ದೇಸಾಯಿ ಅವರ ಕಣ್ಣಿನಲ್ಲಿ ಕಣ್ಣೀರು ಜಿನುಗುತ್ತಿರುವುದು ಇದೆ. ಈ ಸಂತೋಷ ಹಾಗೂ ಭಾವನಾತ್ಮಕ ಕ್ಷಣಗಳು ಪ್ರೇಕ್ಷಕರಲ್ಲಿ ಪುಳಕವನ್ನುಂಟು ಮಾಡಿದೆ. ಕೊನೆಗೂ ಶ್ರಾವಣಿ ಹಾಗೂ ವೀರೇಂದ್ರ ದೇಸಾಯಿ ಅವರು ಒಂದಾಗಿರುವುದು, ಮಗಳು ಎಂದು ಮನಃಪೂರ್ವಕವಾಗಿ ಒಪ್ಪಿಕೊಂಡಿರುವುದು ಹೊಸ ಹಾಗೂ ರೋಚಕ ತಿರುವನ್ನು ಪಡೆದುಕೊಂಡಿದೆ.
Shravani Subramanya Serial: ವಿಜಯಾಂಬಿಕಾಳ ಕುತಂತ್ರಗಳು ಬಯಲು
ಇನ್ನು ಇತ್ತೀಚಿನ ಎಪಿಸೋಡ್‌ಗಳಲ್ಲಿ ವೀರೇಂದ್ರ ದೇಸಾಯಿ ಅವರ ಅಕ್ಕ ವಿಜಯಾಂಬಿಕಾಳ ಒಂದೊಂದೇ ಸುಳ್ಳು - ಕುತಂತ್ರಗಳು ಬಯಲಾಗುತ್ತಿರುವಂತೆ ತೋರಿಸಲಾಗಿದೆ. ಶ್ರಾವಣಿ - ವೀರೇಂದ್ರ ದೇಸಾಯಿ ಅವರ ಮಗಳು ಅಲ್ಲ ಎಂದು ವಿಜಯಾಂಬಿಕೆ ನಡೆಸಿದ್ದ ಪಿತೂರಿ ಈಚೆಗೆ ಬಹಿರಂಗವಾಗಿತ್ತು. ಅಲ್ಲದೆ ವೀರುವಿನಿಂದ ಪತ್ನಿ ನಂದಿನಿ, ಪುತ್ರಿ ಶ್ರಾವಣಿ ಹಾಗೂ ಸ್ನೇಹಿತ ಪೃಥ್ವಿಯನ್ನು ದೂರ ಮಾಡಿದ್ದ ಸತ್ಯಗಳು ಒಂದೊಂದೇ ಅನಾವರಣಗೊಳ್ಳುತ್ತಿವೆ. ಸತ್ಯ ಬಹಿರಂಗವಾದ ಬೆನ್ನಲ್ಲೇ ವಿಜಯಾಂಬಿಕಾಳನ್ನು ವೀರು ಮನೆಯಿಂದ ಹೊರ ಹಾಕುವುದಕ್ಕೆ ಮುಂದಾಗಿದ್ದ, ಆದರೆ ಆಸ್ತಿಯನ್ನೆಲ್ಲವನ್ನೂ ವಿಜಯಾಂಬಿಕಾ ತನ್ನ ಹೆಸರಿಗೆ ಬರೆಸಿಕೊಂಡಿರುವುದರಿಂದ ಇದೀಗ ವೀರೇಂದ್ರ ದೇಸಾಯಿ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ವೀರೇಂದ್ರ ದೇಸಾಯಿ ಅವರು ಇದೀಗ ಸುಬ್ರಮಣ್ಯ ಅವರ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.












Click it and Unblock the Notifications