Viral Mango Recipes: ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿರುವ ಈ 7 ಮಾವಿನಹಣ್ಣಿನ ರೆಸಿಪಿಗಳು: ನೀವೂ ಒಮ್ಮೆ ಟ್ರೈ ಮಾಡಿ
ಪ್ರಸ್ತುತ ನೀವು ಇನ್‌ಸ್ಟಾಗ್ರಾಮ್ (Instagram) ನೋಡುತ್ತಿದ್ದರೆ, ಒಂದಂತೂ ಸ್ಪಷ್ಟವಾಗಿ ಗೋಚರಿಸುತ್ತದೆ; ಅದೇ ಮಾವಿನಹಣ್ಣಿನ ರೆಸಿಪಿಗಳು (Mango Recipes). ತ್ವರಿತವಾಗಿ ತಯಾರಿಸಬಹುದಾದ ಸಿಹಿತಿಂಡಿಗಳಿಂದ ಹಿಡಿದು ವಿಭಿನ್ನವಾದ ಸ್ಟ್ರೀಟ್-ಸ್ಟೈಲ್ ತಿನಿಸುಗಳವರೆಗೆ, ವೈರಲ್ ಆಗುತ್ತಿರುವ ಮಾವಿನಹಣ್ಣಿನ ರೆಸಿಪಿಗಳು ಈ ಬೇಸಿಗೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿವೆ. ಫುಡ್ ಕ್ರಿಯೇಟರ್‌ಗಳು ಹಣ್ಣುಗಳ ರಾಜ ಮಾವಿನಹಣ್ಣನ್ನು ಬಳಸಿ ಪಾನೀಯಗಳಿಂದ ಹಿಡಿದು ಫ್ಯೂಷನ್ ಸ್ನ್ಯಾಕ್ಸ್‌ಗಳವರೆಗೆ ಎಲ್ಲವನ್ನೂ ತಯಾರಿಸುತ್ತಿದ್ದಾರೆ.
ನೀವು ಮಾವಿನಹಣ್ಣನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಇಷ್ಟಪಡುತ್ತಿರಲಿ ಅಥವಾ ಸ್ವಲ್ಪ ವಿಭಿನ್ನವಾಗಿ ಟ್ರೈ ಮಾಡಲು ಬಯಸುತ್ತಿರಲಿ, ಆನ್‌ಲೈನ್‌ನಲ್ಲಿ ಹೊಸ ಐಡಿಯಾಗಳಿಗೆ ಯಾವುದೇ ಕೊರತೆಯಿಲ್ಲ. ಜನರು ಪದೇ ಪದೇ ಪ್ರಯತ್ನಿಸುತ್ತಿರುವ ಮತ್ತು ಶೇರ್ ಮಾಡುತ್ತಿರುವ ಈ 7 ವೈರಲ್ ಮಾವಿನಹಣ್ಣಿನ ರೆಸಿಪಿಗಳ ವಿವರ ಇಲ್ಲಿದೆ:

ಮ್ಯಾಂಗೋ ಸ್ಟಿಕಿ ರೈಸ್: ಥಾಯ್ ಸಿಹಿತಿಂಡಿ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಿಹಿಯಾದ ಮಾವಿನಹಣ್ಣಿನ ಜೊತೆಗೆ ಕೆನೆಭರಿತ ತೆಂಗಿನಕಾಯಿ ಮತ್ತು ಸ್ಟಿಕಿ ರೈಸ್ ಸೇರಿರುವ ಈ ಡಿಶ್, ಬೇಸಿಗೆಯ ಬಾಯಾರಿಕೆಗೆ ಹೇಳಿ ಮಾಡಿಸಿದಂತಿದೆ. ವೀಡಿಯೊಗಳಲ್ಲಿ ಇದು ನೋಡುಗರ ಬಾಯಲ್ಲಿ ನೀರೂರಿಸುತ್ತದೆ.
ಮ್ಯಾಂಗೋ ಲಸ್ಸಿ ಟ್ವಿಸ್ಟ್‌ನೊಂದಿಗೆ (Mango Lassi with a Twist): ಸಾಂಪ್ರದಾಯಿಕ ಲಸ್ಸಿ ಈಗ ಹೊಸ ರೂಪದಲ್ಲಿ ಮರಳಿದೆ. ಚಿಯಾ ಬೀಜಗಳು, ಫ್ಲೇವರ್ಡ್ ಮೊಸರು ಅಥವಾ ಫ್ರೋಜನ್ ಆವೃತ್ತಿಗಳೊಂದಿಗೆ ಇದು ಮತ್ತಷ್ಟು ರುಚಿಯಾಗಿದೆ. ಇದನ್ನು ತಯಾರಿಸುವುದು ಸುಲಭ ಹಾಗೂ ಇದು ದೇಹಕ್ಕೆ ತಂಪು ನೀಡುತ್ತದೆ.
ಮ್ಯಾಂಗೋ ಸಾಗೋ ಡೆಸರ್ಟ್ (Mango Sago Dessert): ಸಾಬುದಾನ, ತೆಂಗಿನ ಹಾಲು ಮತ್ತು ಮಾವಿನಹಣ್ಣಿನ ಪಲ್ಪ್ ಬಳಸಿ ತಯಾರಿಸುವ ಈ ತಂಪಾದ ಸಿಹಿತಿಂಡಿ, ವೀಡಿಯೊಗಳಲ್ಲಿ ತನ್ನ ವಿಭಿನ್ನ ಲೇಯರ್‌ಗಳಿಂದಾಗಿ ಭಾರಿ ಟ್ರೆಂಡ್ ಆಗುತ್ತಿದೆ.
ಮ್ಯಾಂಗೋ ಐಸ್ ಕ್ರೀಮ್: ಯಾವುದೇ ವಿಶೇಷ ಉಪಕರಣಗಳ ಅಗತ್ಯವಿಲ್ಲದೆ, ಕೇವಲ ಮಾವಿನಹಣ್ಣಿನ ಪಲ್ಪ್, ಕ್ರೀಮ್ ಮತ್ತು ಫ್ರೀಜರ್ ಬಳಸಿ ಇದನ್ನು ಸುಲಭವಾಗಿ ಮಾಡಬಹುದು. ಕಡಿಮೆ ಶ್ರಮದಲ್ಲಿ ಹೆಚ್ಚು ರುಚಿ ನೀಡುವ ಕಾರಣಕ್ಕಾಗಿಯೇ ಇದು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಯೊಬ್ಬರ ಫೇವರಿಟ್ ಆಗಿದೆ.
ಖಾರವಾದ ಮ್ಯಾಂಗೋ ಸಲಾಡ್ (Spicy Mango Salad): ವೈರಲ್ ಆಗುತ್ತಿರುವ ಎಲ್ಲಾ ರೆಸಿಪಿಗಳು ಸಿಹಿಯಾಗಿಲ್ಲ. ಖಾರದ ಪುಡಿ, ನಿಂಬೆರಸ ಮತ್ತು ಮಸಾಲೆಗಳನ್ನು ಬೆರೆಸಿದ ಮಾವಿನಹಣ್ಣಿನ ಸಲಾಡ್, ಬಿಸಿಲಿನ ಬೇಗೆಗೆ ತಕ್ಕಂತಹ ಸ್ಟ್ರೀಟ್-ಸ್ಟೈಲ್ ರುಚಿಯನ್ನು ನೀಡಿ ಗಮನ ಸೆಳೆಯುತ್ತಿದೆ.
ಮ್ಯಾಂಗೋ ಸ್ಯಾಂಡ್‌ವಿಚ್: ಕೇಳಲು ತುಂಬಾ ಸರಳ ಎನಿಸಿದರೂ, ಬ್ರೆಡ್ ಅಥವಾ ಕ್ರೀಮ್ ಜೊತೆಗೆ ಮಾವಿನಹಣ್ಣಿನ ತುಂಡುಗಳನ್ನು ಸೇರಿಸಿ ಮಾಡುವ ಈ ಸ್ಯಾಂಡ್‌ವಿಚ್ ಆನ್‌ಲೈನ್‌ನಲ್ಲಿ ಭಾರಿ ಜನಪ್ರಿಯತೆ ಗಳಿಸಿದೆ. ಇದು ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ.
ಮ್ಯಾಂಗೋ ಮೊಮೊಸ್: ದೆಹಲಿಯ ಬೀದಿ ಬದಿಯ ವ್ಯಾಪಾರಿಯೊಬ್ಬರು ಪರಿಚಯಿಸಿದ ಈ ಮ್ಯಾಂಗೋ ಮೊಮೊಸ್ ಇಂಟರ್‌ನೆಟ್‌ನಲ್ಲಿ ಪರ-ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದೆ. ಇದು ವಿಚಿತ್ರ ಸಂಯೋಜನೆ ಎಂದು ಹಲವರು ಕರೆದರೂ, ಕುತೂಹಲದಿಂದ ಹೆಚ್ಚಿನವರು ವೀಕ್ಷಿಸುತ್ತಿದ್ದಾರೆ.
ಮಾವಿನಹಣ್ಣುಗಳು ನೈಸರ್ಗಿಕವಾಗಿ ಸಿಹಿಯಾಗಿರುತ್ತವೆ ಮತ್ತು ಎಲ್ಲಾ ರೀತಿಯ ರೆಸಿಪಿಗಳಿಗೆ ಹೊಂದಿಕೊಳ್ಳುತ್ತವೆ. ಈ ಕಾರಣದಿಂದಲೇ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ, ನೋಡಲು ಆಕರ್ಷಕವಾಗಿರುವ ಈ ರೆಸಿಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೀಕ್ಷಣೆ ಪಡೆಯುತ್ತಿವೆ.














Click it and Unblock the Notifications